`ಮುಗಿಲ್‌ಪೇಟೆ’ಯಲ್ಲಿ ಕ್ರೇಜಿ ಸ್ಟಾರ್ ಪುತ್ರನ ಮಾಸ್ ಲುಕ್!

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ರವಿಚಂದ್ರನ್ ಹೆಸರು 'ಮನುರಂಜನ್ ರವಿಚಂದ್ರನ್’ ಆಗಿ ಬದಲಾಗಿದ್ದು, `ಮುಗಿಲ್‌ಪೇಟೆ’ ಚಿತ್ರದಲ್ಲಿ ಮಾಸ್ ಕ್ಲಾಸ್ ಹೀರೋ ಆಗಿ ಕಾಣಿಸಿಕೊಳ್ಳಲು ಬೇಕಾದ ಎಲ್ಲ ತಯಾರಿ ಮಾಡಿಕೊಂಡಿದ್ದಾರೆ.
ಮನುರಂಜನ್
ಮನುರಂಜನ್

ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ರವಿಚಂದ್ರನ್ ಹೆಸರು 'ಮನುರಂಜನ್ ರವಿಚಂದ್ರನ್’ ಆಗಿ ಬದಲಾಗಿದ್ದು, `ಮುಗಿಲ್‌ಪೇಟೆ’ ಚಿತ್ರದಲ್ಲಿ ಮಾಸ್ ಕ್ಲಾಸ್ ಹೀರೋ ಆಗಿ ಕಾಣಿಸಿಕೊಳ್ಳಲು ಬೇಕಾದ ಎಲ್ಲ ತಯಾರಿ ಮಾಡಿಕೊಂಡಿದ್ದಾರೆ.

ಇತ್ತೀಚೆಗಷ್ಟೆ ಮುಹೂರ್ತ ನೆರವೇರಿಸಿಕೊಂಡಿರುವ 'ಮುಗಿಲ್‌ಪೇಟೆ’ ಚಿತ್ರದ ಚಿತ್ರೀಕರಣ ಇದೇ ೨೮ ರಿಂದ ಸಕಲೇಶಪುರದಲ್ಲಿ ಮೊದಲ ಹಂತದಲ್ಲಿ ಪ್ರಾರಂಭವಾಗಲಿದೆ. ಬಳಿಕ ಕುದುರೆಮುಖ, ತೀರ್ಥಹಳ್ಳಿ, ಸಾಗರ, ಕಾಸರಗೋಡು ಸುತ್ತಮುತ್ತಲಿನ ಪ್ರದೇಶದಲ್ಲಿ ಚಿತ್ರೀಕರಣ ನಡೆಸುವ ಯೋಜನೆಯಿದೆ.

ಲವ್, ಫೀಲ್, ಸೆಂಟಿಮೆಂಟ್, ಆಕ್ಷನ್, ಕಾಮಿಡಿ ಸೇರಿದಂತೆ ಎಲ್ಲವೂ ಹದವಾಗಿ ಬೆರೆತ ಹೂರಣದಂತೆ ಚಿತ್ರ ತಯಾರಾಗಲಿದೆ ಎಂದು ನಿರ್ದೇಶಕ ಭರತ್ ನಾವುಂದ ತಿಳಿಸಿದ್ದಾರೆ.

ಒಂದೇ ಚಿತ್ರದಲ್ಲಿ ಪ್ರೆಸೆಂಟ್ ಹಾಗೂ ಪಾಸ್ಟ್‌ನ ಎರಡು ಕಥೆಗಳಿದ್ದು, ಮನುರಂಜನ್ ಕೂಡ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
ಚಿತ್ರವನ್ನು ನನ್ನ ಸ್ನೇಹಿತರೇ ನಿರ್ಮಿಸುತ್ತಿದ್ದು, ೨ ವರ್ಷಗಳ ಹಿಂದೆಯೇ ಕಥೆ ಕೇಳಿದ್ದೆ. ರಕ್ಷಾ ವಿಜಯಕುಮಾರ್ ನನ್ನ ತಂಗಿಯ ಗೆಳತಿ ಕೂಡ ಭರತ್ ನಾವುಂದ ಕಥೆ ವಿವರಿಸಿದ ಕೂಡಲೇ ಒಪ್ಪಿಗೆ ಸೂಚಿಸಿದ್ದರು. ಇದರಲ್ಲಿ ಸಾಫ್ಟ್ ಹಾಗೂ ಮಾಸ್ ಎರಡೂ ಬಗೆಯ ರೋಲ್‌ಗಳಲ್ಲಿ ನಟಿಸಲಿದ್ದೇನೆ. ಹೇರ್‌ಸ್ಟೈಲ್ ಸ್ವಲ್ಪ ಚೇಂಜ್ ಆಗಿದ್ದು ಉದ್ದ ಕೂದಲಿದೆ. ಈ ಲುಕ್ ಅಪ್ಪನಿಗೂ ಇಷ್ಟವಾಗಿದೆ ಎಂದು ಮನುರಂಜನ್ ಅವರು ಹೇಳಿದ್ದಾರೆ.

ಜಿಮ್‌ನಲ್ಲಿ ಕಸರತ್ತು ಮಾಡಿ ಮೈಕಟ್ಟು ಹೆಚ್ಚಿಸಿಕೊಂಡಿರುವ ಮನುರಂಜನ್, ನಿರ್ಮಾಪಕರ ಒತ್ತಾಯದಂತೆ ಮಾಸ್ ಲುಕ್ ಗಾಗಿ ಈ ಮೈಕಟ್ಟು ಎಂದು ಹೇಳಿದರು.

ಮನುರಂಜನ್‌ಗೆ ಜೋಡಿಯಾಗಿ ಅಸ್ಸಾಂ ಮೂಲದ ಹಾಗೂ ಪ್ರಸ್ತುತ ಬೆಂಗಳೂರಿನಲ್ಲಿಯೇ ನೆಲೆಸಿರುವ ಕಯಾದು ಲೋಹಾರ್ ಬಿಕಾಂ ವಿದ್ಯಾರ್ಥಿನಿಯಾಗಿದ್ದು, 'ಮುಗಿಲ್‌ಪೇಟೆ’ ಅವರ ಮೊದಲ ಕನ್ನಡ ಚಿತ್ರ. ಚಿತ್ರದಲ್ಲಿ ಬಬ್ಲಿ ಹಾಗೂ ಮುಗ್ಧ ಯುವತಿಯ ಪಾತ್ರ ನನ್ನದು ಎಂದಿರುವ ಕಯಾದು, ಕನ್ನಡ ಕಲಿಯುತಿದ್ದು, ಕೆಲವೇ ದಿನಗಳಲ್ಲಿ ಸಂಪೂರ್ಣ ಕನ್ನಡದಲ್ಲೇ ಮಾತನಾಡುವುದಾಗಿ ಹೇಳಿದ್ದಾರೆ.

ಮೋತಿ ಮೂವಿ ಮೇಕರ್ಸ್ ಅವರ 'ಮುಗಿಲ್‌ಪೇಟೆ’ಗೆ ರಕ್ಷಾ ವಿಜಯ್‌ಕುಮಾರ್ ಹಾಗೂ ಮೋತಿ ಮಹೇಶ್ ಬಂಡವಾಳ ಹೂಡಿದ್ದಾರೆ.

ಚಿತ್ರದಲ್ಲಿ ರಂಗಾಯಣ ರಘು, ಅವಿನಾಶ್, ತಾರಾ, ಸಾಧು ಕೋಕಿಲ ಸೇರಿದಂತೆ ಹಲವಾರು ಹಿರಿಯ ನಟರು ಅಭಿನಯಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com