ಮುಂದಿನ ನಿಲ್ದಾಣ ಸಿನಿಮಾ ಸಂಗೀತಕ್ಕೆ ಎ.ಆರ್ ರೆಹಮಾನ್ ಮೆಚ್ಚುಗೆ

ಮುಂದಿನ ನಿಲ್ದಾಣ ಸಿನಿಮಾದ ನಗುವ ಕನಸು ಹಾಡಿಗೆ ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಪ್ರಶಂಸಿದ್ದಾರೆ, ಮುಂದಿನ ನಿಲ್ದಾಣ ಸಿನಿಮಾ ಹಾಡು ಯೂಟ್ಯಬ್ ನಲ್ಲಿ ರಿಲೀಸ್ ಆಗಿದ್ದು ಹಾಡಿಗೆ ಮೆಚ್ಚುಗೆ ವ್ಯಕ್ತ ಪಡಿಸಿ ಟ್ವೀಟ್ ಮಾಡಿದ್ದಾರೆ. 
ಮುಂದಿನ ನಿಲ್ದಾಣ ಸ್ಟಿಲ್
ಮುಂದಿನ ನಿಲ್ದಾಣ ಸ್ಟಿಲ್

ಕನ್ನಡ ಸಿನಿಮಾವೊಂದಕ್ಕೆ ಬಾಲಿವುಡ್ ಹೆಸರಾಂತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಮುಂದಿನ ನಿಲ್ದಾಣ ಸಿನಿಮಾದ ನಗುವ ಕನಸು ಹಾಡಿಗೆ ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಪ್ರಶಂಸಿದ್ದಾರೆ, ಮುಂದಿನ ನಿಲ್ದಾಣ ಸಿನಿಮಾ ಹಾಡು ಯೂಟ್ಯಬ್ ನಲ್ಲಿ ರಿಲೀಸ್ ಆಗಿದ್ದು ಹಾಡಿಗೆ ಮೆಚ್ಚುಗೆ ವ್ಯಕ್ತ ಪಡಿಸಿ ಟ್ವೀಟ್ ಮಾಡಿದ್ದಾರೆ. 

ಈ ಸೀಸನ್ ನ ಅತಿ ಉತ್ತಮ ಹಾಡು ಇದಾಗಿದೆ ಎಂದು ನಿರ್ದೇಶಕ ವಿನಯ್ ಭಾರದ್ವಾಜ್  ಹೇಳಿದ್ದಾರೆ, ಈ ಹಾಡು ರೆಹಮಾನ್ ಅವರ ಗಮನ ಸೆಳೆದಿದೆ.ರೆಹಮಾನ್ ಅವರ ಮೆಚ್ಚುಗೆಯಿಂದ ಇಡಿ ತಂಡ ಖುಷಿಯಲ್ಲಿ ತೇಲಾಡುತ್ತಿದೆ.

ವಿವಿಧ ಹಾಡುಗಳಿಗೆ ವಿಭಿನ್ನ ಸಂಗೀತಗಾರರು ಸಂಗೀತ ಸಂಯೋಜಿಸಿದ್ದಾರೆ,  ರೆಹಮಾನ್ ಇಷ್ಟ ಪಟ್ಟಿರುವ ಹಾಡಿಗೆ ಜಿಮ್ ಸತ್ಯ ಸಂಗೀತ ಸಂಯೋಜಿಸಿದ್ದಾರೆ, ಇವರು ಈ ಹಿಂದೆ ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ.

ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾಗೆ ಸಂಗೀತ ನೀಡಿದ್ದಾರೆ,  ಕಿರಣ್ ಕಾವೇರಪ್ಪ ಸಾಹಿತ್ಯ ಬರೆದಿದ್ದಾರೆ, ಅನಂತ್ ಭಟ್ ಮತ್ತು ನಾರಾಯಣ ಶರ್ಮಾ ಹಿನ್ನೆಲೆ ಗಾಯನ ನೀಡಿದ್ದಾರೆ. ಮುಂದಿನ ನಿಲ್ದಾಣ ಸಿನಿಮಾವು ನವೆಂಬರ್ 29 ರಂದು ತೆರೆ ಕಾಣಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com