ಅಪ್ಪು ಹಾಲಿಡೇ ಸಂಭ್ರಮ: ಅಮೆರಿಕದಲ್ಲಿ ಪವರ್ ಸ್ಟಾರ್ ಸ್ಕೈ ಡೈವಿಂಗ್, ವಿಡಿಯೋ ವೈರಲ್

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಇತ್ತೀಚಿಗ ಕುಟುಂಬ ಸಮೇತ ದಕ್ಷಿಣ ಅಮೆರಿಕ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಇಗ್ಯಾಝು ಫಾಲ್ಸ್ ಸೇರಿದಂತೆ...

Published: 16th May 2019 12:00 PM  |   Last Updated: 17th May 2019 08:31 AM   |  A+A-


Power Star Puneeth Rajkumar's best moments from South America

ಪನೀತ್ ರಾಜ್ ಕುಮಾರ್

Posted By : LSB LSB
Source : Online Desk
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಇತ್ತೀಚಿಗ ಕುಟುಂಬ ಸಮೇತ ದಕ್ಷಿಣ ಅಮೆರಿಕ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಇಗ್ಯಾಝು ಫಾಲ್ಸ್ ಸೇರಿದಂತೆ ಅಲ್ಲಿನ ಸಾಕಷ್ಟು ಪ್ರವಾಸ ಸ್ಥಳಗಳಿಗೆ ಭೇಟಿಕೊಟ್ಟಿದ್ದರು. ಅಲ್ಲದೆ ಅಲ್ಲಿನ ಅಡ್ವೆಂಚರ್ ಗೇಮ್‍ಗಳಲ್ಲೂ ಪಾಲ್ಗೊಂಡು ಎಂಜಾಯ್ ಮಾಡಿದ್ದರು.

ಈ ಪ್ರವಾಸದ ವೇಳೆ ಪುನೀತ್ ರಾಜ್‍ಕುಮಾರ್ ಅವರು ಸ್ಕೈ ಡೈವಿಂಗ್ ಮಾಡಿದ್ದು, ಈ ರೋಮಾಂಚನ ಸಾಹಸದ ದೃಶ್ಯಗಳನ್ನು ತಮ್ಮದೇ ಯೂಟ್ಯೂಬ್ ಚಾನಲ್ ಪಿಆರ್​ಕೆ  ಪ್ರೊಡಕ್ಷನ್ಸ್​ನಲ್ಲಿ ಹಂಚಿಕೊಂಡಿದ್ದಾರೆ.

ಸ್ಕೈ ಡೈವಿಂಗ್ ವಿಡಿಯೋ ಇದೀಗ ವೈರಲ್ ಆಗಿದ್ದು, ಬೋಟಿಂಗ್, ಜಲಪಾತ, ದಕ್ಷಿಣ ಅಮೇರಿಕದ ಸುಂದರ ಪ್ರಕೃತಿಯ ಚಿತ್ರಣ ಅದರಲ್ಲಿ ಸೆರೆಯಾಗಿದೆ.

ದಕ್ಷಿಣ ಅಮೆರಿಕ ಭೇಟಿಯ ಕೆಲವು ಅತ್ಯುತ್ತಮ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಇಷ್ಟಪಡುತ್ತೇನೆ. ಈ ವಿಡಿಯೋ ವೀಕ್ಷಿಸಿ ಮತ್ತು ಆನಂದಿಸಿ ಎಂದು ಕ್ಯಾಪ್ಷನ್ ಕೂಡ ಹಾಕಲಾಗಿದೆ.
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp