ಕೊಡಗು: ಹರ್ಷಿಕಾ ಪೂಣಚ್ಚಾಗೆ ಕಿರುಕುಳ ಆರೋಪ; ಇಬ್ಬರು ಯುವಕರ ಬಂಧನ

ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂಣಚ್ಚಾ ಅವರಿಗೆ ಕಿರಕುಳ ನೀಡಿದ ಆರೋಪದ ಮೇಲೆ ಮಡಿಕೇರಿ ಪೊಲೀಸರು ಶುಕ್ರವಾರ ಇಬ್ಬರು ಯುವಕರನ್ನು ಬಂಧಿಸಿದ್ದಾರೆ.
ಹರ್ಷಿಕಾ ಪೂಣಚ್ಚಾ
ಹರ್ಷಿಕಾ ಪೂಣಚ್ಚಾ
ಕೊಡಗು: ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂಣಚ್ಚಾ ಅವರಿಗೆ ಕಿರಕುಳ ನೀಡಿದ ಆರೋಪದ ಮೇಲೆ ಮಡಿಕೇರಿ ಪೊಲೀಸರು ಶುಕ್ರವಾರ ಇಬ್ಬರು ಯುವಕರನ್ನು ಬಂಧಿಸಿದ್ದಾರೆ.
ಹರ್ಷಿಕಾ ಪೂಣಚ್ಚಾ ಅವರು ನಿನ್ನೆ ಮಡಿಕೇರಿಯ ನೀರುಕೊಲ್ಲಿ ಗ್ರಾಮದ ಬಳಿ ಇರುವ ಖಾಸಗಿ ರೆಸಾರ್ಟ್​ನಲ್ಲಿ ನಡೆದ ತಮ್ಮ ಸಂಬಂಧಿಕರ ಮದುವೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಬನ್ಸಿ ಪೊನ್ನಪ್ಪ ಹಾಗೂ ಬಿಪಿನ್ ದೇವಯ್ಯ ಎಂಬ ಇಬ್ಬರು ಯುವಕರು ಹರ್ಷಿಕಾರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ನಟಿ ದೂರಿದ್ದಾರೆ.
ಈ ಸಂಬಂಧ ಬಿಗ್​ಬಾಸ್​ ಖ್ಯಾತಿಯ ನಟ ಭುವನ್ ಪೊನ್ನಣ್ಣ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರಿನ ಆಧಾರದ ಮೇಲೆ ಐಪಿಸಿ 232, 242, 354, 506 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಗಳಾದ ಬನ್ಸಿ ಪೊನ್ನಪ್ಪ ಹಾಗೂ ಬಿಪಿನ್ ದೇವಯ್ಯ ಅವರನ್ನು ಇಂದು ಬಂಧಿಸಿ ಮಡಿಕೇರಿ ಜೆಎಂಎಫ್​ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಹರ್ಷಿಕಾ ಪೂಣಚ್ಚಾ ಅವರು ಸಹ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com