ಫಣಿಯಮ್ಮ ಖ್ಯಾತಿಯ ಹಿರಿಯ ನಟಿ ಎಲ್.ವಿ. ಶಾರದ ನಿಧನ

ಫಣಿಯಮ್ಮ ಖ್ಯಾತಿಯ ಹಿರಿಯ ನಟಿ ಎಲ್ ವಿ ಶಾರದ ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ. ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಶಾರದ ಶಂಕರ ಆಸ್ಪತ್ರೆಯಲ್ಲಿ ಬೆಳಗ್ಗೆ 7.30ಕ್ಕೆ ...

Published: 21st March 2019 12:00 PM  |   Last Updated: 21st March 2019 12:26 PM   |  A+A-


L V Sharada

ಎಲ್,ವಿ ಶಾರದ

Posted By : SD SD
Source : Online Desk
ಫಣಿಯಮ್ಮ ಖ್ಯಾತಿಯ ಹಿರಿಯ ನಟಿ ಎಲ್ ವಿ ಶಾರದ ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ. ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದ  ಶಾರದ ಶಂಕರ ಆಸ್ಪತ್ರೆಯಲ್ಲಿ ಬೆಳಗ್ಗೆ 7.30ಕ್ಕೆ ಕೊನೆಯುಸಿರೆಳೆದಿದ್ದಾರೆ.

ವಂಶ ವೃಕ್ಷ,  ಆದಿ ಶಂಕರಾಚಾರ್ಯ, ಮತ್ತು 1983 ರಲ್ಲಿ ತೆರೆಕಂಡ ಫಣಿಯಮ್ಮ ಸಿನಿಮಾಗಳಲ್ಲಿ ನಟಿಸಿದ್ದರು.

ಬಿ.ವಿ ಕಾರಂತ್ ನಿರ್ದೇಶನದ ವಂಶವೃಕ್ಷ ಸಿನಿಮಾದಲ್ಲಿ, ಶಾರದಮ್ಮ ನಟನೆಗೆ  ರಾಷ್ಟ್ರ ಪ್ರಶಸ್ತಿ ದೊರಕಿತ್ತು,  ಗಿರೀಶ್ ಕಾರ್ನಾಡ್ ಮತ್ತು ಜಿ.ಎಲ್ ಆಯ್ಯರ್ ಅವರ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ್ದರು.

ಫಣಿಯಮ್ಮ ಸಿನಿಮಾ ವಿಧವೆಯ ಜೀವನದ ಕುರಿತಾಗಿದ್ದರೂ ವಿಭಿನ್ನ ಕಥಾ ಹಂದರವನ್ನು ಹೊಂದಿದ್ದ ಈ ಎರಡು ಚಿತ್ರಗಳಲ್ಲಿ ಪ್ರಭಾವಶಾಲಿ ಅಭಿನಯ ನೀಡಿ ಪಾತ್ರಗಳನ್ನು ಜೀವಂತವಾಗಿಸಿದ್ದಾರೆ. ಎಸ್.ಎಲ್.ಭೈರಪ್ಪನವರ ವಂಶವೃಕ್ಷ ಕಾದಂಬರಿ ಆಧಾರಿತ ಅದೇ ಹೆಸರಿನ ಚಿತ್ರದಲ್ಲಿ ವೈಧವ್ಯವನ್ನು ಒಪ್ಪಿಕೊಂಡು ಹೊಸ ಸಾಧ್ಯತೆಗಳತ್ತ ಚಿಂತನೆ ನಡೆಸುವ ಕಾತ್ಯಾಯಿನಿಯಾಗಿ ಅಭಿನಯಿಸಿದ ರೀತಿ ಅವಿಸ್ಮರಣೀಯ. 
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp