ಸೈಕಲ್ ನಲ್ಲಿ ಶೂಟಿಂಗ್ ಸೆಟ್ ಗೆ ತೆರಳಿದ ಕಿಚ್ಚ ಸುದೀಪ್ - ವಿಡಿಯೋ ವೈರಲ್ 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೈಕಲ್ ನಲ್ಲಿ ಕೋಟಿಗೊಬ್ಬ-3 ಶೂಟಿಂಗ್ ಸೆಟ್ ಗೆ ತೆರಳಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸುದೀಪ್
ಸುದೀಪ್

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೈಕಲ್ ನಲ್ಲಿ ಕೋಟಿಗೊಬ್ಬ-3 ಶೂಟಿಂಗ್ ಸೆಟ್ ಗೆ ತೆರಳಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಂಠೀರವ ಸ್ಟುಡಿಯೋದಲ್ಲಿ ಕೋಟಿಗೊಬ್ಬ-3 ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಹೋಟೆಲ್ ನಿಂದ ಸಿನಿಮಾ ನಡೆಯುತ್ತಿರುವ ಸ್ಥಳಕ್ಕೆ ಸೈಕಲ್ ನಲ್ಲಿಯೇ  ಸವಾರಿ ಮಾಡಿದ್ದಾರೆ.  ಈ ವಿಡಿಯೋವನ್ನು ಸ್ವತ: ತಮ್ಮ ಇನ್ಸಾಟಾಗ್ರಾಮ್ ಖಾತೆಯಲ್ಲಿ  ಅಪ್ ಲೋಡ್ ಮಾಡಿದ್ದಾರೆ. 

ಸುದೀಪ್ ಮುಖಕ್ಕೆ ಬಟ್ಟೆ ಕಟ್ಟಿಕೊಂಡು, ಶಾರ್ಟ್ ಜೀನ್ಸ್  ಪ್ಯಾಂಟ್ ಧರಿಸಿ ಸೈಕಲ್ ತುಳಿಯುತ್ತಾ ಚಿತ್ರೀಕರಣ ಸ್ಥಳ ತಲುಪಿದ್ದಾರೆ. ನಂತರ ಕಾಫಿ ಸೇವಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅವರ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

View this post on Instagram

Get closer to ur life....

A post shared by kicchasudeep (@kichchasudeepa) on

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com