'ಅಧ್ಯಕ್ಷ ಇನ್ ಅಮೆರಿಕಾ' ಜುಲೈನಲ್ಲಿ ತೆರೆಗೆ, ಬೆಳ್ಳಿತೆರೆ ಮೇಲೆ ಮತ್ತೆ ಶರಣ್ ಮ್ಯಾಜಿಕ್!

ಶರಣ್ ತಾವು ಕಳೆದ ವರ್ಷ "ರ್ಯಾಂಬೋ-2", "ವಿಕ್ಟರಿ-2" ಮೂಲಕ ಡಬಲ್ ಗೆಲುವಿನ ಸಂಭ್ರಮಪಟ್ಟಿದ್ದರು. ಇದೀಗ ಮತ್ತೆ "ಅಧ್ಯಕ್ಷ ಇನ್ ಅಮೆರಿಕಾ" ಎಂಬ ಚಿತ್ರದ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಲು ಬರುತ್ತಿದ್ದಾರೆ.

Published: 28th May 2019 12:00 PM  |   Last Updated: 28th May 2019 01:17 AM   |  A+A-


Sharan

ಶರಣ್

Posted By : RHN RHN
Source : The New Indian Express
ಬೆಂಗಳೂರು: ಶರಣ್ ತಾವು ಕಳೆದ ವರ್ಷ "ರ್ಯಾಂಬೋ-2", "ವಿಕ್ಟರಿ-2" ಮೂಲಕ ಡಬಲ್ ಗೆಲುವಿನ ಸಂಭ್ರಮಪಟ್ಟಿದ್ದರು. ಇದೀಗ ಮತ್ತೆ "ಅಧ್ಯಕ್ಷ ಇನ್ ಅಮೆರಿಕಾ" ಎಂಬ ಚಿತ್ರದ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಲು ಬರುತ್ತಿದ್ದಾರೆ.

"ಅದ್ಯಕ್ಷ ಇನ್ ಆಮೇರಿಕಾ" ಒಂದು ಹಾಸ್ಯ ಚಿತ್ರವಾಗಿದ್ದು ಇದೇ ಜುಲೈನಲ್ಲಿ ತೆರೆಕಾಣಲಿದೆ ಎಂದು ನಿರೀಕ್ಷೆ ಇದೆ.ಇದಕ್ಕೆ ಹಿಂದೆ ನಂದ ಕಿಶೋರ್ ನಿರ್ದೇಶನದಲ್ಲಿ ಬಂದಿದ್ದ ಶರಣ್ ನಾಯಕನಾಗಿದ್ದ "ಆಧ್ಯಕ್ಷ" ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸಾಕಷ್ಟು ಯಶಸ್ವಿಯಾಗಿತ್ತು. ಇದೀಗ ಮತ್ತೆ ಅದೇ ರೀತಿಯ ಶೀರ್ಷಿಕೆ ಹೊಂದಿರುವ ಚಿತ್ರವೊಂದರಲ್ಲಿ ಶರಣ್ ನಾಯಕನಾಗಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಸಂಭಾಷಣಾ ಕಾರನಾಗಿ ಈಗ ನಿರ್ದೇಶಕರೆನಿಸಿಕೊಂಡಿರುವ ಯೋಗಾನಂದ ಮುದ್ದಣ್ಣ ಶರಣ್ ವರ ಈ ನೂತನ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.ಚಿತ್ರ ಈಗ ರೆಕಾರ್ಡಿಂಗ್ ಹಂತದಲ್ಲಿದ್ದು ಪತ್ರಿಕೆಗೆ ಚಿತ್ರದ ಇತ್ತೀಚಿನ ಸ್ಟಿಲ್ ಚಿತ್ರಗಳು ಸಿಕ್ಕಿದೆ.

ಇನ್ನು ಇದೇ ಮೊದಲ ಬಾರಿಗೆ ಶರಣ್ ಚಿತ್ರವೊಂದಕ್ಕೆ ಖ್ಯಾತ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಇದರಲ್ಲಿ ಮೂರು ಹಾಡನ್ನು ಅಮೆರಿಕಾದಲ್ಲಿ ಶುಟ್ ಮಾಡಲಾಗಿದೆ. ಇನ್ನುಳಿದವನ್ನು ಭಾರತದಲ್ಲೇ ಚಿತ್ರೀಕರಿಸಿದ್ದಾಗಿ ಚಿತ್ರತಂಡದ ಮೂಲಗಳು ಹೇಳಿದೆ.

ಶರಣ್ ನಾಯಕನಾಗಿರುವ ಈ ಚಿತ್ರಕ್ಕೆ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ನಾಯಕಿಯಾಗಿದ್ದರೆ ರಂಗಾಯಣ ರಘು, ಸಾಧು ಕೋಕಿಲಾ, ಶಿವರಾಜ್ ಕೆಆರ್ ಪೇಟೆ ಸಹ ನಟಿಸಿದ್ದಾರೆ.

ಸಧ್ಯ ಶರಣ್ ಸುನಿ ನಿರ್ದೇಶನದ "ಅವತಾರ ಪುರುಷ" ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp