ಮಹೇಶ್ ಬಾಬು ನಿರ್ದೇಶನದಲ್ಲಿ ಚಿತ್ರರಂಗಕ್ಕೆ ಕೃತಿಕಾ ಎಂಟ್ರಿ

ಚಿತ್ರರಂಗಕ್ಕೆ ಸದಾ ಹೊಸ ನಾಯಕ ನಟಿಯರನ್ನು ಕರೆತರುವ ನಿರ್ದೇಶಕ ಮಹೇಶ್ ಬಾಬು ಈಗ ಮತ್ತೊಬ್ಬ ನಾಯಕ ನಟಿಯನ್ನು ಪರಿಚಯಿಸಲು ಸಿದ್ಧತೆ ನಡೆಸಿದ್ದಾರೆ.

Published: 14th March 2019 12:00 PM  |   Last Updated: 14th March 2019 02:09 AM   |  A+A-


Krithika makes her debut in Mahesh Babu’s directorial

ಮಹೇಶ್ ಬಾಬು ನಿರ್ದೇಶನದಲ್ಲಿ ಚಿತ್ರರಂಗಕ್ಕೆ ಕೃತಿಕಾ ಎಂಟ್ರಿ

Posted By : SBV SBV
Source : Online Desk
ಚಿತ್ರರಂಗಕ್ಕೆ ಸದಾ  ಹೊಸ ನಾಯಕ ನಟಿಯರನ್ನು ಕರೆತರುವ ನಿರ್ದೇಶಕ ಮಹೇಶ್ ಬಾಬು ಈಗ ಮತ್ತೊಬ್ಬ ನಾಯಕ ನಟಿಯನ್ನು ಪರಿಚಯಿಸಲು ಸಿದ್ಧತೆ ನಡೆಸಿದ್ದಾರೆ. 

ಐಂದ್ರಿತಾ ರೇ, ಕೃತಿ ಕರಬಂದ, ಆಶಿಕಾ ರಂಗನಾಥ್ ಅವರನ್ನು ಈಗಾಗಲೇ ಸ್ಯಾಂಡಲ್ ವುಡ್ ಗೆ ಪರಿಚಯಿಸಿರುವ ನಿರ್ದೇಶಕ ಮಹೇಶ್ ಬಾಬು, ಈಗ ಕೃತಿಕಾ ಅವರನ್ನು ತಮ್ಮ ಮುಂದಿನ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಪರಿಚಯಿಸಲು ಮಹೇಶ್ ಬಾಬು ಸಿದ್ಧಗೊಂಡಿದ್ದಾರೆ. 

ಹೊಸ ನಾಯಕ ನಟ ಸುಘೋಷ್ ಗೆ ಜೋಡಿಯಾಗಿ ಕೃತಿಕಾ ನಟಿಸಲಿದ್ದಾರೆ. ಸುಘೋಷ್ ಅವರನ್ನೂ ಮಹೇಶ್ ಸ್ಯಾಂಡಲ್ ವುಡ್ ಗೆ ಪರಿಚಯಿಸುತ್ತಿದ್ದಾರೆ. ಹೊಸ ಚಿತ್ರಕ್ಕೆ ಇನ್ನಷ್ಟೇ ಶೀರ್ಷಿಕೆ ನೀಡಬೇಕಿದೆ. 

ಸ್ಯಾಂಡಲ್ ವುಡ್ ಗೆ ಎಂಟ್ರಿ ನೀಡುತ್ತಿರುವ ಕೃತಿಕಾ ಹಲವು ನೃತ್ಯ ಪ್ರಕಾರಗಳನ್ನು ಕಲಿತಿದ್ದಾರೆ. ಕೃತಿಕಾ ಅವರ ಸಂಬಂಧಿ ಅಮ್ಮಾನಿ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಖ್ಯಾತ ನಟಿಯಾಗಿದ್ದು ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. 
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp