'ಸಂಹಾರಿಣಿ'ಯಾದ ಪೂಜಾ ಗಾಂಧಿ

ಮುಂಗಾರು ಮಳೆ ಬೆಡಗಿ ಪೂಜಾ ಗಾಂಧಿ ಆಕ್ಷನ್ ಚಿತ್ರದೊಂದಿಗೆ ಮತ್ತೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ...

Published: 15th May 2019 12:00 PM  |   Last Updated: 15th May 2019 12:21 PM   |  A+A-


Pooja Gandhi in Samharini

ಸಂಹಾರಿಣಿ ಚಿತ್ರದಲ್ಲಿ ಪೂಜಾ ಗಾಂಧಿ

Posted By : SUD SUD
Source : The New Indian Express
ಮುಂಗಾರು ಮಳೆ ಬೆಡಗಿ ಪೂಜಾ ಗಾಂಧಿ ಆಕ್ಷನ್ ಚಿತ್ರದೊಂದಿಗೆ ಮತ್ತೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಕೆ.ಜವಾಹರ್ ಅವರ ಚೊಚ್ಚಲ ನಿರ್ದೇಶನದ ಸಂಹಾರಿಣಿ ಚಿತ್ರದ ಶೂಟಿಂಗ್ ನ್ನು ಸದ್ದಿಲ್ಲದೆ ಪೂಜಾ ಗಾಂಧಿ ಮುಗಿಸಿದ್ದಾರೆ.

ನಟ ಅಥವಾ ನಟಿ ಕೆಲ ಸಮಯದವರೆಗೆ ಚಿತ್ರಗಳನ್ನು ಮಾಡಿಲ್ಲವೆಂದರೆ ಅವರು ಸಿನಿಮಾ ಕ್ಷೇತ್ರ ಬಿಟ್ಟು ಹೋಗಿದ್ದಾರೆಂದರ್ಥವಲ್ಲ. ದಂಡುಪಾಳ್ಯ ನಂತರ ಕೆಲ ಸಮಯಗಳವರೆಗೆ ಸುಮ್ಮನಾಗಿದ್ದೆ. ಬಂದ ಚಿತ್ರಗಳನ್ನು ಒಪ್ಪಿಕೊಳ್ಳಲಿಲ್ಲ.

ಮೂರು ತಿಂಗಳ ಹಿಂದೆ ಸಂಹಾರಿಣಿ ಚಿತ್ರತಂಡದವರು ಬಂದು ಚಿತ್ರದ ಕಥೆ ಹೇಳಿದಾಗ ನನಗೆ ಹಿಡಿಸಿ ಒಪ್ಪಿಕೊಂಡೆ. ಇದರಲ್ಲಿ ನನ್ನ ಪಾತ್ರ ವಿಭಿನ್ನವಾಗಿದೆ ಎಂದರು ಪೂಜಾ ಗಾಂಧಿ.

ವಿನೋದ್ ಶಬ್ರೀಶ್ ಚಿತ್ರದ ನಿರ್ಮಾಪಕರು. ಚಿತ್ರದಲ್ಲಿ ಸ್ನೇಹ ಮತ್ತು ಹಾಸ್ಯದ ಅಂಶಗಳಿವೆ.
ಇಂದಿನ ಮಹಿಳೆಯರಿಗೆ ಬಹಳ ಹತ್ತಿರವಾಗುವ ಕಥೆ. ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಚಿತ್ರದ ಸಂಪೂರ್ಣ ಶೂಟಿಂಗ್  ಮಾಡಿದ್ದು ಎಂದರು ನಿರ್ಮಾಪಕರು.

ಚಿತ್ರದಲ್ಲಿ ರಾಹುಲ್ ದೇವ್, ರವಿ ಕಾಳೆ, ಕಿಶೋರ್ ಅಭಿನಯಸಿದ್ದಾರೆ.
Stay up to date on all the latest ಸಿನಿಮಾ ಸುದ್ದಿ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp