ದೊಡ್ಮನೆಯಲ್ಲಿ ಅದ್ದೂರಿಯಾಗಿ ನೆರವೇರಿದ ಯುವರಾಜ್ ಕುಮಾರ್ ಮದುವೆ

ಡಾ.ರಾಜ್ ಕುಮಾರ್ ಕುಟುಂಬದಲ್ಲಿ ಮದುವೆ ಸಂಭ್ರಮ ಜೋರಾಗಿದೆ. ನಟ ರಾಘವೇಂದ್ರ ರಾಜ್‍ಕುಮಾರ್ ...

Published: 26th May 2019 12:00 PM  |   Last Updated: 26th May 2019 01:00 AM   |  A+A-


Yuvaraj Kumar-Shridevi Bairappa

ಯುವರಾಜ್ ಕುಮಾರ್ -ಶ್ರೀದೇವಿ ಭೈರಪ್ಪ

Posted By : SUD SUD
Source : Online Desk
ಬೆಂಗಳೂರು: ಡಾ.ರಾಜ್ ಕುಮಾರ್ ಕುಟುಂಬದಲ್ಲಿ ಮದುವೆ ಸಂಭ್ರಮ ಜೋರಾಗಿದೆ. ನಟ ರಾಘವೇಂದ್ರ ರಾಜ್‍ಕುಮಾರ್ ಅವರ ಕಿರಿಯ ಪುತ್ರ ಯುವರಾಜ್ ಕುಮಾರ್ ಮದುವೆ ಬೆಂಗಳೂರು ಅರಮನೆ ಮೈದಾನದಲ್ಲಿ ಭಾನುವಾರ ಅದ್ದೂರಿಯಾಗಿ ನೆರವೇರಿತು.

ಮೈಸೂರು ಮೂಲದ ಶ್ರೀದೇವಿ ಭೈರಪ್ಪ ಅವರನ್ನು ಯುವ ರಾಜ್ ಕುಮಾರ್ ವರಿಸಿದರು.
ಕಳೆದೊಂದು ವಾರದಿಂದ ಮದುವೆಯ ಶಾಸ್ತ್ರಗಳು ಶುರುವಾಗಿತ್ತು. ಕಾರ್ಯಕ್ರಮದಲ್ಲಿ ಸ್ಯಾಂಡಲ್‍ವುಡ್, ಬಾಲಿವುಡ್ ಸೇರಿದಂತೆ ಟಾಲಿವುಡ್‍ನ ಸಾಕಷ್ಟು ಕಲಾವಿದರು ಭಾಗಿಯಾಗಿದ್ದರು. ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ ಸೇರಿದಂತೆ ಚಿತ್ರರಂಗದ ಆಪ್ತರು ಪಾಲ್ಗೊಂಡಿದ್ದರು, ಅದಷ್ಟೇ ಅಲ್ಲದೆ ರಾಜಕೀಯ ಗಣ್ಯರು ಕೂಡ ಮದುವೆಯಲ್ಲಿ ಭಾಗಿಯಾಗಿ ವಧು-ವರರನ್ನು ಆಶೀರ್ವದಿಸಿದರು.

ಯುವರಾಜ್ ಕುಮಾರ್ ವಿವಾಹಕ್ಕಾಗಿ ಗೋಲ್ಡ್ ವೈಟ್ ರೆಡ್ ಥೀಮ್‍ನಲ್ಲಿ ವೇದಿಕೆ ಸಜ್ಜಾಗಿದ್ದು ಸಾಕಷ್ಟು ಹೂವುಗಳಿಂದ ವಿವಾಹದ ಮಂಟಪವನ್ನು ಸಜ್ಜುಗೊಳಿಸಲಾಗಿತ್ತು.ಅಭಿಮಾನಿಗಳಿಗೆ ಮತ್ತು ವಿವಿಐಪಿಗಳಿಗೆ ಒಂದೇ ರೀತಿಯ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ.
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp