ಡಾ. ರಾಜ್ ಸಹೋದರಿ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

ವರನಟ ಡಾ. ರಾಜಕುಮಾರ್ ಸಹೋದರಿ ನಾಗಮ್ಮನವರ ಆರೋಗ್ಯದಲ್ಲಿ ಏರುಪೇರಾಗಿದ್ದು ಬೆಂಗಳೂರು ನಗರದ ಜೆಎಸ್ಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. 
ಡಾ. ರಾಜ್ ಸಹೋದರಿ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

ಬೆಂಗಳೂರು: ವರನಟ ಡಾ. ರಾಜಕುಮಾರ್ ಸಹೋದರಿ ನಾಗಮ್ಮನವರ ಆರೋಗ್ಯದಲ್ಲಿ ಏರುಪೇರಾಗಿದ್ದು ಬೆಂಗಳೂರು ನಗರದ ಜೆಎಸ್ಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ವಯೋಸಹಜ ಅನಾರೋಗ್ಯಕ್ಕೀಡಾಗಿರುವ ನಾಗಮ್ಮ ಅವರನ್ನು ಕಾಣಲು ನಟ, ನಿರ್ಮಾಪಕ ರಾಘವೇಂದ್ರ ರಾಜಕುಮಾರ್ ಪತ್ನಿ ಆಸ್ಪತ್ರೆಗೆ ಭೇಟಿ ಇತ್ತಿದ್ದಾರೆ.

ಕರ್ನಾಟಕ-ತಮಿಳುನಾಡು ಗಡಿ ಪ್ರದೇಶ ಗಾಜನೂರಿನಲ್ಲಿ ವಾಸವಿದ್ದ ನಾಗಮ್ಮ ರಾಜಕುಮಾರ್ ಅವರಿಗೆ ಸಾಕಷ್ಟು ಸಮಯದಲ್ಲಿ ಬೆಂಬಲವಾಗಿ ನಿಂತಿದ್ದರು.

ಇನ್ನು ಹೆಚ್ಚಿನ ಚಿಕಿತ್ಸೆಗಾಗಿ ಶನಿವಾರ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ವರ್ಗಾಯಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com