ಶ್ರಮವಹಿಸಿ ಕೆಲಸ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ: ಅದ್ವಿತಿ ಶೆಟ್ಟಿ

ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಸಿನಿಮಾದಲ್ಲಿ ರಾಧಿಕಾ ಪಂಡಿತ್ ಗೆಳತಿಯಾಗಿ ನಟಿಸಿದ್ದ ಅದ್ವೈತಿ ಶೆಟ್ಟಿ 'ಕಾರ್ಮೋಡ ಸರಿದು' ಸಿನಿಮಾ ನಾಯಕಿಯಾಗಿ ಅಭಿನಯಿಸಿದ್ದಾರೆ....

Published: 16th May 2019 12:00 PM  |   Last Updated: 16th May 2019 01:56 AM   |  A+A-


Adhvithi Shetty,

ಅದ್ವಿತಿ ಶೆಟ್ಟಿ

Posted By : SD SD
Source : The New Indian Express
ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಸಿನಿಮಾದಲ್ಲಿ ರಾಧಿಕಾ ಪಂಡಿತ್ ಗೆಳತಿಯಾಗಿ ನಟಿಸಿದ್ದ ಅದ್ವೈತಿ ಶೆಟ್ಟಿ  'ಕಾರ್ಮೋಡ ಸರಿದು' ಸಿನಿಮಾ ನಾಯಕಿಯಾಗಿ ಅಭಿನಯಿಸಿದ್ದಾರೆ.

ರಾಮಾಚಾರಿ ನಂತರ ಹಲವು ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. ಕಾರ್ಮೋಡ ಸರಿದು ಸಿನಿಮಾ ಬಿಡುಗಡೆಯಾಗಲು ಸಿದ್ದವಿದೆ, ನಾನು ಕೆಲಸಕ್ಕೆ ಮೀಸಲಿಟ್ಟ ಹುಡುಗಿ, ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ ಎಂದು ಹೇಳಿದ್ದಾರೆ.

ಚಿತ್ರದಲ್ಲಿ ಅದ್ವಿತಿ ಡಾಕ್ಟರ್‌ ಆಗಿ ನಟಿಸಿದ್ದಾರೆ. ಮಲೆನಾಡಿನಲ್ಲಿ ಬಂದು ಸೇವೆ ಮಾಡುತ್ತಿರುವ ಡಾಕ್ಟರ್‌ ಪಾತ್ರವಂತೆ. “ಕಥೆ, ನನ್ನ ಪಾತ್ರ ತುಂಬಾ ಚೆನ್ನಾಗಿದೆ. ನಾನಿಲ್ಲಿ ಡಾಕ್ಟರ್‌ ಪ್ರಿಯಾ ಎಂಬ ಪಾತ್ರ ಮಾಡಿದ್ದೇನೆ. ಸಾಕಷ್ಟು ಅರ್ಥಪೂರ್ಣ ಪಾತ್ರವಿದು. ಇಡೀ ಸಿನಿಮಾವನ್ನು ಕುದುರೆಮುಖದಲ್ಲಿ ಚಿತ್ರೀಕರಿಸಿದ್ದು, ಕುದುರೆಮುಖದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಬಯಸುವವರು ನಮ್ಮ ಸಿನಿಮಾ ನೋಡಬಹುದು. ಚಿತ್ರದಲ್ಲಿ ಪ್ರಕೃತಿ ಸೌಂದರ್ಯದ ಜೊತೆಗೆ ಉತ್ತಮ ಸಂದೇಶವೂ ಇದೆ’ ಎನ್ನುವುದು ಅದ್ವಿತಿ ಮಾತು.

ಚಿತ್ರದ ಕಥೆಯಲ್ಲಿ ಇಂದಿನ ಜನರು ತಮ್ಮ ಯಾಂತ್ರಿಕ ಬದುಕಿನಲ್ಲಿ ಹೇಗೆ ಪ್ರಸ್ತುತ ಜನರು ಮಾನವೀಯ ಮೌಲ್ಯಗಳನ್ನು ಮರೆಯುತ್ತಿದ್ದಾರೆ. ಇದರಿಂದ ಸಂಬಂಧಗಳು ಹೇಗೆ ದೂರವಾಗುತ್ತಿದೆ. ಕಾಲ ಬದಲಾದಂತೆ ಹೇಗೆ ಎಲ್ಲವು ಬದಲಾಗುತ್ತಿದೆ, ಮನುಷ್ಯನ ಬಾಂಧವ್ಯಗಳು ಎಷ್ಟು ಮುಖ್ಯ ಎಂಬುದನ್ನು ಹೇಳಲಾಗಿದೆ.

ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಸಿನಿಮಾ ನಮ್ಮ ಬದುಕಿನ ದಿಕ್ಕನ್ನೇ ಬದಲಿಸಿತು. ಅಲ್ಲಿಂದ ಜನರ ಪ್ರೀತಿ ನನಗೆ ಸಿಕ್ಕಿತು, ರಾಧಿಕಾ ಪಂಡಿತ್ ನನಗೆ ಮಾದರಿಯಾಗಿದ್ದಾರೆ. ರಾಧಿಕಾ  ತುಂಬಾ ಒಳ್ಳೆಯ ಗೆಳತಿ, ನನ್ನನ್ನು ಆಕೆ ತಮ್ಮ ಸಹೋದರಿಯಂತೆ ಕಾಣುತ್ತಾರೆ, ಸಿನಿಮಾಗೆ ಮುಂಚೆ ರಾಧಿಕಾ ಅಥವಾ ಯಶ್ ನಮಗೆ ಪರಿಚಯವಿರಲಿಲ್ಲ, ಆದರೆ ಅವರ ಜೊತೆ ಮಾತನಾಡಿದ ನಂತರ ಅವರ ಸರಳತೆ ತುಂಬ ಇಷ್ಟವಾಯಿತು ಎಂದು ತಿಳಿಸಿದ್ದಾರೆ.
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp