ಡಿಂಪಲ್ ಕ್ವೀನ್ 'ಏಪ್ರಿಲ್'ಗೆ ಸಾಥ್ ಕೊಟ್ಟ ಚಿರಂಚೀವಿ ಸರ್ಜಾ!

ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯಿಸುತ್ತಿರುವ ಏಪ್ರಿಲ್ ಚಿತ್ರಕ್ಕೆ ನಟ ಚಿರಂಜೀವಿ ಸರ್ಜಾ ಸಾಥ್ ನೀಡುತ್ತಿದ್ದಾರೆ.
ರಚಿತಾ ರಾಮ್-ಚಿರಂಜೀವಿ ಸರ್ಜಾ
ರಚಿತಾ ರಾಮ್-ಚಿರಂಜೀವಿ ಸರ್ಜಾ

ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯಿಸುತ್ತಿರುವ ಏಪ್ರಿಲ್ ಚಿತ್ರಕ್ಕೆ ನಟ ಚಿರಂಜೀವಿ ಸರ್ಜಾ ಸಾಥ್ ನೀಡುತ್ತಿದ್ದಾರೆ.

ಏಪ್ರಿಲ್ ಚಿತ್ರವನ್ನು ಸತ್ಯ ರಾಯಲ ನಿರ್ದೇಶನ ಮಾಡುತ್ತಿದ್ದು ಇದೀಗ ಚಿತ್ರಕ್ಕೆ ಚಿರಂಜೀವಿ ಸರ್ಜಾರನ್ನು ಕರೆತಂದಿದ್ದಾರೆ. ಏಪ್ರಿಲ್ ಚಿತ್ರ ಮಹಿಳಾ ಪ್ರಧಾನ ಚಿತ್ರವಾಗಿದೆ. ಸದ್ಯ ಚಿರಂಜೀವಿ ಸರ್ಜಾ ಆಗಮನದ ಹಿನ್ನೆಲೆಯಲ್ಲಿ ಚಿತ್ರಕಥೆಯಲ್ಲಿ ಸ್ವಲ್ಪ ಬದಲಾವಣೆಗೆ ನಿರ್ದೇಶಕರು ಮುಂದಾಗಿದ್ದಾರೆ.

ಚಿತ್ರವನ್ನು 8ಎಂಎಂ ಚಿತ್ರದ ನಿರ್ಮಾಪಕ ನಾರಾಯಣ್ ಬಾಬು ನಿರ್ಮಿಸುತ್ತಿದ್ದಾರೆ. ಅರ್ಜುನ್ ಶೆಟ್ಟಿ ಮತ್ತು ಪ್ರತೀಕ್ ಶೆಟ್ಟಿ ಛಾಯಾಗ್ರಾಹಣ ಮಾಡಲಿದ್ದು ಸಚಿನ್ ಬಸ್ರೂರ್ ಸಂಗೀತ ನಿರ್ದೇಶಕರಾಗಿ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com