ನಟಿ ಹರಿಪ್ರಿಯಾ ವಿರುದ್ಧ ವಾಣಿಜ್ಯ ಮಂಡಳಿಗೆ ಸೂಜಿದಾರ ಚಿತ್ರತಂಡ ದೂರು

ಇತ್ತೀಚಿಗೆ ತೆರೆ ಕಂಡಿರುವ ಸೂಜಿದಾರ ಸಿನಿಮಾದ ನಟಿ ಹರಿಪ್ರಿಯಾ ಹಾಗೂ ನಿರ್ದೇಶಕ ಮೌನೇಶ್ ಬಡಿಗೇರ್ ನಡುವಿನ ಸಂಘರ್ಷ ಬಹಿರಂಗವಾಗಿದ್ದು, ಇದೀಗ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯ ಮೆಟ್ಟಿಲು ಹತ್ತಿದೆ.
ಹರಿಪ್ರಿಯಾ
ಹರಿಪ್ರಿಯಾ

ಬೆಂಗಳೂರು: ಇತ್ತೀಚಿಗೆ ತೆರೆ ಕಂಡಿರುವ ಸೂಜಿದಾರ ಸಿನಿಮಾದ ನಟಿ ಹರಿಪ್ರಿಯಾ ಹಾಗೂ ನಿರ್ದೇಶಕ ಮೌನೇಶ್ ಬಡಿಗೇರ್ ನಡುವಿನ ಸಂಘರ್ಷ ಬಹಿರಂಗವಾಗಿದ್ದು, ಇದೀಗ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯ ಮೆಟ್ಟಿಲು ಹತ್ತಿದೆ.

ನಟಿ ಹರಿಪ್ರಿಯಾ ತಮ್ಮ ಪಾತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿಗೆ ಹಂಚಿಕೊಂಡಿದ್ದ ಬರಹ ವೈರಲ್ ಆಗಿತ್ತು.
ಇದರಿಂದ ಆಕ್ರೋಶಗೊಂಡಿರುವ ರಂಗಕರ್ಮಿ, ನಿರ್ದೇಶಕ ಮೌನೇಶ್ ಬಡಿಗೇರ್, ನಿರ್ಮಾಪಕರಾದ ಸಚ್ಚೀಂದ್ರನಾಥ್ ನಾಯಕ್, ಅಭಿಜಿತ್ ಕೊಟೆಗಾರ್ ಗುರುವಾರ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎ.ಎಸ್. ಚಿನ್ನೇಗೌಡ ಮತ್ತು ಉಪಾಧ್ಯಕ್ಷ ಭಾ.ಮಾ. ಹರೀಶ್ ಅವರನ್ನು ಭೇಟಿ ಮಾಡಿ , ಹರಿಪ್ರಿಯಾ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com