ಸಾಹೋ ಫರ್ಸ್ಟ್ ಲುಕ್ ಮತ್ತು ರಿಲೀಸ್ ಡೇಟ್ ರಿವೀಲ್ ಮಾಡಿದ ಪ್ರಭಾಸ್

ಬಾಹುಬಲಿ 2 ಚಿತ್ರದ ಬಳಿಕ ಪ್ರಭಾಸ್ ಅಭಿನಯಿಸುತ್ತಿರುವ ಸಿನಿಮಾ ಆಗಿರುವ ಕಾರಣ ಪ್ರೇಕ್ಷಕರು, ಅಭಿಮಾನಿಗಳಲ್ಲಿ ಕುತೂಹಲ ಮನೆಮಾಡಿದೆ. ..

Published: 22nd May 2019 12:00 PM  |   Last Updated: 22nd May 2019 10:36 AM   |  A+A-


Prabhas confirms Saaho release date in the new poster

ಸಾಹೋ ಫರ್ಸ್ಟ್ ಲುಕ್

Posted By : SD SD
Source : The New Indian Express
ಬಾಹುಬಲಿ 2 ಚಿತ್ರದ ಬಳಿಕ ಪ್ರಭಾಸ್ ಅಭಿನಯಿಸುತ್ತಿರುವ ಸಿನಿಮಾ ಆಗಿರುವ ಕಾರಣ ಪ್ರೇಕ್ಷಕರು, ಅಭಿಮಾನಿಗಳಲ್ಲಿ ಕುತೂಹಲ ಮನೆಮಾಡಿದೆ. 

ಸುಜಿತ್ ನಿರ್ದೇಶಿರುವ ಸಿನಿಮಾ ಇದು. ಸುಮಾರು 300 ಕೋಟಿ ಬಜೆಟ್‌ನಲ್ಲಿ ಸಿನಿಮಾವನ್ನು ನಿರ್ಮಿಸಲಾಗಿದೆ. ಯೂವಿ ಕ್ರಿಯೇಷನ್ಸ್ ಈ ಸಿನಿಮಾವನ್ನು ನಿರ್ಮಿಸಿದೆ.

ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಬಾಹುಬಲಿ ಖ್ಯಾತಿಯ ಪ್ರಭಾಸ್ ಅಭಿನಯದ 'ಸಾಹೋ' ಸಿನಿಮಾ ಸಹ ಒಂದು. ಇದೀಗ ಈ ಸಿನಿಮಾದ ಹೊಸ ಲುಕ್ ರಿಲೀಸ್ ಆಗಿದೆ. 

ಆಗಸ್ಟ್ 15ರಂದು ಸಿನಿಮಾ ತೆರೆ ಕಾಣಲಿದೆ. ಈ ಪೋಸ್ಟರನ್ನು ಪ್ರಭಾಸ್ ತನ್ನ ಇನ್‍ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. 15ರಂದು ಥಿಯೇಟರ್‌ನಲ್ಲಿ ಭೇಟಿಯಾಗೋಣ ಎಂದಿದ್ದಾರೆ. 

ಇದಕ್ಕೂ ಮುನ್ನ ಪ್ರಭಾಸ್ ಸಾಮಾಜಿಕ ಮಾಧ್ಯಮದಲ್ಲಿ ನಾಳೆ ನಿಮಗೆಲ್ಲಾ ಸರ್‌ಪ್ರೈಸ್ ಎಂದಿದ್ದರು. "ಹಲೋ ಡಾರ್ಲಿಂಗ್ಸ್, ನಾಳೆ ನಿಮಗೆ ಸರ್‌ಪ್ರೈಸ್ ಕಾದಿದೆ. ನಿರೀಕ್ಷಿಸಿ, ಸಾಹೋಸರ್‌ಪ್ರೈಸ್" ಎಂದು ಹೇಳಿದ್ದರು. ಸಿನಿಮಾ ಹಿಂದಿ. ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗಲಿದೆ. 
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp