ದತ್ತು ಪಡೆದ ಸರ್ಕಾರಿ ಶಾಲೆ ಮಕ್ಕಳೊಂದಿಗೆ ಹೋಳಿ ಆಚರಿಸಿದ ಪ್ರಣೀತಾ

ಬಹು ಭಾಷಾ ನಟಿ ಪ್ರಣೀತಾ ಸುಭಾಷ್ ಹಾಸನದಲ್ಲಿ ದತ್ತು ಪಡೆದಿದ್ದ ಸರ್ಕಾರಿ ಶಾಲೆಯ ಮಕ್ಕಳೊಂದಿಗೆ ಹೋಳಿ ಹಬ್ಬ ಆಚರಿಸಿ, ಸಂಭ್ರಮಿಸಿದ್ದಾರೆ.

Published: 22nd March 2019 12:00 PM  |   Last Updated: 22nd March 2019 04:29 AM   |  A+A-


Pranitha

ಪ್ರಣೀತಾ

Posted By : ABN ABN
Source : Online Desk
ಬೆಂಗಳೂರು: ಬಹು ಭಾಷಾ ನಟಿ ಪ್ರಣೀತಾ ಸುಭಾಷ್ ಹಾಸನದಲ್ಲಿ ದತ್ತು ಪಡೆದಿದ್ದ ಸರ್ಕಾರಿ ಶಾಲೆಯ ಮಕ್ಕಳೊಂದಿಗೆ ಹೋಳಿ ಹಬ್ಬ ಆಚರಿಸಿ, ಸಂಭ್ರಮಿಸಿದ್ದಾರೆ.

ನಟನೆಯ ಜೊತೆಗೆ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಪ್ರಣೀತಾ ಸುಭಾಷ್,  ಶಾಲೆಯನ್ನು ದತ್ತು ಪಡೆದ ಸಂದರ್ಭದಲ್ಲಿ ಹೋಳಿ ಹಬ್ಬಕ್ಕೆ ಬರುವುದಾಗಿ ಮಕ್ಕಳಿಗೆ ಭರವಸೆ ನೀಡಿದ್ದರಂತೆ. ಅದರಂತೆ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಹೋಳಿ ಆಚರಿಸಿದ್ದಾರೆ.

ಶಾಲಾ ಅಭಿವೃದ್ಧಿ ತಂಡದಿಂದ ದತ್ತು ಪಡೆದಿರುವ ಶಾಲೆಯನ್ನು ಬಣ್ಣಗಳಿಂದ ಆಲಂಕರಿಸುವ ಮೂಲಕ ಹೋಳಿ ಹಬ್ಬವನ್ನು ಸಂತೋಷದಿಂದ ಆಚರಿಸಿದ್ದಾಗಿ ಅವರು ಹೇಳಿಕೊಂಡಿದ್ದಾರೆ.ಗ್ಲಾಮರ್ ಜಗತ್ತಿನಿಂದ ಹೊರಬಂದು ಇಂಥ ಕೆಲಸಗಳನ್ನು ತೊಡಗಿಸಿಕೊಳ್ಳುವುದು ಒಂದು ರೀತಿಯ ತೃಪ್ತಿ ನೀಡುತ್ತದೆ  ಎಂದು ಅವರು ಟ್ವೀಟ್  ಸಂದೇಶದಲ್ಲಿ ಹೇಳಿದ್ದಾರೆ.
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp