ಗಾಳಿಪಟ-2 ಚಿತ್ರೀಕರಣ ಯಾವಾಗಿನಿಂದ...?: ಇಲ್ಲಿದೆ ಮಾಹಿತಿ 

ಗಾಳಿಪಟ ಚಿತ್ರದ ಸೀಕ್ವೆಲ್ ಗಾಳಿಪಟ-2 ಯೋಗರಾಜ್ ಭಟ್ಟರ ನಿರ್ದೇಶನದಲ್ಲಿ ತಯಾರಾಗುತ್ತಿದೆ. 

Published: 27th November 2019 12:24 PM  |   Last Updated: 27th November 2019 12:24 PM   |  A+A-


Gaalipata 2 shooting to start from December 2

ಗಾಳಿಪಟ-2 ಚಿತ್ರೀಕರಣ ಯಾವಾಗಿನಿಂದ...?: ಇಲ್ಲಿದೆ ಮಾಹಿತಿ

Posted By : Srinivas Rao BV
Source : The New Indian Express

ಗಾಳಿಪಟ ಚಿತ್ರದ ಸೀಕ್ವೆಲ್ ಗಾಳಿಪಟ-2 ಯೋಗರಾಜ್ ಭಟ್ಟರ ನಿರ್ದೇಶನದಲ್ಲಿ ತಯಾರಾಗುತ್ತಿದೆ. 

ತಾರಾಗಣ, ನಿರ್ಮಾಪಕರಲ್ಲಿ ಕೆಲವು ಬದಲಾವಣೆಗಳೊಂದಿಗೆ ಡಿ.2 ರಂದು ಗಾಳಿಪಟ-2 ಚಿತ್ರೀಕರಣ ಪ್ರಾರಂಭವಾಗುತ್ತಿದೆ. ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್- ರಮೇಶ್ ರೆಡ್ಡಿ ಅವರ ನಿರ್ಮಾಣದಲ್ಲಿ ಚಿತ್ರ ನಿರ್ಮಾಣವಾಗಲಿದೆ.  ಉಪ್ಪು ಹುಳಿ ಖಾರ, ಪಡ್ಡೆಹುಲಿ, ನಾತಿಚರಾಮಿ, ಇತ್ತೀಚೆಗೆ ರಮೇಶ್ ಅರವಿಂದ್ ಅವರ 100 ಚಿತ್ರಗಳನ್ನು ರಮೇಶ್ ರೆಡ್ಡಿ ನಿರ್ಮಾಣ ಮಾಡಿದ್ದಾರೆ. 

ಗಾಳಿಪಟ-2 ರಲ್ಲಿಯೂ ಗಣೇಶ್ ನಾಯಕ ನಟನಾಗಿ ಮಿಂಚಲಿದ್ದು, ಮುಂಗಾರು ಮಳೆ, ಗಾಳಿಪಟ, ಮುಗುಳು ನಗೆ ನಂತರ ಯೋಗರಾಜ ಭಟ್ಟರೊಂದಿಗಿನ 4 ನೇ ಚಿತ್ರ ಇದಾಗಿರಲಿದೆ. 

ಸೀಕ್ವೆಲ್ ನಲ್ಲಿ ಅನಂತ್ ನಾಗ್, ದಿಗಂತ್ ಕೂಡ ಇರಲಿದ್ದಾರೆ. ಈ ಹಿಂದೆ ಯೋಗರಾಜ್ ಭಟ್ಟರ ಸಹಾಯಕರಾಗಿದ್ದ ನಿರ್ದೇಶಕ ಪವನ್ ಕುಮಾರ್ ಈ ಚಿತ್ರದಲ್ಲಿ ನಟನೆ ಮಾಡುತ್ತಿರುವುದು ವಿಶೇಷ. 

ಕುದುರೆಮುಖದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದ್ದು, ವೈಭವಿ ಶಾಂಡಿಲ್ಯ, ಸಂಯುಕ್ತ ಮೆನನ್, ಶರ್ಮಿಳಾ ಮಾಂಡ್ರೆ ಈ ರೊಮ್ಯಾಂಟಿಕ್ ಕಾಮಿಡಿ ಚಿತ್ರದಲ್ಲಿ ನಟಿಸಲಿದ್ದು, ನಿಶ್ವಿಕಾ ನಾಯ್ಡು ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. 
 

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp