ಕಥಾ ಸಂಗಮ ಧ್ವನಿ ಸುರುಳಿ ಬಿಡುಗಡೆ ಮಾಡಿದ ನಟ ಪುನೀತ್

ರಿಷಬ್ ಶೆಟ್ಟಿ ನಿರ್ಮಾಣದ ಏಳು ನಿರ್ದೇಶಕರು ನಿರ್ದೇಶಿಸಿದ ಸಿನಿಮಾ ಕಥಾ ಸಂಗಮದ ಧ್ವನಿ ಸುರುಳಿಯನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಿದ್ದಾರೆ.

Published: 25th November 2019 09:43 AM  |   Last Updated: 25th November 2019 09:43 AM   |  A+A-


Puneeth  launches Katha Sangama audio amid fanfare

ಕಥಾ ಸಂಗಮ ಧ್ವನಿಸುರುಳಿ ಬಿಡುಗಡೆ

Posted By : Shilpa D
Source : The New Indian Express

ಬೆಂಗಳೂರು:  ರಿಷಬ್ ಶೆಟ್ಟಿ ನಿರ್ಮಾಣದ ಏಳು ನಿರ್ದೇಶಕರು ನಿರ್ದೇಶಿಸಿದ ಸಿನಿಮಾ ಕಥಾ ಸಂಗಮದ ಧ್ವನಿ ಸುರುಳಿಯನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಿದ್ದಾರೆ.

ನವೆಂಬರ್ 21 ರಂದು ಧ್ವನಿ ಸುರುಳಿ ಬಿಡುಗಡೆ ಸಮಾರಂಭ ನೆರವೇರಿತು. ಏಳು ಸಂಗೀತ ನಿರ್ದೇಶಕರು ಮಾಡಿರುವ ಏಳು ವಿಭಿನ್ನ ಹಾಡುಗಳು ನಿನ್ನೆ ಬಿಡುಗಡೆಯಾಗಿವೆ.

ರಿಷಬ್ ಮೊದಲೇ ಹೇಳಿರುವಂತೆ ಇದು ಹಿರಿಯ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರಿಂದ ಸ್ಪೂರ್ತಿ ಪಡೆದು ಮಾಡಿದ ಸಿನಿಮಾ. ಹೀಗಾಗಿ ಧ್ವನಿ ಸುರುಳಿ ಬಿಡುಗಡೆ ಮಾಡಿದ ಪುನೀತ್ ರಾಜ್ ಕುಮಾರ್ ಗೆ ಚಿತ್ರತಂಡ ಮರೆಯಲಾರದ ಗಿಫ್ಟ್ ಕೊಟ್ಟು ಸನ್ಮಾನಿಸಲಾಯಿತು.

ಇದೇ ವೇಳೆ ಮಾತನಾಡಿದ ಪುನೀತ್ ಪುಟ್ಟಣ್ಣ ಅವರ ಹಿಂದಿನ ದಿನಗಳನ್ನು ಸ್ಮರಿಸಿದರು ಪುನೀತ್ ಕೂಡಾ ರಿಷಬ್ ಆಂಡ್ ಟೀಂ ಕೊಟ್ಟ ಗಿಫ್ಟ್ ನೋಡಿ ತುಂಬಾ ಖುಷಿಯಾಗಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp