'ಎಲ್ಲಿ ನನ್ನ ವಿಳಾಸ’ ಆಡಿಯೋ ಬಿಡುಗಡೆ

ಇತ್ತೀಚೆಗೆ ವಿಶಿಷ್ಟ ಶೀರ್ಷಿಕೆಯ ಚಿತ್ರಗಳು ನಿರ್ಮಾಣವಾಗುತ್ತಿದ್ದು, ಈ ಸಾಲಿಗೆ 'ಎಲ್ಲಿ ನನ್ನ ವಿಳಾಸ’ ಕೂಡ ಸೇರ್ಪಡೆಯಾಗಲಿದೆ.
ಚಿತ್ರದ ಸ್ಟಿಲ್
ಚಿತ್ರದ ಸ್ಟಿಲ್

ಬೆಂಗಳೂರು: ಇತ್ತೀಚೆಗೆ ವಿಶಿಷ್ಟ ಶೀರ್ಷಿಕೆಯ ಚಿತ್ರಗಳು ನಿರ್ಮಾಣವಾಗುತ್ತಿದ್ದು, ಈ ಸಾಲಿಗೆ 'ಎಲ್ಲಿ ನನ್ನ ವಿಳಾಸ’ ಕೂಡ ಸೇರ್ಪಡೆಯಾಗಲಿದೆ.

ಚಲನಚಿತ್ರಗಳನ್ನು, ಚಿತ್ರನಟರನ್ನು ಅತಿಯಾಗಿ ಪ್ರೀತಿಸುವ ಉತ್ತರ ಕರ್ನಾಟಕದ ತಾಳಿಕೋಟೆಯ ಗಾವಡೆ ಬ್ರದರ್ಸ್ ಈ ಚಿತ್ರ ನಿರ್ಮಿಸಿದ್ದು, ಧ್ವನಿಸುರುಳಿ ಬಿಡುಗಡೆಯಾಗಿದೆ.

ಜಗತ್ತಿನಲ್ಲಿ ವಿಳಾಸವಿಲ್ಲದ ವ್ಯಕ್ತಿಯೇ ಇಲ್ಲ. ಆದಾಗ್ಯೂ ಅಪ್ಪ ಅಮ್ಮನ ಹೆಸರಿಲ್ಲದೆ ತಮ್ಮದೇ ವಿಳಾಸ ಹೊಂದಬೇಕೆಂದು ಬಯಸುವ ಯುವಕನ ಸುತ್ತ ಸುತ್ತುವ ಕಥೆ ಹೊಂದಿರುವ ಚಿತ್ರ 'ಎಲ್ಲಿ ನನ್ನ ವಿಳಾಸ’.

ಹುಟ್ಟಿದ ಪ್ರತಿಯೊಬ್ಬರಿಗೂ ತಂದೆ ತಾಯಿ ವಿಳಾಸ.... ಅದನ್ನು ಬಿಟ್ಟು ನಮ್ಮದೇ ವಿಳಾಸ ಹುಡುಕಿಕೊಂಡು ಹೋದಾಗ ಏನಾಗುತ್ತದೆ? ತಂದೆ, ತಾಯಿ ಮಾರ್ಗದರ್ಶನ ಧಿಕ್ಕರಿಸಿದರೆ ಎದುರಿಸಬೇಕಾಗುವ ಪರಿಣಾಮವೇನು ಎಂಬುದು ಚಿತ್ರಕಥೆ ಎಂದು ನಿರ್ದೇಶಕ ಸಾಗರ್ ಗಾವಡೆ ತಿಳಿಸಿದ್ದಾರೆ.

ಸಂತೋಷ್ ಗಾವಡೆ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಛಾಯಾಗ್ರಹಣ ಸುರೇಶ್, ಸಾಹಸ ಜಾನಿ ಮಾಸ್ಟರ್ ಹಾಗೂ ಅಕುಲ್ ಮಾಸ್ಟರ್ ನೃತ್ಯ ನಿರ್ದೇಶನವಿದೆ ಮಹೇಶ್ ಜೋಗಿ ಸಂಗೀತ ನಿರ್ದೇಶಿಸಿದ್ದು, ೪ ಹಾಡುಗಳಿವೆ.

ತಮಿಳುನಾಡು ಮೂಲದ ಅಜಯ್ ಆದಿತ್ ನಾಯಕ ನಟನಾಗಿ, ಪವಿತ್ರಾ ನಾಯಕ್ ನಾಯಕಿಯಾಗಿದ್ದು, ಸೂರ್ಯದೀಪ್, ಲಕ್ಕಿ ರಘು ನಾಯಕನ ಗೆಳೆಯರ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com