ಹಲ್ಲು ಕೂಡ ಉಜ್ಜದೇ ಡಬ್ಬಿಂಗ್ ಸ್ಟುಡಿಯೋಗೆ ಧೀರೇನ್ ರಾಜ್ ಬಂದಿದ್ದೇಕೆ?

ಅನಿಲ್ ಕುಮಾರ್ ನಿರ್ದೇಶನದ ದಾರಿತಪ್ಪಿದ ಮಗ ಸಿನಿಮಾ ಡಬ್ಬಿಂಗ್ ಗಾಗಿ ನಟ ರಾಮ್ ಕುಮಾರ್ ಪುತ್ರ ಧಿರೇನ್ ರಾಜ್ ಕುಮಾರ್ ಹಲ್ಲು ಕೂಡ ಉಜ್ಜದೇ ಬೆಳಗ್ಗಿನ ಜಾವವೇ ...
ಧಿರೇನ್ ರಾಮ್
ಧಿರೇನ್ ರಾಮ್
ಅನಿಲ್ ಕುಮಾರ್ ನಿರ್ದೇಶನದ  ದಾರಿತಪ್ಪಿದ ಮಗ ಸಿನಿಮಾ ಡಬ್ಬಿಂಗ್ ಗಾಗಿ ನಟ ರಾಮ್ ಕುಮಾರ್ ಪುತ್ರ ಧಿರೇನ್ ರಾಜ್ ಕುಮಾರ್ ಹಲ್ಲು ಕೂಡ ಉಜ್ಜದೇ  ಬೆಳಗ್ಗಿನ ಜಾವವೇ ಸ್ಟುಡಿಯೋಗೆ ಬಂದು ಕೂತಿದ್ದು ಎಲ್ಲರಿಗೂ ಅಚ್ಚರಿ ತಂದಿತ್ತು. 
ಹಲ್ಲುಜ್ಜದೇ ಸ್ಟುಡಿಯೋಗೆ ಬಂದಿದ್ದ ಧಿರೇನ್ ರಾಮ್ ಯಾರೋಬ್ಬರ ಜೊತೆಗೂ ಮಾತನಾಡಿಲ್ಲ, ಇದಕ್ಕೆ ಕಾರಣ ಏನೆಂದರೇ ಸಿನಿಮಾಗಾಗಿ ಬೇಸ್ ವಾಯ್ಸ್ ಬೇಕಿತ್ತು, ಈ ಕಾರಣಕ್ಕಾಗಿ ಕಳೆದ ಒಂದು ವಾರದಿಂದ  ಧಿರೇನ್ ವಾಯ್ಸ್ ಎಕ್ಸರ್ ಸೈಸ್ ಮಾಡುತ್ತಿದ್ದಾರೆ, ಹೀಗಾಗಿ ನಿರ್ದೇಶಕರ ಅಣತಿಯಂತೆ ಬೆಳಗ್ಗೆ ಆರು ಗಂಟೆಗೆ ಹಲ್ಲನ್ನು ಉಜ್ಜದೇ ಯಾರ ಜೊತೆಗೂ ಮಾತನಾಡದೇ ಸ್ಟುಡಿಯೋಗೆ ಬಂದಿದ್ದರೆಂದು ನಿರ್ದೇಶಕ ಅನಿಲ್ ಕುಮಾರ್ ತಿಳಿಸಿದ್ದಾರೆ.
ಇನ್ನೂ ರಾಜಸ್ತಾನಕ್ಕೆ ಶೂಟಿಂಗ್ ಗೆ  ತೆರಳಿದ್ದ ನಟಿ ಮಾನ್ವಿತಾ ಹರೀಶ್ ಬೆಂಗಳೂರಿಗೆ ಆಗಮಿಸಿದ್ದಾರೆತ. ಶೀಘ್ರವೇ ಮಾನ್ವಿತಾ ಕೂಡ ಡಬ್ಬಿಂಗ್ ನಲ್ಲಿ ಭಾಗವಹಿಸಲಿದ್ದಾರೆ, ಧಿರೇನ್ ಮೊದಲ ಸಿನಿಮಾ ಇದಾಗಿದೆ, ಜಯಣ್ಣ ಕಂಬೈನ್ಸ್ ನಿರ್ಮಾಣ ಮಾಡುತ್ತಿರುವ ಸಿನಿಮಾ ಇದಾಗಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com