‘ಮನರೂಪ’ಕ್ಕೆ ಮನಸೋಲುವನೇ ಪ್ರೇಕ್ಷಕ?

ಹೊಸ ತಲೆಮಾರಿನವರ ಮನೋಲೋಕವನ್ನು ತೆರೆದಿಡುವ ವಿಶಿಷ್ಟ ಪ್ರಕಾರದ ಸೈಕಾಲಜಿಕಲ್ ಥ್ರಿಲ್ಲರ್ ಕನ್ನಡ ಸಿನಿಮಾ ಮನರೂಪ ನವೆಂಬರ್ ೨೨ ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಚಿತ್ರದ ಸ್ಟಿಲ್
ಚಿತ್ರದ ಸ್ಟಿಲ್

ಬೆಂಗಳೂರು: ಹೊಸ ತಲೆಮಾರಿನವರ ಮನೋಲೋಕವನ್ನು ತೆರೆದಿಡುವ ವಿಶಿಷ್ಟ ಪ್ರಕಾರದ ಸೈಕಾಲಜಿಕಲ್ ಥ್ರಿಲ್ಲರ್ ಕನ್ನಡ ಸಿನಿಮಾ ಮನರೂಪ ನವೆಂಬರ್ ೨೨ ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಕಿರಣ್ ಹೆಗಡೆ ನಿರ್ದೇಶನದ ‘ಮನರೂಪ’ ಮನುಷ್ಯನ, ಅದರಲ್ಲೂ ಮಿಲೇನಿಯಲ್‌ಗಳ(೧೯೮೦ ಮತ್ತು ೨೦೦೦ ನೇ ವರ್ಷಗಳ ಅವಧಿಯಲ್ಲಿ ಜನಿಸಿದವರು) ಬೇರೆ ಬೇರೆ ಮುಖಗಳನ್ನು ಅರ್ಥಮಾಡಿಕೊಳ್ಳಲು ನಿರ್ಭಿಡೆಯಿಂದ ಪ್ರಯತ್ನಿಸಿರುವ ಅಸಂಗತ ಸಿನಿಮಾ ಇದು.

ಇಡೀ ಸಿನಿಮಾದ ಕತೆ ಎರಡು ದಿನಗಳಲ್ಲ್ಲಿ ನಡೆಯುತ್ತದೆ. ಪ್ರೇಕ್ಷಕರು ವಿಚಿತ್ರ ಅನುಭವದೊಂದಿಗೆ ಎಂಜಾಯ್ ಮಾಡಲು ಹಾಗೂ ತಮ್ಮೊಳಗಿರುವ ಸೆಲ್ಫ್ ಅಬ್ಸೆಷನ್ ಅಥವಾ ಸ್ವಯಂಗೀಳನ್ನು ಸಿನಿಮಾದಲ್ಲಿರುವ ಪಾತ್ರಗಳೊಂದಿಗೆ ಸಮೀಕರಿಸಿಕೊಳ್ಳಲು ಸಾಧ್ಯವಾಗುವ ರೀತಿಯಲ್ಲಿ ಚಿತ್ರವನ್ನು ಕಟ್ಟಿಕೊಡಲಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಹಲವಾರು ವರ್ಷಗಳ ನಂತರ ಭೇಟಿಯಾಗಿ ಅದೇ ಖುಷಿಯಲ್ಲಿ ಅತ್ಯಂತ ಅಪಾಯಕಾರಿಯಾದ ಪ್ರದೇಶದತ್ತ ಯಾನ ಹೊರಡೋ ಸ್ನೇಹಿತರ ಕಥೆ ಇಲ್ಲಿದೆ. ಅವರು ಹೋಗೋ ಕರಡಿ ಗುಡ್ಡ ಎಂಬ ಪ್ರದೇಶದ ಚಹರೆಗಳು ಇತ್ತೀಚೆಗೆ ಬಿಡುಗಡೆಯಾಗಿರೋ ಟೀಸರ್ ಮೂಲಕ ಅನಾವರಣಗೊಂಡಿವೆ.

ಸಿಎಂಸಿಆರ್ ಮೂವೀಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರ ಟೈಟಲ್ ಪೋಸ್ಟರ್ ಮೂಲಕವೇ ತೀವ್ರ ಸಂಚಲನ ಉಂಟು ಮಾಡಿತ್ತು. 

ಹಲವು ನಿಗೂಢಗಳ ‘ಮನರೂಪ’ಇದೇ ಶುಕ್ರವಾರ ತೆರೆ ಕಾಣುತ್ತಿದ್ದು, ಇದಕ್ಕೆ ಪ್ರೇಕ್ಷಕ ಮನಸೋಲುವನೇ ಎಂಬುದು ಕಾದು ನೋಡಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com