ಸುದೀಪ್ ನಟನೆಯ ಫೈಲ್ವಾನ್, ಕೋಟಿಗೊಬ್ಬ-3 ಸಿನಿಮಾ ರಿಲೀಸ್ ಗಳ ಡೇಟ್ ಫಿಕ್ಸ್!

ಸುದೀಪ್ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದು ಕಾದಿದೆ, ಕಿಚ್ಚ ನಟಿಸಿರುವ ಫೈಲ್ವಾನ್ ಸಿನಿಮಾ ರಿಲೀಸ್ ಡೇಟ್ ಫಿಕ್ಸ್ ಆಗಿದೆ....
ಸುದೀಪ್
ಸುದೀಪ್
ಸುದೀಪ್ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದು ಕಾದಿದೆ, ಕಿಚ್ಚ ನಟಿಸಿರುವ ಫೈಲ್ವಾನ್ ಸಿನಿಮಾ ರಿಲೀಸ್ ಡೇಟ್ ಫಿಕ್ಸ್ ಆಗಿದೆ.
ಕೃಷ್ಣ ನಿರ್ದೇಶನದ ಫೈಲ್ವಾನ್ ಸಿನಿಮಾ ಆಗಸ್ಟ್  8 ರಂದು ರಿಲೀಸ್ ಆಗದಲಿದೆ. ಫೈಲ್ವಾನ್ ಸಿವಿಮಾ ಹಿಂದಿ, ಕನ್ನಡ,  ಬೋಜ್ ಪುರಿ, ಮತ್ತು ಮರಾಠಿ ಭಾಷೆಗಳಲ್ಲಿ ರಿಲೀಸ್ ಆಗಲಿದೆ,  ಸುನೀಲ್ ಶೆಟ್ಟಿ ನಟಿಸಿದ್ದಾರೆ. 
ಇನ್ನೂ ಕೋಟಿಗೊಬ್ಬ3 ಸಿನಿಮಾ  ನವೆಂಬರ್ 1 ರ ಕನ್ನಡ ರಾಜ್ಯೋತ್ಸವದಂದು ಬಿಡುಗಡೆಯಾಗಲಿದೆ, ಶಿವಕಾರ್ತಿಕ್ ನಿರ್ದೇಶನದ ಸಿನಿಮಾಗೆ ಸೂರಪ್ಪಬಾಬು ನಿರ್ಮಿಸಿದ್ದಾರೆ, ಮೂರನೇ ಶೆಡ್ಯೂಲ್ ಶೂಟಿಂಗ್ ಮುಗಿದಿದೆ, ಈಗಾಗಲೇ ಶೇ.60 ರಷ್ಟು ಶೂಟಿಂಗ್ ಮುಗಿದಿದೆ, ಈ ಸಿನಿಮಾಗೆ ಸುದೀಪ್ ಕಥೆ ಬರೆದಿದ್ದಾರೆ,ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. 
ಇನ್ನೂ ಸುದೀಪ್ ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್ ನಟನೆಯ ದಬಾಂಗ್-3 ಸಿನಿಮಾದ ಶೂಟಿಂಗ್ ನಲ್ಲಿ ಶನಿವಾರದಿಂದ ಪಾಲ್ಗೋಳ್ಳಲಿದ್ದಾರೆ,  ಡಿಸೆಂಬರ್ 20 ರಂದು ಸಿನಿಮಾ ರಿಲೀಸ್ ಆಗಲಿದೆ, ಈ ಸಿನಿಮಾವನ್ನು ಪ್ರಭುದೇವ ನಿರ್ದೇಶಿಸಿದ್ದಾರೆ.
ಇನ್ನೂ ಸೈ ರಾ ನರಸಿಂಹ ರೆಡ್ಡಿ ಎಂಬ ಐತಿಹಾಸಿಕ ಸಿನಿಮಾದಲ್ಲಿ ಕೂಡ ನಟಿಸುತ್ತಿದ್ದಾರೆ, ಇದರಲ್ಲಿ ಚಿರಂಜೀವಿ ಅಭಿನಯಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com