ದರ್ಶನ್ ಸಹಾಯದಿಂದ ಮರು ಹುಟ್ಟು ಪಡೆದ ಹಿರಿಯ ನಟ ಭರತ್

ಇತ್ತೀಚಿಗೆ ಹಿರಿಯ ನಟ ಭರತ್ ಗೆ ನಟ ದರ್ಶನ್ ಸಹಾಯ ಮಾಡಿದ್ದು ಇದೀಗ ಸುದ್ದಿಯಾಗಿದೆ. ಅದೂ ಸಹ ಅವರೇ ಸ್ವತಃ ಹೇಳಿಕೊಂಡಾಗ ಅವರ ಮಾನವೀಯ ಮನಸ್ಥಿತಿ, ಸಹಾಯಹಸ್ತದ ಗುಣ ಬೆಳಕಿಗೆ ಬಂದಿದೆ.

Published: 13th May 2019 12:00 PM  |   Last Updated: 14th May 2019 11:42 AM   |  A+A-


Collection Photo

ಸಂಗ್ರಹ ಚಿತ್ರ

Posted By : ABN ABN
Source : Online Desk
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಭಾಷೆ ಒರಟಾದರೂ ಮನಸ್ಸು ಮೃದು. ಕಷ್ಟದಲ್ಲಿರುವವರಿಗೆ  ಸಹಾಯ ಮಾಡುವ ಗುಣ. ಆದರೆ, ಅವರು ಯಾರಿಗೂ ಸಹಾಯ ಮಾಡಿದರೂ ತಾವಾಗೇ ಎಂದೂ ಹೇಳಿಕೊಳ್ಳುವುದಿಲ್ಲ. ಅವರು ಮಾಡಿದಂತಹ ನೆರವು ಆಗಾಗ ದರ್ಶನ್ ಅವರ ದೊಡ್ಡತನವನ್ನು  ಹೊರಜಗತ್ತಿಗೆ ಅನಾವರಣ ಮಾಡುತ್ತಿವೆ.

ಹೀಗೆ ಇತ್ತೀಚಿಗೆ ಹಿರಿಯ ನಟ ಭರತ್ ಗೆ  ನಟ ದರ್ಶನ್ ಸಹಾಯ ಮಾಡಿದ್ದು ಇದೀಗ ಸುದ್ದಿಯಾಗಿದೆ. ಅದೂ ಸಹ ಅವರೇ ಸ್ವತಃ ಹೇಳಿಕೊಂಡಾಗ ಅವರ ಮಾನವೀಯ ಮನಸ್ಥಿತಿ, ಸಹಾಯಹಸ್ತದ ಗುಣ ಬೆಳಕಿಗೆ ಬಂದಿದೆ.

ಸುಮಾರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಖಳನಟ ಭರತ್‍ ತಲೆಗೆ ಸ್ಟ್ರೋಕ್‍ ಆದ ಪರಿಣಾಮ ಕಳೆದ ಎಂಟು ವರ್ಷಗಳಿಂದ ಹಣವಿಲ್ಲದೆ ಅವರು ತೀವ್ರ ತೊಂದರೆ ಅನುಭವಿಸಿದ್ದರಂತೆ. ಹಾಸಿಗೆ ಹಿಡಿದ ಸಂದರ್ಭದಲ್ಲಿ ತಾವೇ ಸಹಾಯಕ್ಕಾಗಿ ಕೈ ಚಾಚಿದರೂ ಯಾರೂ ಕೂಡಾ ಸಹಾಯ ಮಾಡರಿಲಿಲ್ಲವಂತೆ. ವಿಷಯ ತಿಳಿದ ದರ್ಶನ್‍, ಯಾರಿಗೂ ತಿಳಿಯದಂತೆ ತಮ್ಮ ಆಪ್ತರನ್ನು ಕಳುಹಿಸಿ ಚಿತ್ತೂರಿನಲ್ಲಿ ಭರತ್‍ ಗೆ ಚಿಕಿತ್ಸೆ ಕೊಡಿಸಿದ್ದಾರೆ.

ಇತ್ತೀಚೆಗೆ  ಮರು ಹಟ್ಟು ಪಡೆದಿರುವ ಭರತ್‍ ಮತ್ತೆ 'ಜಲ್ಲಿಕಟ್ಟು' ಎಂಬ ಚಿತ್ರದ ಮೂಲಕ ಖಳನಟರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇದೀಗ ಸಂಪೂರ್ಣವಾಗಿ ಗುಣಮುಖರಾಗಿರುವ ನಟ ಭರತ್ ಅವರು ತಮಗೆ ಸಹಾಯ ಮಾಡಿದ ದರ್ಶನ್ ಅವರನ್ನು ಭೇಟಿಯಾಗಿ ಧನ್ಯವಾದ ಹೇಳಬೇಕೆಂಬುದು ಭರತ್ ಅವರ ಆಸೆಯಾಗಿದೆ.

ಒಟ್ಟಾರೇ,  ನಟ ದರ್ಶನ್ ಅವರು ಅದೆಷ್ಟು ಜನರಿಗೆ ಸಹಾಯ ಮಾಡಿದ್ದಾರೋ ಏನೋ! ಆದರೆ, ಅವರು ಯಾರಿಗೂ ಗೊತ್ತಾಗದಂತೆ ಎಂದೋ ಮಾಡಿರುವ ಸಹಾಯ ಇಂದು ಸಮಾಜಕ್ಕೆ ಗೊತ್ತಾಗುತ್ತಿದೆ.
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp