ಬದಲಾಯ್ತು ಮೈ ನೇಮ್ ಈಸ್ ಅಂಜಿ ಶೀರ್ಷಿಕೆ, ಶಿವಣ್ಣ ಚಿತ್ರಕ್ಕೆ ಹೊಸ ಹೆಸರು!

ನಿರ್ದೇಶಕ ಎ ಹರ್ಷ ಸೆಂಚೂರಿ ಸ್ಟಾರ್ ಶಿವರಾಜಕುಮಾರ್ ಅವರಿಗೆ ಚಿತ್ರ ನಿರ್ದೇಶನ ಮಾಡುತ್ತಿದ್ದು ಅದಕ್ಕೆ ಮೈ ನೇಮ್ ಈಸ್ ಅಂಜಿ ಎಂದು ಶೀರ್ಷಿಕೆ ಇಡಲಾಗಿತ್ತು. ಆದರೆ ಈ ಶೀರ್ಷಿಕೆಯನ್ನು ಇದೀಗ...

Published: 16th May 2019 12:00 PM  |   Last Updated: 16th May 2019 02:50 AM   |  A+A-


ಸಂಗ್ರಹ ಚಿತ್ರ

Posted By : VS VS
Source : The New Indian Express
ನಿರ್ದೇಶಕ ಎ ಹರ್ಷ ಸೆಂಚೂರಿ ಸ್ಟಾರ್ ಶಿವರಾಜಕುಮಾರ್ ಅವರಿಗೆ ಚಿತ್ರ ನಿರ್ದೇಶನ ಮಾಡುತ್ತಿದ್ದು ಅದಕ್ಕೆ ಮೈ ನೇಮ್ ಈಸ್ ಅಂಜಿ ಎಂದು ಶೀರ್ಷಿಕೆ ಇಡಲಾಗಿತ್ತು. ಆದರೆ ಈ ಶೀರ್ಷಿಕೆಯನ್ನು ಇದೀಗ ಬದಲಾಯಿಸಲಾಗಿದೆ.

ಶಿವಣ್ಣರ ಭಜರಂಗಿ ಚಿತ್ರ ಕನ್ನಡದಲ್ಲಿ ಬ್ಲಾಕ್ ಬಸ್ಟರ್ ಆಗಿತ್ತು. ಇದೀಗ ಅದೇ ಶೀರ್ಷಿಕೆಯನ್ನು ಮುಂದುವರೆಸಲು ನಿರ್ದೇಶಕ ಹರ್ಷ ತೀರ್ಮಾನಿಸಿದ್ದಾರೆ. ಇದೀಗ ಭಜರಂಗಿ 2 ಆಗಿ ಚಿತ್ರ ಬಿಡುಗಡೆಯಾಗಲಿದೆ.

ಇದು ಭಜರಂಗಿ ಚಿತ್ರದ ಸೀಕ್ವೆಲ್ ಅಲ್ಲ. ಬದಲಿಗೆ ಶೀರ್ಷಿಕೆಯನ್ನು ಮಾತ್ರ ಬಳಸಿಕೊಳ್ಳುತ್ತಿದ್ದೇವೆ ಎಂದರು. ಜಯಣ್ಣ ಕಂಬೈನ್ಸ್ ಮತ್ತು ಶಿವಣ್ಣ ಜೊತೆಯಾಗಿ ಇದು ನಾಲ್ಕನೇ ಯೋಜನೆ ಆಗಲಿದೆ.

ಜೂನ್ 20ಕ್ಕೆ ಭಜರಂಗಿ 2 ಚಿತ್ರದ ಮುಹೂರ್ತ ನಿಗದಿಯಾಗಿದೆ. ಶಿವಣ್ಣರಿಗೆ ನಟಿ ಭಾವನ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಪ್ರಸ್ತುತ ಶಿವಣ್ಣ ಅವರು ಪಿ. ವಾಸು ಅವರ ನಿರ್ದೇಶನದ ಆನಂದ್ ಚಿತ್ರದಲ್ಲಿ ನಟಿಸುತ್ತಿದ್ದು ನಂತರ ಭಜರಂಗಿ 2 ಕೈಗೆತ್ತಿಕೊಳ್ಳಲಿದ್ದಾರೆ.
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp