ರಾಬರ್ಟ್ ಚಿತ್ರದಲ್ಲಿ ದರ್ಶನ್ ಗೆ ತೆಲುಗಿನ ಜಗಪತಿ ಬಾಬು ವಿಲನ್!

ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಚಿತ್ರದ ಚಿತ್ರೀಕರಣ ಶುರುವಾಗಿದ್ದು ಈ ಮದ್ಯೆ ಚಿತ್ರತಂಡದಿಂದ ಪ್ರಮುಖ ಸುದ್ದಿಯೊಂದು ಹೊರಬಿದ್ದಿದೆ.
ಜಗಪತಿ ಬಾಬು-ದರ್ಶನ್
ಜಗಪತಿ ಬಾಬು-ದರ್ಶನ್
ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಚಿತ್ರದ ಚಿತ್ರೀಕರಣ ಶುರುವಾಗಿದ್ದು ಈ ಮದ್ಯೆ ಚಿತ್ರತಂಡದಿಂದ ಪ್ರಮುಖ ಸುದ್ದಿಯೊಂದು ಹೊರಬಿದ್ದಿದೆ.
ಹೌದು, ದರ್ಶನ್ ಗೆ ಎದುರಾಳಿಯಾಗಿ ತೆಲುಗಿನ ಖ್ಯಾತ ವಿಲನ್ ಜಗಪತಿ ಬಾಬು ನಟಿಸಲಿದ್ದಾರೆ. ಸದ್ಯ ಜಗಪತಿ ಬಾಬು ಅವರಿಗೆ ದಕ್ಷಿಣ ಭಾರತದಲ್ಲಿ ಸಾಕಷ್ಟು ಬೇಡಿಕೆ ಇದ್ದು ಈ ಖಳನಾಯಕನನ್ನು ತಮ್ಮ ಚಿತ್ರಕ್ಕೆ ಕರೆತರುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ. 
ದರ್ಶನ್ ಮತ್ತು ಜಗಪತಿ ಬಾಬು ಅವರು ಇದೇ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡುತ್ತಿದ್ದು ಚಿತ್ರಕ್ಕೆ ಉಮಾಪತಿ ಬಂಡವಾಳ ಹೂಡುತ್ತಿದ್ದಾರೆ. 
ಮೊದಲ ಹಂತವಾಗಿ 45 ದಿನಗಳ ಚಿತ್ರೀಕರಣದ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಇನ್ನು ಶೂಟಿಂಗ್ ನಲ್ಲಿ ಮೊಬೈಲ್ ಅನ್ನು ಬ್ಯಾನ್ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com