ಕೀನ್ಯಾ ಕಾಡಿನ ಫೋಟೋಗ್ರಫಿ ಅನುಭವ ಬಿಚ್ಚಿಟ್ಟ ಚಾಲೆಂಜಿಂಗ್ ಸ್ಟಾರ್

ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಕೀನ್ಯಾ ಕಾಡಿಗೆ ಹೋಗಿ ಬಂದಿದ್ದು ಗೊತ್ತಿರುವ ವಿಚಾರವೇ. ಆದರೆ ಅವರು ಅಲ್ಲಿ ವನ್ಯಜೀವಿಗಳ ಫೋಟೋವನ್ನು ಸೆರೆ ಹಿಡಿದುಕೊಂಡು ಬಂದಿದ್ದಾರೆ.
ಕೀನ್ಯಾ ಕಾಡಿನಲ್ಲಿ ದರ್ಶನ್ ಪ್ರವಾಸ
ಕೀನ್ಯಾ ಕಾಡಿನಲ್ಲಿ ದರ್ಶನ್ ಪ್ರವಾಸ

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಕೀನ್ಯಾ ಕಾಡಿಗೆ ಹೋಗಿ ಬಂದಿದ್ದು ಗೊತ್ತಿರುವ ವಿಚಾರವೇ. ಆದರೆ ಅವರು ಅಲ್ಲಿ ವನ್ಯಜೀವಿಗಳ ಫೋಟೋವನ್ನು ಸೆರೆ ಹಿಡಿದುಕೊಂಡು ಬಂದಿದ್ದಾರೆ.

ಪ್ರಾಣಿ ಪ್ರಿಯರಾಗಿರುವ ದರ್ಶನ್ ಕೀನ್ಯಾ ಕಾಡಿನಲ್ಲಿ ಮಾಸಾಯ್ ಮಾರಾ ಸಫಾರಿ ನಡೆಸಿದ್ದಾರೆ, ಕೆಲ ಫೋಟೋಗ್ರಾಫರ್ ಗಳ ಕೀನ್ಯಾಗೆ ಹೋಗಿದ್ದ  ದರ್ಶನ್ ಅಲ್ಲಿನ ಕಾಡಿನಲ್ಲಿ ಕಾಲ ಕಳೆದಿದ್ದಾರೆ, ಆಫ್ರಿಕಾ ಫೋಟೋ ಗ್ರಾಫರ್ ಪ್ಯಾರಾಡೈಸ್, ಇದೊಂದು ಮರೆಯಲಾಗದ ಅನುಭವ ಎಂದು ದರ್ಶನ್ ಹೇಳಿದ್ದಾರೆ.

ಯಾವಾಗಲೂ ಹೊಸತನ್ನು ಅನ್ವೇಷಿಸುವ ದರ್ಶನ್ ಕೆಲ ಸಿಂಹ, ಚಿರತೆ ಮತ್ತು ಆನೆ ಹಾಗೂ ಎಮ್ಮೆ ಮತ್ತು ನೀರಾನೆಗಳ ಫೋಟೋ ತೆಗೆದಿದ್ದಾರೆ,  ಬೆಳಗಿನ ಸೂರ್ಯೋದಯದ ವೇಳೆ ಫೋಟೋ ತೆಗೆಯುವುದೇ ಒಳ್ಳೆಯ ಮಜಾ, ಬೆಳಗ್ಗೆ 4.30ಕ್ಕೆ ಎದ್ದು ಕಾಡಿಗೆ ಹೊರಟರೇ ಮಧ್ಯಾಹ್ನ 12 ಗಂಟೆಗೆ ಬ್ರೇಕ್ ತೆಗೆದುಕೊಳ್ಳುತ್ತಿದ್ದೆ,  ಮತ್ತೆ 2.30ಕ್ಕೆ ಹೊರಟರೇ ರಾತ್ರಿ 8 ಗಂಟೆಗೆ ಮುಗಿಯುತ್ತಿತ್ತು, ಅಲ್ಲಿ ಒಂದೇ ಒಂದ ನಿಮಿಷವೂ  ಬೇಸರವಾಗುತ್ತಿರಲಿಲ್ಲ ಎಂದು ಕೀನ್ಯಾ ಪ್ರವಾಸದ ಬಗ್ಗೆ ವಿವರಿಸಿದ್ದಾರೆ.

ಪ್ರವಾಸದ ವೇಳೆ ನನಗೆ ನೀರಿನ ಮಹತ್ವದ ಅರಿವಾಗಿದೆ. ನೀರಿನ ಸಮಸ್ಯೆ ಬಗ್ಗೆ ನನಗೆ ಜಾಗೃತಿ ಮೂಡಿತು. ನೀರು ಅತ್ಯಮೂಲ್ಯ ಎಂಬುದು ತಿಳಿಯಿತು, ಅರ್ಧ ಬಕೆಟ್ ಕ್ಕಿಂತಲೂ ಕಡಿಮೆ ನೀರಿನಲ್ಲಿ ಸ್ನಾನ ಮಾಡಬೇಕು, ಇಷ್ಟು ಪ್ರಮಾಣದಲ್ಲಿ ನೀರು ಸಿಕ್ಕಿರುವುದಕ್ಕೆ ನಾವೇ ಅದೃಷ್ಟವಂತರು ಹೀಗಾಗಿ ನೀರನ್ನು ರಕ್ಷಿಸಬೇಕು ಎಂದು ದರ್ಶನ್ ಹೇಳಿದ್ದಾರೆ. 

ಅಲ್ಲಿನ ಆ ಸುಂದರ ಕ್ಷಣವನ್ನು 'ಡಿ ಕಂಪೆನಿ' ವಿಡಿಯೋ ಮಾಡಿ ತನ್ನ ಯೂಟ್ಯೂಬ್‌ ಚಾನಲ್‌ನಲ್ಲಿ ಹಂಚಿಕೊಂಡಿದೆ. 

ದರ್ಶನ್‌ಗೆ ಮೊದಲಿನಿಂದಲೂ ಪ್ರಾಣಿ, ಪಕ್ಷಿಗಳೆಂದರೆ ಬಲು ಇಷ್ಟ,  ಕೀನ್ಯಾದಲ್ಲಿ ತೆಗೆದ ಫೋಟೋಗಳನ್ನು ಈ ಹಿಂದೆ ಮಾಡಿದಂತೆ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com