ಕೌಟುಂಬಿಕ ಕಲಹದಿಂದ ಸಿನಿಮಾರಂಗದಲ್ಲಿ ಮೂಲೆಗುಂಪಾಗಿದ್ದ ದುನಿಯಾ ವಿಜಯ್ ಗೆ ಕಿಚ್ಚ ಸುದೀಪ್ ಸಂದೇಶ!

ವೈಯಕ್ತಿಕ ಜೀವನದಲ್ಲಿ ನಡೆದ ಕಹಿ ಘಟನೆಯಿಂದ ಸ್ಯಾಂಡಲ್ ವುಡ್ ನಲ್ಲಿ ಒಂದು ರೀತಿಯಲ್ಲಿ ಮೂಲೆಗುಂಪಾಗಿರುವ ದುನಿಯಾ ವಿಜಯ್ ಸಲಗ ಸಿನಿಮಾ ಮೂಲಕ ಇದೀಗ ...

Published: 15th May 2019 12:00 PM  |   Last Updated: 15th May 2019 12:31 PM   |  A+A-


Sudeep and duniya vijay

ಸುದೀಪ್ ಮತ್ತು ದುನಿಯಾ ವಿಜಯ್

Posted By : SD SD
Source : The New Indian Express
ವೈಯಕ್ತಿಕ ಜೀವನದಲ್ಲಿ ನಡೆದ ಕಹಿ ಘಟನೆಯಿಂದ ಸ್ಯಾಂಡಲ್ ವುಡ್ ನಲ್ಲಿ ಒಂದು ರೀತಿಯಲ್ಲಿ ಮೂಲೆಗುಂಪಾಗಿರುವ ದುನಿಯಾ ವಿಜಯ್ ಸಲಗ ಸಿನಿಮಾ ಮೂಲಕ ಇದೀಗ ನಿರ್ದೇಶಕನಾಗುತ್ತಿದ್ದಾರೆ.

ದುನಿಯಾ ವಿಜಯ್ ಹೊಸ ಪ್ರಯತ್ನಕ್ಕೆ ನಟ ಕಿಚ್ಚ ಸುದೀಪ್ ಬೆನ್ನು ತಟ್ಟಿದ್ದಾರೆ. ಒಬ್ಬ ನಟ ನಿರ್ದೇಶಕನಾಗಿ ಮೇಲೇರುವುದು ನಿಜಕ್ಕೂ ಉತ್ತಮ ಬೆಳವಣಿಗೆ. ಇದು ತಮ್ಮನ್ನು ತಾವೇ ಕಂಡುಕೊಳ್ಳಲು ಇರುವ ದಾರಿ. ಈ ಹೊಸ ಜವಾಬ್ಧಾರಿ, ಒತ್ತಡಗಳನ್ನು ಚೆನ್ನಾಗಿ ನಿಭಾಯಿಸಿ. ನಿಮಗೆ ನನ್ನ ಶುಭ ಹಾರೈಕೆಗಳು ಎಂದು ಸುದೀಪ್ ಪ್ರೀತಿಯಿಂದ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.
 
ಸುದೀಪ್ ಸಂದೇಶ ನೋಡಿ ಭಾವುಕರಾಗಿರುವ ವಿಜಯ್ ನಿಮ್ಮ ಬೆಂಬಲಕ್ಕೆ ನನ್ನ ಹೃದಯಪೂರ್ವಕ ಧನ್ಯವಾದಗಳು. ನಿಮ್ಮಂಥ ಚಿತ್ರರಂಗದ ಹಿರಿಯರು ನನಗೆ ಬೆಂಬಲ ಕೋರುವುದರಿಂದ ನನಗೆ ದೇವರೂ ನನ್ನ ಕರ್ತವ್ಯ ನಿಭಾಯಿಸಲು ಶಕ್ತಿ ಕೊಡಬಹುದು ಎಂದು ನಂಬಿದ್ದೇನೆ ಎಂದು ವಿಜಯ್ ಪ್ರತಿಕ್ರಿಯಿಸಿದ್ದಾರೆ.

ವಿಜಯ್ ನಿರ್ದೇಶಿಸುತ್ತಿರುವ ಸಲಗ ಸಿನಿಮಾವಾಗಿದೆ, ಸಿನಿಮಾಗೆ ಚರಣ್ ರಾಜ್ ಸಂಗೀತ ನೀಡಿದ್ದಾರೆ, ಕೆ.ಪಿ ಶ್ರೀಕಾಂತ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಜೂನ್ 6 ರಂದು ಸಿನಿಮಾ ಮುಹೂರ್ಥ ನಡೆಯಲಿದೆ. 
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp