ಕೇಕ್ ಮಿಕ್ಸಿಂಗ್ ನಲ್ಲಿ ಭಾಗವಹಿಸಿ ಮೇರಿ ಕ್ರಿಸ್ ಮಸ್ ಎಂದ ರಾಗಿಣಿ ದ್ವಿವೇದಿ

ಕ್ರಿಸ್ ಮಸ್ ಹಬ್ಬ ಸಮಿಪಿಸುತ್ತಿರುವ ಹಿನ್ನೆಲೆಯಲ್ಲಿ ವಿವಿಡಸ್ ಹೊಟೇಲ್ ನಲ್ಲಿ ಖ್ಯಾತ ನಟಿ ರಾಗಿಣೆ ದ್ವಿವೇದಿ ಕೇಕ್ ಮಿಕ್ಸಿಂಗ್ ಮಾಡುವ ಮೂಲಕ ಕ್ರಿಸ್ ಮಸ್ ಹಬ್ಬಕ್ಕೆ ಶುಭ ಕೋರಿದರು. 
ರಾಗಿಣಿ ದ್ವಿವೇದಿ
ರಾಗಿಣಿ ದ್ವಿವೇದಿ

ಕ್ರಿಸ್ ಮಸ್ ಹಬ್ಬ ಸಮಿಪಿಸುತ್ತಿರುವ ಹಿನ್ನೆಲೆಯಲ್ಲಿ ವಿವಿಡಸ್ ಹೊಟೇಲ್ ನಲ್ಲಿ ಖ್ಯಾತ ನಟಿ ರಾಗಿಣೆ ದ್ವಿವೇದಿ ಕೇಕ್ ಮಿಕ್ಸಿಂಗ್ ಮಾಡುವ ಮೂಲಕ ಕ್ರಿಸ್ ಮಸ್ ಹಬ್ಬಕ್ಕೆ ಶುಭ ಕೋರಿದರು.

ಕ್ರಿಸ್ ಮಸ್ ಹಬ್ಬ ಒಂದು ತಿಂಗಳು ಬಾಕಿ ಇರುವಾಗಲೇ ಕೇಕ್ ತಯಾರಿಯಲ್ಲಿ ಭಾಗವಹಿಸುತ್ತಿರುವುದು ನನಗೆ ಸಂತಸ ತಂದಿದೆ ಎಂದರು.

ಅವರೊಂದಿಗೆ ಮಿಸ್ಟರ್ ಇಂಡಿಯಾ ಕರ್ನಾಟಕ ಶುಭಾ ಶ್ರೀರಾಮ್, ತಮಿಳು ಕಲಾವಿದ ಡ್ಯಾನಿ, ಹೊಟೇಲ್ ನ ಶೇಫ್, ಸಿಬ್ಬಂದಿಗಳು ಮತ್ತು ಅತಿಥಿಗಳು ಒಟ್ಟಿಗೆ ಟೇಬಲ್‌ನ ಎದುರು ಸಾಲಾಗಿ ನಿಂತು ಬಣ್ಣ ಬಣ್ಣದ ಚೆರ್ರಿಗಳು, ಖರ್ಜೂರ, ಪ್ಲಮ್ ಹಣ್ಣು, ಅಂಜೂರದ ಹಣ್ಣುಗಳು, ವಿವಿಧ ಬಗೆಯ ಒಣಹಣ್ಣುಗಳ ಮೇಲೆ ಜೇನುತುಪ್ಪ, ರಮ್ ಸುರಿದು ಹದವಾಗಿ ಕೇಕ್ ಮಿಕ್ಸಿಂಗ್ ಮಾಡುತ್ತಾ ಕ್ರಿಸ್ ಮಸ್ ಹಬ್ಬದ ಸಡಗರವನ್ನು ಸಂಭ್ರಮಿಸಿದರು.

ಪ್ಲಮ್ಕೇಕ್” ಎನ್ನುವುದು ಒಂದೆರಡು ದಿನಗಳಲ್ಲಿ ತಯಾರಾಗುವುದಿಲ್ಲ, ಅದು ತಿಂಗಳುಗಳ ಕಾಲ ನಡೆವ ಪ್ರಕ್ರಿಯೆಯಾಗಿದೆ. ಮುಂದಿನ ತಿಂಗಳು ಕ್ರಿಸ್ ಮಸ್ ಬರುವವರೆಗೆ ಅದನ್ನು ಹಾಗೆಯೇ ಇಟ್ಟು ಬಳಿಕ ಸೇವಿಸಲಾಗುವುದು. ಇದಕ್ಕೆ ಕೇವಲ ರಮ್ ಅನ್ನು ಮಾತ್ರ ಮಿಶ್ರಣ ಮಾಡಲಾಗುವುದು, ವೈನ್ ಅಥವಾ ಮದ್ಯ ಬೆರೆಸಲಾಗುವುದಿಲ್ಲ. ಅದುವೇ ಇದರ ವೈಶಿಷ್ಟ್ಯವಾಗಿರಲಿದೆ ಎಂದು ಶೆಫ್ ಅಖಿಲ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com