ಜೀವನ ನಮಗೆ ಒಡ್ಡಿದ ಅವಕಾಶಗಳನ್ನು ನಾವು ಸ್ವಾಗತಿಸಬೇಕು: ಉಪೇಂದ್ರ

ಸಿನಿಮಾ ವಿಚಾರಕ್ಕೆ ಬಂದರೆ ರಿಯಲ್ ಸ್ಟಾರ್ ಉಪೇಂದ್ರ ಆಲ್ ರೌಂಡರ್ ಎನ್ನಲೇಬೇಕು.ಅವರು ಕಥೆಗಾರರು, ನಿರ್ದೇಶಕ, ನಿರ್ಮಾಪಕ, ನಟ ಹೀಗೆ ನಾನಾ ಕ್ಷೇತ್ರಗಳಲ್ಲಿ ಕೈಯಾಡಿಸಿದ್ದಾರೆ.

Published: 25th May 2019 12:00 PM  |   Last Updated: 25th May 2019 01:17 AM   |  A+A-


Upendra

ಉಪೇಂದ್ರ

Posted By : RHN RHN
Source : The New Indian Express
ಬೆಂಗಳೂರು: ಸಿನಿಮಾ ವಿಚಾರಕ್ಕೆ ಬಂದರೆ ರಿಯಲ್ ಸ್ಟಾರ್ ಉಪೇಂದ್ರ ಆಲ್ ರೌಂಡರ್ ಎನ್ನಲೇಬೇಕು.ಅವರು ಕಥೆಗಾರರು, ನಿರ್ದೇಶಕ, ನಿರ್ಮಾಪಕ, ನಟ ಹೀಗೆ ನಾನಾ ಕ್ಷೇತ್ರಗಳಲ್ಲಿ ಕೈಯಾಡಿಸಿದ್ದಾರೆ. ಅಲ್ಲದೆ ದ್ವಿಪಾತ್ರ, ತ್ರಿಪಾತ್ರಧಾರಿಯಾಗಿ ಸಹ ಮಿಂಚಿದ್ದಾರೆ."ಹಾಲಿವುಡ್", ಗಾಡ್ ಫಾರದ", "ಉಪೇಂದ್ರ ಮತ್ತೆ ಬಾ" ಸೇರಿ ಅನೇಕ ಚಿತ್ರಗಳಲ್ಲಿ ಇವರು ವಿಭಿನ್ನ ಪಾತ್ರ ಮಾಡಿದ್ದಾರೆ.ಇದೀಗ ತಮ್ಮ ಮುಂದಿನ ಚಿತ್ರ "ಬುದ್ದಿವಂತ-2"ನಲ್ಲಿ ಮತ್ತೆ ದ್ವಿಪಾತ್ರದಲ್ಲಿ ಉಪ್ಪಿ ಕಾಣಿಸಲಿದ್ದಾರೆ.

ಟಿಆರ್ ಚಂದ್ರಶೇಕರ್ ನಿರ್ಮಾಣದ ಈ ಚಿತ್ರದ ಮಹೂರ್ತ ಕ್ರಿಸ್ಟಲ್ ಪಾರ್ಕ್ ನಲ್ಲಿ ನೆರವೇರಿದೆ.ಮೇ 27ರಿಂದ ಚಿತ್ರೀಕರಣ ಪ್ರಾರಂಭವಾಗಲಿದ್ದು "ಓರ್ವ ನಟನಾಗಿ ನಿರ್ದೇಶಕರ ಮಾತಿನಂತೆ ನಡೆದುಕೊಳ್ಳುತ್ತೇನೆ" ಉಪ್ಪಿ ಹೇಳಿದ್ದಾರೆ.

"ಬುದ್ದಿವಂತ-2" ನಿರ್ದೇಶಕ ಮೌರ್ಯ ಡಿಎನ್ ಪಾಲಿಗಿದು ಚೊಚ್ಚಲ ನಿರ್ದೇಶನದ ಚಿತ್ರ. ಈ ಬಗ್ಗೆ ಕೇಳಿದಾಗ  "ಜೀವನವು ಅನಿರೀಕ್ಷಿತ ಅವಕಾಶಗಳನ್ನು ನಿಡಲಿದೆ, ನಾವು ಅವುಗಳನ್ನು ಪಡೆದುಕೊಳ್ಳಬೇಕು. ಇಂದು, ನಿರ್ದೇಶಕರು ಹೊಸ ವಿಚಾರಗಳು ಒಂದು ಹೊಸ ದೃಷ್ಟಿಗೆ ಪ್ರೇರೇಪನೆಯಾಗಲಿದೆ.ಅದೇ ರೀತಿ ಮೌರ್ಯ ಸಹ ಉತ್ತಮ ವಿಷವಸ್ತುವನ್ನು ಹೊಂದಿದ್ದಾರೆ" ಉಪ್ಪಿ ನುಡಿದರು.ಈ ಚಿತ್ರ ಥ್ರಿಲ್ಲರ್ ಕಥಾನಕವನ್ನು ಹೊಂದಿದೆ ಎನ್ನುವ ಉಪ್ಪಿ ಮೌರ್ಯರ ಆಸಕ್ತಿದಾಯಕ ಚಿತ್ರಕಥೆ ಉತ್ತಮ ಸಂದೇಶವನ್ನು ಹೊತ್ತು ಬರಲಿದೆ" ಎಂದರು.

ಓರ್ವ ನಟ, ನಿರ್ದೇಶಕ ಮತ್ತು ರಾಜಕಾರಣಿಯಾಗಿರುವ ಉಪೇಂದ್ರ ಸ್ವತಃ ಸವಾಲನ್ನು ಸ್ವೀಕರಿಸಲು ಕಾತುರದಿಂದಿದ್ದಾರೆ. "ನಟನಾಗಿ, ನಾನು ಸಾಮಾನ್ಯವಾಗಿ ಉತ್ತಮ ಕಥೆಯನ್ನು ನೋಡುತ್ತೇನೆ.ನಿರ್ದೇಶಕರಾಗಿ ಕ್ಯಾಮರಾ ಹಿಡಿದಾಗಲೂ ಪ್ರತಿ ಬಾರಿ ಹೊಸತನವನ್ನು ಕಾಣುತ್ತೇನೆ.ರಾಜಕೀಯದಲ್ಲಿ ನಾನು ಸಮಾಜದಲ್ಲಿ ಬದಲಾವಣೆಯನ್ನು ತರಲು ಬಯಸುತ್ತೇನೆ "ಎಂದು ಉಪ್ಪಿ ಹೇಳುತ್ತಾರೆ

"ಶಶಾಂಕ್ ಜತೆ ಸಹ ನಾನು ಚಿತ್ರ ಮಾಡುತ್ತಿದ್ದೇನೆ. ಅದರ ಪರಿಕಲ್ಪನೆಯು ತುಂಬಾ ಭಿನ್ನವಾಗಿದೆ. ಅಂತಹ ವಿಷಯಗಳು ನನಗೆ ಥ್ರಿಲ್ ನೀಡಿವೆ. ಒಬ್ಬ ಕಲಾವಿದನಾಗಿ, ನಾನು ಸದಾ ಚಿತ್ರತಂಡದೊಡನಿದ್ದೇನೆ.ದಿನದ ಅಂತ್ಯದಲ್ಲಿ, ನಿರ್ದೇಶಕನು ತಾನು ಅಂದುಕೊಂಡದ್ದನ್ನು ಸಾಧಿಸಲು ಸಫಲನಾಗಬೇಕು.

ಚಿತ್ರ ನಿರ್ದೇಶನ

ಉಪೇಂದ್ರ ಪ್ರಸ್ತುತ ರಾಜಕಾರಣದ ಮೇಲೆ ಚಿತ್ತ ನೆಟ್ಟಿದ್ದಾರೆ. ದರೆ ಯಾವುದೇ ಹಂತದಲ್ಲಿಯೂ ಅವರು ಚಿತ್ರರಂಗದಿಂದ ಹಿಂದೆ ಸರಿಯುವುದಿಲ್ಲ.ಬೆಳ್ಳಿ ಪರದೆಯ ಮೇಲೆ ಅವರು ಕಾಣಿಸಿಕೊಂಡು ಸುಮಾರು ಎರಡು ವರ್ಷಗಳಾಗಿದ್ದು ಅವರ ಅಭಿಮಾನಿಗಳು ಆರ್. ಚಂದ್ರು ನಿರ್ದೇಶನದಲ್ಲಿನ ಉಪ್ಪಿ ಮುಂದಿನ ಚಿತ್ರ "ಐ ಲವ್ ಯೂ" ಬಿಡುಗಡೆಗಾಗಿ ಕಾಯುತ್ತಿದ್ದಾರೆ.ಈ ಚಿತ್ರವು ಜೂನ್ 14 ರಂದು ಬಿಡುಗಡೆಯಾಗಲಿದೆ. 

. "ನಾನು ಶೀಘ್ರದಲ್ಲೇ ನನ್ನ ನಿರ್ದೇಶನ ಯೋಜನೆಗಳನ್ನು ಪ್ರಕಟಿಸುತ್ತೇನೆ. ನನ್ನ ಮನಸ್ಸಿನಲ್ಲಿ ರಾಜಕೀಯ, ಮತ್ತು ಲೋಕಸಭೆ ಚುನಾವಣೆಗಳು ಇದ್ದು ನಿರ್ದೇಶನದ ಬಗೆಗೆ ಹೆಚ್ಚು ಗಮನಹರಿಸಲಾಗಲಿಲ್ಲ. ಇನ್ನು ನಾನು ನನ್ನ ಯೋಜನೆ ಪೂರ್ಣವಾಗಿ ಸೆಟ್ ಗೆ ಹೋಗಲು ಸಿದ್ದವಾದಾಗ ಆ ಬಗ್ಗೆ ನಾನು ಪ್ರಕಟಿಸುತ್ತೇನೆ." ಉಪ್ಪಿ ಹೇಳುತ್ತಾರೆ.
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp