'ಮದಗಜ' ಚಿತ್ರತಂಡ ಸೇರಿಕೊಳ್ಳಲಿರುವ ಪ್ರಶಾಂತ್ ನೀಲ್

ಶ್ರೀಮುರಳಿ ಅಭಿನಯದ, ಮಹೇಶ್ ಕುಮಾರ್ ನಿರ್ದೇಶನದ ಚಿತ್ರ "ಮದಗಜ" ಇದೇ ನವೆಂಬರ್ ನಲ್ಲಿ ಸೆಟ್ತೇರಲಿದೆ ಎಂದು ಮೊದಲು ಸುದ್ದಿಯಾಗಿತ್ತು. ಆದರೆ ಇದೀಗ ಚಿತ್ರದ ಪ್ರಾರಂಭಕ್ಕೆ ಇನ್ನಷ್ಟು ಸಮಯಾವಕಾಶ ಬೇಕಿದೆ ಎಂದು ವರದಿಯಾಗಿದೆ.

Published: 07th November 2019 11:10 AM  |   Last Updated: 07th November 2019 01:41 PM   |  A+A-


ಶ್ರೀಮುರಳಿ

Posted By : Raghavendra Adiga
Source : The New Indian Express

ಶ್ರೀಮುರಳಿ ಅಭಿನಯದ, ಮಹೇಶ್ ಕುಮಾರ್ ನಿರ್ದೇಶನದ ಚಿತ್ರ "ಮದಗಜ" ಇದೇ ನವೆಂಬರ್ ನಲ್ಲಿ ಸೆಟ್ತೇರಲಿದೆ ಎಂದು ಮೊದಲು ಸುದ್ದಿಯಾಗಿತ್ತು. ಆದರೆ ಇದೀಗ ಚಿತ್ರದ ಪ್ರಾರಂಭಕ್ಕೆ ಇನ್ನಷ್ಟು ಸಮಯಾವಕಾಶ ಬೇಕಿದೆ ಎಂದು  ವರದಿಯಾಗಿದೆ. ಇದಕ್ಕೆ ಕಾರಣವೆಂದರೆ ನಿರ್ದೇಶಕ ಪ್ರಶಾಂತ್ ನೀಲ್ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ಈ ವಿಚಾರವನ್ನು ನಿರ್ಮಾಪಕ ಉಮಾಪತಿ ಎಸ್. ಸ್ವತಃ ಬಹಿರಂಗಪಡಿಸಿದ್ದಾರೆ.

ಪ್ರಶಾಂತ್ ನೀಲ್  ನಿರ್ದೇಶನದ ಚೊಚ್ಚಲ ಚಿತ್ರ ಉಗ್ರಂ-ಶ್ರೀಮುರಳಿಯವರ ವೃತ್ತಿಜೀವನದಲ್ಲಿ ಮಹತ್ವದ ಮೈಲಿಗಲ್ಲನ್ನು ಸೃಷ್ಟಿಸಿತ್ತು. ಅಂದಿನಿಂದ ಈ ನಿರ್ದೇಶಕ-ನಟ ಜೋಡಿ ಉತ್ತಮ ಬಾಂಧವ್ಯವನ್ನು ಉಳಿಸಿಕೊಂಡಿದೆ ಎನ್ನುವುದು ಎಲ್ಲರಿಗೆ ಗೊತ್ತಿರುವ ಸಂಗತಿ. ಸಧ್ಯ ಕೆಜಿಎಫ್ ಚಾಪ್ಟರ್- 2 ಚಿತ್ರದ ಬಿಡುವಿಲ್ಲದ ಶೆಡ್ಯೂಲ್ ನಲ್ಲಿಯೂ ಪ್ರಶಾಂತ್ ನೀಲ್ ಮದಗಜ ಸ್ಕ್ರಿಪ್ಟ್ ಅನ್ನು ನೋಡುತ್ತಿದ್ದಾರೆ.

"ಮಹೇಶ್ ಪ್ರಶಾಂತ್ ನೀಲ್ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ, ಮತ್ತುನಿರ್ದೇಶಕರು ಈ ಯೋಜನೆಯೊಂದಿಗೆ ತೊಡಗಿಸಿಕೊಳ್ಳುವವರಿದ್ದಾರೆ. ಎಂದು ತಿಳಿಸಲು ನನಗೆ ಸಂತಸವಾಗಿದೆ.ಸ್ಕ್ರಿಪ್ಟ್ ಉತ್ತಮವಾಗಿ ರೂಪುಗೊಳ್ಳುತ್ತಿದೆ, ಮತ್ತು ಅವರ ಸಹಕಾರದೊಡನೆ ಕಥೆ ಉತ್ತಮವಾಗಿ ರೂಪುಗೊಳ್ಳುತ್ತದೆ" ನಿರ್ಮಾಪಕ ಉಮಾಪತಿ ಹೇಳಿದರು. ಕಥೆ ಅಂತಿಮ ರೂಪ ಪಡೆದ ಬಳಿಕ ಚಿತ್ರೀಕರಣ ಪ್ರಾರಂಭವಾಗಲಿದೆ. "ಯೋಜನೆಯು ಡಿಸೆಂಬರ್ ಅಥವಾ 2020 ರ ಜನವರಿಯಲ್ಲಿ ಪ್ರಾರಂಭವಾಗಲಿದೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅಯೋಗ್ಯ ಚಿತ್ರದ ಮೂಲಕ ನಿರ್ದೇಸನ ಕ್ಷೇತ್ರಕ್ಕೆ ಇಳಿದ ಮಹೇಶ್ ತಮ್ಮ ಎರಡನೇ ಚಿತ್ರಕ್ಕಾಗಿ ಶ್ರೀಮುರಳಿಯವರನ್ನು ಸೇರಿಕೊಳ್ಳುತ್ತಿದ್ದಾರೆ.  ಈ ಚಿತ್ರವು ಆಕ್ಷನ್ ಫ್ಲಿಕ್  ಎಂದು ಹೇಳಲಾಗಿದ್ದು ಜತೆ ಜತೆಗೇ ಕುಟುಂಬದ ಭಾವನಾತ್ಮಕ ಕಥೆಯನ್ನೂ ಹೊಂದಿದೆ.ನಟ ಶ್ರೀಮುರಳಿ ಇದರಲ್ಲಿ ಎನ್.ಆರ್.ಐ. ಆಗಿ ಕಾಣಿಸಿಕೊಳ್ಲಲಿದ್ದಾರೆ.ವಿದ್ಯಾ ಶ್ರೀಮುರಳಿಗಾಗಿ ಕಾಸ್ಟ್ಯೂಮ್ ತಯಾರಿಯಲ್ಲಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ, ಶ್ರೀಶ ಕುಡುವಳ್ಳಿ ಛಾಯಾಗ್ರಹಣವಿದೆ. ಚಿತ್ರಕ್ಕೆ ನಾಯಕಿ ಸೇರಿ ಇತರೆ ಪಾತ್ರವರ್ಗದ ಆಯ್ಕೆ ಇನ್ನಷ್ತೇ ನಡೆಯಬೇಕಿದೆ.

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp