ಕನ್ನಡದಲ್ಲಿಯೇ ರಾಜ್ಯೋತ್ಸವ ಶುಭಾಶಯ ಕೋರಿ ಕರುನಾಡಿನ ಅಭಿಮಾನಿಗಳ ಮನಗೆದ್ದ ಟಾಲಿವುಡ್ ಬೆಡಗಿ!

ತೆಲುಗಿನ ಬಹುಬೇಡಿಕೆಯ ನಟಿ  ಅನುಷ್ಕಾ ಶೆಟ್ಟಿಗೆ ತನ್ನ ತಾಯಿ ನೆಲದ ಮೇಲಿನ ಪ್ರೀತಿ ಕೊಂಚವೂ ಕೂಡಾ ಕಡಿಮೆಯಾಗಿಲ್ಲ. ಆಗ್ಗಾಗೆ ಸಾಮಾಜಿಕ ಜಾಲತಾಣಗಳಲ್ಲಿ ಮೂಲಕ ಕನ್ನಡ ಮೇಲಿನ ಭಾಷಾ ಅಭಿಮಾನವನ್ನು ವ್ಯಕ್ತಪಡಿಸುವ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ.

Published: 02nd November 2019 05:57 PM  |   Last Updated: 02nd November 2019 06:08 PM   |  A+A-


Anushka_Shetty

ಅನುಷ್ಕಾ ಶೆಟ್ಟಿ

Posted By : Nagaraja AB
Source : Online Desk

ಬೆಂಗಳೂರು: ತೆಲುಗಿನ ಬಹುಬೇಡಿಕೆಯ ನಟಿ  ಅನುಷ್ಕಾ ಶೆಟ್ಟಿಗೆ ತನ್ನ ತಾಯಿ ನೆಲದ ಮೇಲಿನ ಪ್ರೀತಿ ಕೊಂಚವೂ ಕೂಡಾ ಕಡಿಮೆಯಾಗಿಲ್ಲ. ಆಗ್ಗಾಗೆ ಸಾಮಾಜಿಕ ಜಾಲತಾಣಗಳಲ್ಲಿ ಮೂಲಕ ಕನ್ನಡ ಮೇಲಿನ ಭಾಷಾ ಅಭಿಮಾನವನ್ನು ವ್ಯಕ್ತಪಡಿಸುವ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ.

ಇತ್ತೀಚಿಗೆ ತಮ್ಮ ತಾಯಿಯ ಹುಟ್ಟುಹಬ್ಬಕ್ಕೆ ಕನ್ನಡದಲ್ಲಿಯೇ ಶುಭಾಶಯ ಕೋರಿದ್ದ ಬಾಹುಬಲಿ ಖ್ಯಾತಿಯ ಅನುಷ್ಕಾ ಶೆಟ್ಟಿ, ಇದೀಗ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡದಲ್ಲಿಯೇ ಶುಭಾಶಯ ಕೋರುವ ಮೂಲಕ ಮತ್ತೊಮ್ಮೆ ಸಮಸ್ತ ಕನ್ನಡಿಗರ ಹೃದಯ ಗೆದ್ದಿದ್ದಾರೆ.

ಈ ದಿನ ನಮ್ಮ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಆಚರಿಸುವಲ್ಲಿ ಹೆಮ್ಮೆ ಪಡೋಣ ಮತ್ತು ವರ್ಷವಿಡೀ ಪ್ರತಿಯೊಂದು ಕ್ಷಣವನ್ನೂ ಹೀಗೆ ಮುಂದುವರಿಸೋಣ, ಪ್ರಪಂಚದಾದ್ಯಂತ ಇರುವ ಎಲ್ಲಾ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ  ಶುಭಾಶಯಗಳು ಎಂದು ಅನುಷ್ಕಾ ಶೆಟ್ಟಿ ತಮ್ಮ ಇನ್ಸಾಟಾ ಗ್ರಾಂ ಖಾತೆಯಲ್ಲಿ ಅಚ್ಚ ಕನ್ನಡದಲ್ಲಿಯೇ  ಪೋಸ್ಟ್ ಮಾಡಿದ್ದಾರೆ.

 
 
 
 
 
 
 
 
 
 
 
 
 

#ಕನ್ನಡರಾಜ್ಯೋತ್ಸವ to all the people of #Karnataka

A post shared by Anushka Shetty (@anushkashettyofficial) on

 

ಮೂಲತ: ಮಂಗಳೂರಿನ ಅನುಷ್ಕಾ ಶೆಟ್ಟಿ, ಕನ್ನಡದಲ್ಲಿ ಅವಕಾಶ ಸಿಗದೆ ನೆರೆಯ ತೆಲುಗು ಚಿತ್ರರಂಗದಲ್ಲಿ ತಮ್ಮ ಮನಮೋಹಕ ಅಭಿನಯದ ಮೂಲಕ  ಉತ್ತುಂಗದ ಶಿಖರವೇರಿದ್ದಾರೆ. ಅಲ್ಲದೇ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ.

ಕನ್ನಡ ಮೂಲಕ  ಚಿತ್ರರಂಗ ಪ್ರವೇಶಿಸಿದ  ಕೆಲವರು, ಬೇರೆ ಭಾಷೆಯತ್ತ ಹೊರಳಿದಾಗ ಮಾತೃಭಾಷೆಯನ್ನು ನಿರ್ಲಕ್ಷಿಸುತ್ತಾರೆ ಅಂತಹವರ ಮಧ್ಯೆ ಟಾಲಿವುಡ್ ನಲ್ಲಿ ಸ್ಟಾರ್ ನಟಿಯಾದರೂ ತನ್ನ ಮಾತೃ ಭಾಷೆಯ ಮೇಲಿನ ಅಭಿಮಾನ, ಗೌರವವನ್ನು ಅನುಷ್ಕಾ ಶೆಟ್ಟಿ ಕೊಂಚವೂ ಕಡಿಮೆ ಮಾಡದಿರುವುದು ಕನ್ನಡಿಗರ ಹೆಮ್ಮೆಯ ಸಂಗತಿಯಾಗಿದೆ.

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp