'ವೀರಂ' ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಜೊತೆ ರಚಿತಾ ರಾಮ್

ಸ್ಯಾಂಡಲ್ ವುಡ್ ನಲ್ಲಿ ಸದ್ಯ ರಚಿತಾ ರಾಮ್ ಫುಲ್ ಬ್ಯುಸಿ ನಟಿ. ಡೈನಾಮಿಕ್​ ಪ್ರಿನ್ಸ್ ಪ್ರಜ್ವಲ್​ ದೇವರಾಜ್ ಕೂಡ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ವೀರಂ ಅನ್ನೋ ಮತ್ತೊಂದು ಚಿತ್ರಕ್ಕೆ ಗ್ರೀನ್​ಸಿಗ್ನಲ್ ಕೊಟ್ಟಿದ್ದಾರೆ.

Published: 06th November 2019 12:12 PM  |   Last Updated: 06th November 2019 12:12 PM   |  A+A-


Rachita Ram

ರಚಿತಾ ರಾಮ್

Posted By : Shilpa D
Source : The New Indian Express

ಸ್ಯಾಂಡಲ್ ವುಡ್ ನಲ್ಲಿ ಸದ್ಯ ರಚಿತಾ ರಾಮ್ ಫುಲ್ ಬ್ಯುಸಿ ನಟಿ. ಡೈನಾಮಿಕ್​ ಪ್ರಿನ್ಸ್ ಪ್ರಜ್ವಲ್​ ದೇವರಾಜ್ ಕೂಡ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ವೀರಂ ಅನ್ನೋ ಮತ್ತೊಂದು ಚಿತ್ರಕ್ಕೆ ಗ್ರೀನ್​ಸಿಗ್ನಲ್ ಕೊಟ್ಟಿದ್ದಾರೆ.

ವಿಶೇಷ ಅಂದರೆ ಈ ಚಿತ್ರದಲ್ಲಿ ಡಿಂಪಲ್​ಕ್ವೀನ್​ ರಚಿತಾ ರಾಮ್​ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದಾರೆ, ಖದರ್​ ಕುಮಾರ್​ ನಿರ್ದೇಶನದ ವೀರಂ ಸಿನಿಮಾ ಹೊಸ ವರ್ಷದಲ್ಲಿ ಸೆಟ್ಟೇರಲಿದ್ದು, ಪ್ರಜ್ವಲ್- ರಚಿತಾ ರಾಮ್​ ಡ್ಯುಯೆಟ್​ ನೋಡೋಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ. 

ಮುಂದಿನ ತಿಂಗಳ ಅಥವಾ 2020ರ ಪ್ರಾರಂಭದಲ್ಲಿ ‘ವೀರಂ’ ಸಿನಿಮಾ ಶುರು ಆಗಲಿದೆ. ಈ ಸಿನಿಮಾದ ಮೂಲಕ ಮೊದಲ ಬಾರಿಗೆ ಪ್ರಜ್ವಲ್ ಹಾಗೂ ರಚಿತಾ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕಮರ್ಷಿಯಲ್ ಅಂಶಗಳನ್ನು ಒಳಗೊಂಡಿರುವ ರೌಡಿಸಂ ಸಿನಿಮಾ ಇದಾಗಿದೆ ಎಂದು ಹೇಳಲಾಗುತ್ತಿದೆ. ಶಶಿಧರ್ ಕೆಎಂ ಮತ್ತು ರಘು ಸಿಂಗಂ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
 

Stay up to date on all the latest ಸಿನಿಮಾ ಸುದ್ದಿ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp