'ಬಂಪರ್' ಹಳೇ ಶೀರ್ಷಿಕೆ, ಧನ್ವೀರ್ ಚಿತ್ರಕ್ಕೆ ಹೊಸ ಚಿತ್ರಕಥೆ!
ಬಜಾರ್ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದ್ದ ಧನ್ವೀರ್ ಇದೀಗ ಬಂಪರ್ ಎಂಬ ಎರಡನೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಡಿಸೆಂಬರ್ ನಲ್ಲಿ ಚಿತ್ರದ ಚಿತ್ರೀಕರಣ ಆರಂಭಗೊಳ್ಳಲಿದ್ದು ಹೊಸ ಚಿತ್ರಕಥೆ ಬರೆಯಲು ನಿರ್ದೇಶಕರು ಮುಂದಾಗಿದ್ದಾರೆ.
Published: 19th November 2019 11:12 AM | Last Updated: 19th November 2019 11:12 AM | A+A A-

ಧನ್ವೀರ್
ಬಜಾರ್ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದ್ದ ಧನ್ವೀರ್ ಇದೀಗ ಬಂಪರ್ ಎಂಬ ಎರಡನೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಡಿಸೆಂಬರ್ ನಲ್ಲಿ ಚಿತ್ರದ ಚಿತ್ರೀಕರಣ ಆರಂಭಗೊಳ್ಳಲಿದ್ದು ಹೊಸ ಚಿತ್ರಕಥೆ ಬರೆಯಲು ನಿರ್ದೇಶಕರು ಮುಂದಾಗಿದ್ದಾರೆ.
ಹರಿ ಸಂತೋಷ್ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದು ಮತ್ತೊಬ್ಬ ನಿರ್ದೇಶಕ ಚೇತನ್ ಕುಮಾರ್ ಅವರು ಈ ಚಿತ್ರಕ್ಕೆ ಚಿತ್ರಕಥೆ ಮತ್ತು ಸಂಭಾಷಣೆ ಬರೆಯುತ್ತಿದ್ದರು. ಆದರೆ ಇದೀಗ ಹರಿ ಸಂತೋಷ್ ಅವರು ತಾವೇ ಹೊಸ ಚಿತ್ರಕಥೆ ಬರೆಯಲು ಮುಂದಾಗಿದ್ದಾರೆ.
ಇನ್ನು ಚೇತನ್ ಕುಮಾರ್ ನಿರ್ದೇಶನದ ಭರಾಟೆ ಚಿತ್ರದ ನಿರ್ಮಾಣ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ನಿರ್ಮಾಪಕ ಸುಪ್ರೀತ್ ಬಂಪರ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.
ಸೆಪ್ಟೆಂಬರ್ 8 ಧನ್ವೀರ್ ಹುಟ್ಟುಹಬ್ಬದಂದು ಬಂಪರ್ ಚಿತ್ರವನ್ನು ಘೋಷಿಸಲಾಗಿತ್ತು. ಸದ್ಯ ಹರಿ ಸಂತೋಷ್ ಕನ್ನಡದ ಕಾಲೇಜ್ ಕುಮಾರ್ ಚಿತ್ರವನ್ನು ತೆಲುಗಿನಲ್ಲಿ ನಿರ್ದೇಶನ ಮಾಡುತ್ತಿದ್ದು ಈ ಯೋಜನೆ ಮುಗಿದ ನಂತರ ಬಂಪರ್ ಕೈಗೆತ್ತಿಕೊಳ್ಳಲಿದ್ದಾರೆ.