ಬೆಲ್ ಬಾಟಮ್' ಗೆ ಶತದಿನೋತ್ಸವ ಸಂಭ್ರಮ: ಸ್ಯಾಂಡಲ್ ವುಡ್ ನಲ್ಲಿ ರಿಷಬ್ ಶೆಟ್ಟಿಗೆ ಫುಲ್ ಡಿಮ್ಯಾಂಡ್

ರಿಷಬ್ ಶೆಟ್ಟಿಯ "ಬೆಲ್ ಬಾಟಮ್" ಚಿತ್ರ ಶತದಿನೋತ್ಸವ ಪೂರೈಸಿ ವರ್ಷದ ಯಶಸ್ವಿ ಚಿತ್ರವಾಗಿ ಹೊರಹೊಮ್ಮಿದೆ. ಈ ಚಿತ್ರದಲ್ಲಿ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಣಾಯಕ ನಟನಾಗಿ.....
ಬೆಲ್ ಬಾಟಮ್' ಗೆ ಶತದಿನೋತ್ಸವ ಸಂಭ್ರಮ: ರಿಷಬ್ ಶೆಟ್ಟಿಗೆ ಸ್ಯಾಂಡಲ್ ವುಡ್ ನಿರ್ದೇಶಕರಿಂದ ಫುಲ್ ಡಿಮ್ಯಾಂಡ್
ಬೆಲ್ ಬಾಟಮ್' ಗೆ ಶತದಿನೋತ್ಸವ ಸಂಭ್ರಮ: ರಿಷಬ್ ಶೆಟ್ಟಿಗೆ ಸ್ಯಾಂಡಲ್ ವುಡ್ ನಿರ್ದೇಶಕರಿಂದ ಫುಲ್ ಡಿಮ್ಯಾಂಡ್
ಬೆಂಗಳೂರು: ರಿಷಬ್ ಶೆಟ್ಟಿಯ "ಬೆಲ್ ಬಾಟಮ್" ಚಿತ್ರ ಶತದಿನೋತ್ಸವ ಪೂರೈಸಿ ವರ್ಷದ ಯಶಸ್ವಿ ಚಿತ್ರವಾಗಿ ಹೊರಹೊಮ್ಮಿದೆ. ಈ ಚಿತ್ರದಲ್ಲಿ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಣಾಯಕ ನಟನಾಗಿ ಕಾಣಿಸಿಕೊಂಡಿದ್ದ ರಿಷಬ್ ಶೆಟ್ಟಿಗೆ ಇದರಿಂದ ಸ್ಯಾಂಡಲ್ ವುಡ್ ನಲ್ಲಿ ಫುಲ್ ಡಿಮ್ಯಾಂಡ್ ಬಂದಿದೆ.ಜಯತೀರ್ಥ ನಿರ್ದೇಶನದ "ಬೆಲ್ ಬಾತಮ್" ಶುಕ್ರವಾರ 100 ದಿನ ಪ್ರದರ್ಶನ ಕಂಡಿದೆ.
ವಿಶೇಷವೆಂದರೆ ಯಾವುದೇ ಸೂಪರ್ ಸ್ಟಾರ್ ಗಳಿಲ್ಲದೆ "ಬೆಲ್ ಬಾಟಮ್" ಶತದಿನ ಪೂರೈಸಿದೆ. ಸೂಪರ್ ಸ್ತಾರ್ ನಟರಿರುವ ಚಿತ್ರಕ್ಕೆ ಬಂಡವಾಳ ಹಾಕಿದ್ದರೆ ಎರಡು ಅಥವಾ ಮೂರು ವಾರಗಳಲ್ಲಿ ಹಾಕಿದ್ದ ಹಣ ಹಿಂದೆ ಬರುವುದು ಸಾಮಾನ್ಯ.  ಆದರೆ "ಬೆಲ್ ಬಾಟಮ್" ಚಿತ್ರದಲ್ಲಿ ಯಾವ ಸ್ಟಾರ್ ನಟರೂ ಇಲ್ಲ, ಮೇಲಾಗಿ ಥಿಯೇಟರ್ ಗಳ ಸಮಸ್ಯೆ, ಪ್ರತಿವಾರವೂ ಬೇರೆ ಬೇರೆ ಚಿತ್ರಗಳ ಬಿಡುಗಡೆ, ಕನ್ನಡ, ಇತರೆ ಭಾಷಾ ಚಿತ್ರಗಳೊಡನೆ ಪೈಪೋಟಿ ಇಷ್ಟೆಲ್ಲದರ ನಡುವೆಯೂ ಚಿತ್ರವು 20ಕ್ಕೆ ಹೆಚು ಚಿತ್ರಮಂದಿರಗಳಲ್ಲಿ 100 ದಿನಗಳ ಪ್ರದರ್ಶನ ಕಾಣುತ್ತಿರುವುದು ಏನೂ ಸಾಮಾನ್ಯ ಸಂಗತಿಯಲ್ಲ.. ಹಾಗಾಗಿ ನನ್ನ ತಂಡ ಮತ್ತು ನಾನು ಈ ವಿಚಾರಕ್ಕಾಗಿ ಹೆಮ್ಮೆ ಪಡುತ್ತೇವೆ ಎಂದು ರಿಷಬ್ ಹೇಳಿದ್ದಾರೆ.
ಈ ಯಶಸ್ಸು ರಿಷಬ್ ಗೆ ಇನ್ನಷ್ಟು ದೊಡ್ಡ ಜವಾಬ್ದಾರಿ ಹೊರಲು ಪ್ರೇರಣೆ ನೀಡಿದೆ.ಅಲ್ಲದೆ ಸ್ಯಾಂಡಲ್ ವುಡ್ ಸ್ಟಾರ್ ನಿರ್ಮಾಪಕರಿಂದಲೂ ರಿಷಬ್ ಗೆ ಬೇಡಿಕೆ ಬಂದಿದೆ.. ಆದರೆ "ಈಗ ನಾನು ಸಮರ್ಥ್ ಕಡಕೋಳ್ ಅವರ "ಅಂಥೋನಿ" ಚಿತ್ರೀಕರಣದಲ್ಲಿ ತೊಡಗಿದ್ದೇನೆ.ಕರಣ್ ನಿರ್ದೇಶನದ ಇನ್ನೊಂದು ಚಿತ್ರವೂ ನನ್ನ ಕೈಯಲ್ಲಿದೆ.ಜತೆಗೆ ಇನ್ನಷ್ಟು ನಿರ್ದೇಶಕರ ಜತೆ ಮುಂದಿನ ಯೋಜನೆಗಳ ಕುರ್ತು ಚರ್ಚೆ ನಡೆಯುತ್ತಿದೆ" ಎಂದು ಅವರು ಹೇಳಿದ್ದಾರೆ.
ಈ ನಡುವೆ ರಿಷಬ್ ತಾವೂ ಸಹ ಸ್ವಂತ ನಿರ್ದೇಶನದಲ್ಲಿ ಚಿತ್ರವೊಂದರ ತಯಾರಿ ನಡೆಸಿದ್ದಾರೆ. ಆದರೆ ತಮ್ಮ ಯೋಜನೆಯ ಪೂರ್ಣ ಸ್ವರೂಪ ಅಧಿಕೃತವಾದ ಬಳಿಕವಷ್ಟೇ ತಾವು ಈ ಸಂಬಂಧ ಮಾತನಾಡುವುದಾಗಿ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com