ನಟ ಯಶ್ ಮುಡಿಗೆ ಮತ್ತೊಂದು ಗರಿ: ಪ್ರಭಾವಶಾಲಿ ಯುವ ಭಾರತೀಯರ ಪಟ್ಟಿಯಲ್ಲಿ ರಾಕಿ ಬಾಯ್
ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಜಿಕ್ಯೂ ಇಂಡಿಯಾ ನೀಡುವ ದೇಶದ 50 ಅತ್ಯಂತ ಪ್ರಭಾವಿ ಯುವಕ ಭಾರತೀಯ ಪಟ್ಟಿಯಲ್ಲಿ ಯಶ್ ಹೆಸರು ಕೂಡ ಸೇರ್ಪಡೆಗೊಂಡಿದ್ದು, ದೇಶದ 50 ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರು ಎಂಬ ಹೆಗ್ಗಳಿಕೆಗೆ ಯಶ್ ಪಾತ್ರರಾಗಿದ್ದಾರೆ.
Published: 12th November 2019 01:41 PM | Last Updated: 12th November 2019 01:41 PM | A+A A-

ಪ್ರಶಸ್ತಿ ಪಡೆದ ಯಶ್
ರಾಕಿಂಗ್ ಸ್ಟಾರ್ ಯಶ್ ದಿ ಜಿಕ್ಯೂ 50 ಅತ್ಯಂತ ಪ್ರಭಾವಶಾಲಿ ಯುವ ಭಾರತೀಯರ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ.
ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಜಿಕ್ಯೂ ಇಂಡಿಯಾ ನೀಡುವ ದೇಶದ 50 ಅತ್ಯಂತ ಪ್ರಭಾವಿ ಯುವಕ ಭಾರತೀಯ ಪಟ್ಟಿಯಲ್ಲಿ ಯಶ್ ಹೆಸರು ಕೂಡ ಸೇರ್ಪಡೆಗೊಂಡಿದ್ದು, ದೇಶದ 50 ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರು ಎಂಬ ಹೆಗ್ಗಳಿಕೆಗೆ ಯಶ್ ಪಾತ್ರರಾಗಿದ್ದಾರೆ.
ದಿ ಜಿ ಕ್ಯೂ 50 ಅತ್ಯಂತ ಪ್ರಭಾವಶಾಲಿ ಯುವ ಭಾರತೀಯರ ಪಟ್ಟಿಯಲ್ಲಿ ರಾಕಿ ಭಾಯ್ ಅಗ್ರ ಶ್ರೇಷ್ಠರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ನಿನ್ನೆ ಸಂಜೆ ಮುಂಬೈನಲ್ಲಿ ನಡೆದ ದಿ ಜೀ ಕ್ಯೂ 50 ಅತ್ಯಂತ ಪ್ರಭಾವಶಾಲಿ ಯುವ ಭಾರತೀಯರು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ 50 ಅತ್ಯಂತ ಪ್ರಭಾವಶಾಲಿ ಯುವ ಭಾರತೀಯರು ಭಾಗವಹಿಸಿದ್ದು, ಕಾರ್ಯಕ್ರಮದ ಮುಖ್ಯ ಅತಿಥಿ ಕರಣ್ ಜೋಹಾರ್ ಅವರಿಂದ ರಾಕಿಂಗ್ ಸ್ಚಾರ್ ಗೆ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ.
ಅಮೇರಿಕಾದ ನ್ಯೂಯಾರ್ಕ್ ಮೂಲದ ಅಂತರಾಷ್ಟ್ರೀಯ ಜಿ ಕ್ಯೂ ಪುರುಷರ ಮಾಸ ಪತ್ರಿಕೆ, ದಿ ಜಿ ಕ್ಯೂ ಇಂಡಿಯಾ ಆಯೋಜಿಸಿದ್ದ, ಜಿಕ್ಯೂ 50 ಅತ್ಯಂತ ಪ್ರಭಾವಶಾಲಿ ಯುವ ಭಾರತೀಯರು (The GQ 50 Most Influential Young Indians ) ಪಟ್ಟಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ಪ್ರಮುಖ ಸ್ಥಾನ ಪಡೆದುಕೊಂಡಿದ್ದಾರೆ
ಭಾರತದ 50 ಶ್ರೇಷ್ಠ ಯುವ ಪ್ರಭಾವಶಾಲಿಗಳಿಗೆ ಜೀ ಕ್ಯೂ ಇಂಡಿಯಾ ಪ್ರಶಸ್ತಿಯನ್ನ ನೀಡಿ ಪುರಸ್ಕರಿಸಿದೆ. ವಿಶೇಷ ಅಂದ್ರೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರೋ ಈ 50 ಯುವ ಭಾರತೀಯರು ಒಂದೇ ವೇದಿಕೆಯಲ್ಲಿ ಸೇರಿಸಿ ದಿ ಜೀ ಕ್ಯೂ ಕಾರ್ಯಕ್ರಮವನ್ನ ಮಾಡಿದೆ.
Truly humbled & honoured to be a part of @GQIndia’s 50 Most Influential Young Indians list. Thank you for recognising the growth and the story we are weaving together as an industry. Thank you to all my fans & well wishers for their continued support and blessings!#TheNameIsYash pic.twitter.com/JwdH7xuUsL
— Yash (@TheNameIsYash) November 12, 2019