ಕೆಜಿಎಫ್ ಚಿತ್ರದ ಸಂಗೀತ ನಿರ್ದೇಶಕ ರವಿ ಬಸ್ರೂರ್ ಕಿಡ್ನಾಪ್? ವಿಡಿಯೋ!
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದ ರವಿ ಬಸ್ರೂರ್ ಅವರ ಕಿಡ್ನಾಪ್ ಆಗಿದ್ದಾರೆ ಎನ್ನಲಾದ ವಿಡಿಯೋವನ್ನು ಆಗಂತುಕರು ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ.
Published: 10th November 2019 04:25 PM | Last Updated: 10th November 2019 04:25 PM | A+A A-

ರವಿ ಬಸ್ರೂರ್
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದ ರವಿ ಬಸ್ರೂರ್ ಅವರ ಕಿಡ್ನಾಪ್ ಆಗಿದ್ದಾರೆ ಎನ್ನಲಾದ ವಿಡಿಯೋವನ್ನು ಆಗಂತುಕರು ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ.
ರವಿ ಬಸ್ರೂರ್ ನಿರ್ದೇಶನದ ಗಿರ್ಮಿಟ್ ಚಿತ್ರ ಕಳೆದ ವಾರ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಇನ್ನು ಚಿತ್ರದ ಕುರಿತಂತೆ ವಿಭಿನ್ನವಾಗಿ ಪ್ರಮೋಷನ್ ಮಾಡಲು ಚಿತ್ರತಂಡ ಈ ರೀತಿಯ ವಿಡಿಯೋವನ್ನು ಮಾಡಿ ಯೂಟ್ಯೂಬ್ ಗೆ ಅಪ್ಲೋಡ್ ಮಾಡಿದ್ದಾರೆ.
ಗಿರ್ಮಿಟ್ ಚಿತ್ರದಲ್ಲಿ ನಟಿಸಿದ ಮಕ್ಕಳೆ ನಿರ್ದೇಶಕರನ್ನು ಕಿಡ್ನಾಪ್ ಮಾಡಿ ಹಲವು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯುತ್ತಾರೆ. ಕೊನೆಗೆ ತಾವು ಹೀಗೆ ಮಾಡಿದ್ದು ಯಾಕೆ ಎಂದು ಹೇಳಿಕೊಂಡಿದ್ದಾರೆ.