ಯಾವುದೇ ಪರಿಸ್ಥಿತಿಯಲ್ಲೂ ಚಿತ್ರರಂಗ ಬಿಡುವುದಿಲ್ಲ: ರಾಧಿಕಾ ಕುಮಾರಸ್ವಾಮಿ

ರಾಧಿಕಾ ಕುಮಾರಸ್ವಾಮಿ ಅವರು ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿರುವಾಗಲೇ ಚಿತ್ರರಂಗದಿಂದ ಕೆಲ ಸಮಯ ದೂರ ಉಳಿದಿದ್ದರು, ಇದು ಅವರು ಮಾಡಿದ ತಪ್ಪು ಎಂಬ  ಮಾತುಗಳು ಕೇಳಿ ಬಂದಿದ್ದವು. 

Published: 12th November 2019 10:53 AM  |   Last Updated: 12th November 2019 10:53 AM   |  A+A-


Radhika Kumaraswamy

ರಾಧಿಕಾ ಕುಮಾರಸ್ವಾಮಿ

Posted By : Shilpa D
Source : The New Indian Express

ರಾಧಿಕಾ ಕುಮಾರಸ್ವಾಮಿ ಅವರು ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿರುವಾಗಲೇ ಚಿತ್ರರಂಗದಿಂದ ಕೆಲ ಸಮಯ ದೂರ ಉಳಿದಿದ್ದರು, ಇದು ಅವರು ಮಾಡಿದ ತಪ್ಪು ಎಂಬ  ಮಾತುಗಳು ಕೇಳಿ ಬಂದಿದ್ದವು. 

ಆದರೆ ಬ್ರೇಕ್ ತೆಗೆದುಕೊಂಡು ಮತ್ತೆ  ಚಿತ್ರರಂಗಕ್ಕೆ ಪ್ರವೇಶಿಸಿದ ಮೇಲೆ ಅವರ ಅಭಿಮಾನಿಗಳು ಅವರನ್ನು ಅಷ್ಟೇ ಪ್ರೀತಿಯಿಂದ ಬರ ಮಾಡಿಕೊಂಡಿದ್ದರು. 

ಅತಿ ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಚಿತ್ರರಂಗ ಪ್ರವೇಶಿಸಿದ ರಾಧಿಕಾ ನಿನಗಾಗಿ, ತವರಿಗೆ ಬಾ, ತಾಯಿ ಇಲ್ಲದ ತಬ್ಬಲಿ, ಆಟೋ ಶಂಕರ್, ಅಣ್ಣ ತಂಗಿ, ಮಂಡ್ಯ ಮತ್ತು ಅನಾಥರು ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ, 2008ರಲ್ಲಿ ಚಿತ್ರರಂಗದಿಂದ ದೂರ ಉಳಿದಿದ್ದರು. ನಂತರ 7 ವರ್ಷಗಳ ನಂತರ ಮತ್ತೆ 2013 ರಲ್ಲಿ ಮತ್ತೆ ವಾಪಾಸ್ ಬಂದು ಸ್ವೀಟಿ ನನ್ನ ಜೋಡಿ ಸಿನಿಮಾದಲ್ಲಿ ನಟಿಸಿದ್ದಾರೆ.

ನಾನು ವಾಪಸ್ ಬಂದಾಗ ಪ್ರೇಕ್ಷಕರು ನನ್ನನ್ನು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎಂಬ ಭಯವಿತ್ತು, ಆದರೆ ನಾನು ಎಣಸಿದ್ದಕ್ಕಿಂತ ಚೆನ್ನಾಗಿ ಅಭಿಮಾನಿಗಳು ನನ್ನನ್ನು ಸ್ವಾಗತಿಸಿದರು, ನಾನು ಏಕೆ ಬಂದೆ ಎಂಬ ಬಗ್ಗೆ ಯಾರು ನನ್ನನ್ನು ಕೇಳಲಿಲ್ಲ, ನಾನು ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿಲ್ಲ, ಆದರೆ ಇಂದಿಗೂ ಕೂಡ ನನ್ನ ಸಿನಿಮಾಗಳಿಗಾಗಿ  ಪ್ರೇಕ್ಷಕರು ಕಾಯುತ್ತಾರೆ, ಇದು ನನನೆ ತೋರುತ್ತಿರುವ ಬೆಂಬಲ ಎಂದು ತಿಳಿಸಿದ್ದಾರೆ.

ಸಿನಿಮಾ ನನ್ನನ್ನು ಇಲ್ಲಿಯವರೆಗೂ ನನ್ನನ್ನು ಕರೆದುಕೊಂಡು ಬಂದಿದೆ, ಯಾವುದೇ ಕಾರಣಕ್ಕೂ ನಾನು ಚಿತ್ರರಂದದಿಂದ ದೂರ ಉಳಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ಹುಟ್ಟುಹಬ್ಬದಂದು ಮಾತನಾಡಿದ ರಾಧಿಕಾ ತಮ್ಮ ಮಗಳು ಶಮಿಕಾ ದರ್ಶನ್ ಅವರ ದೊಡ್ಡ ಅಭಿಮಾನಿ ಎಂದು ಹೇಳಿದ್ದಾರೆ,

ಮತ್ತೊಮ್ಮೆ ಅವಕಾಶ ಸಿಕ್ಕರೆ ದರ್ಶನ್ ಅವರ ಜೊತೆ ನಟಿಸುವುದಾಗಿ ಹೇಳಿದ್ದಾರೆ, ತಾವು ದರ್ಶನ್ ಜೊತೆ ನಟಿಸಿರುವ ಅನಾಥರು ಸಿನಿಮಾ ದೃಶ್ಯಗಳನ್ನು ಯೂ ಟ್ಯೂಬ್ ನಲ್ಲಿ ಪದೇ ಪದೇ ನೋಡುವುದಾಗಿ ತಿಳಿಸಿದ್ದಾರೆ,

Stay up to date on all the latest ಸಿನಿಮಾ ಸುದ್ದಿ news
Poll
school

ರಾಷ್ಟ್ರೀಯ ಶಿಕ್ಷಣ ನೀತಿ-2020: 5 ನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಮಾತೃಭಾಷೆಯಲ್ಲಿ ಕಲಿಸುವ ಪ್ರಸ್ತಾಪವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp