ಯೋಗಾನಂದ್ ನಿರ್ದೇಶನದ ಚೊಚ್ಚಲ ಚಿತ್ರ 'ಅಧ್ಯಕ್ಷ ಇನ್ ಅಮೆರಿಕ' ನಾಳೆ ತೆರೆಗೆ
ಸೃಜನಶೀಲ ಕ್ಷೇತ್ರದಲ್ಲಿ ಸುಮಾರು 18 ವರ್ಷ ಅನುಭವ ಹೊಂದಿರುವ ಯೋಗಾನಂದ್ ಮುದ್ಧನ್ ಅವರು ಮೊದಲ ಬಾರಿಗೆ ನಿರ್ದೇಶನಕ್ಕೆ ಕೈಹಾಕಿದ್ದು, ಶರಣ್ ಹಾಗೂ ರಾಗಿಣಿ ದ್ವಿವೇದಿ ಅಭಿನಯದ 'ಅಧ್ಯಕ್ಷ ಇನ್ ಅಮೆರಿಕ' ಚಿತ್ರ ನಾಳೆ ತೆರೆಗಾಣುತ್ತಿದೆ.
Published: 03rd October 2019 03:06 PM | Last Updated: 03rd October 2019 03:06 PM | A+A A-

ರಾಗಿಣಿ - ಶರಣ್
ಸೃಜನಶೀಲ ಕ್ಷೇತ್ರದಲ್ಲಿ ಸುಮಾರು 18 ವರ್ಷ ಅನುಭವ ಹೊಂದಿರುವ ಯೋಗಾನಂದ್ ಮುದ್ಧನ್ ಅವರು ಮೊದಲ ಬಾರಿಗೆ ನಿರ್ದೇಶನಕ್ಕೆ ಕೈಹಾಕಿದ್ದು, ಶರಣ್ ಹಾಗೂ ರಾಗಿಣಿ ದ್ವಿವೇದಿ ಅಭಿನಯದ 'ಅಧ್ಯಕ್ಷ ಇನ್ ಅಮೆರಿಕ' ಚಿತ್ರ ನಾಳೆ ತೆರೆಗಾಣುತ್ತಿದೆ.
2001ರಿಂದ ಸಂಭಾಷಣೆ ಬರಹಗಾರ, ಹಲವು ಚಿತ್ರ, ಧಾರವಾಹಿ ಹಾಗೂ ನಾಟಕಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಯೋಗಾನಂದ್ ಅವರು ಇದೇ ಮೊದಲ ಬಾರಿಗೆ ರೋಮ್ಯಾಂಟಿಕ್ ಕಾಮಿಡಿ ಚಿತ್ರವೊಂದಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಶರಣ್ ಹಾಗೂ ರಾಗಿಣಿ ಜೋಡಿಯ ಮೊದಲ ಮೋಡಿ ತೆರೆಯ ಮೇಲೆ ಮೂಡಿ ಬರುವುದಕ್ಕೆ ಕ್ಷಣಗಣನೆ ಆರಂಭವಾಗಿದೆ.
ದಸರಾ ಹಬ್ಬದ ಸಂದರ್ಭದಲ್ಲೇ ತಮ್ಮ ಚೊಚ್ಚಲ ಚಿತ್ರ ಬಿಡುಗಡೆಯಾಗುತ್ತಿರುವುದರಿಂದ ಯೋಗಾನಂದ್ ಅವರು ಮತ್ತಷ್ಟು ಉತ್ಸುಕರಾಗಿದ್ದು, ಈ ಚಿತ್ರ ಶರಣ್ ವೃತ್ತಿ ಬದುಕಿನಲ್ಲಿಯೇ ಮಹತ್ವದ್ದಾಗಿಯೂ ಪರಿಗಣಿಸಲ್ಪಟ್ಟಿದೆ.
ನಾನು ಒಬ್ಬ ಡೈಲಾಗ್ ರೈಟರ್ ಆಗಿ ಚಿತ್ರ ಬಿಡುಗಡೆ ವೇಳೆ ಆ ಚಿತ್ರದ ನಿರ್ದೇಶಕರ ಏನು ಮಾಡುತ್ತಾರೆ ಎಂಬುದು ನನಗೆ ಚೆನ್ನಾಗಿ ಗೊತ್ತು. ಈಗ ಅದೇ ಸ್ಥಿತಿಯಲ್ಲಿ ನಾನಿದ್ದೇನೆ ಎಂದು ಯೋಗಾನಂದ್ ಅವರು ಹೇಳಿದ್ದಾರೆ.
ಬಜರಂಗಿ, ವಜ್ರಕಾಯ, ಮುಕುಂದ ಮುರಾರಿ ಮತ್ತು ಚೌಕಾ ಸೇರಿದಂತೆ ಹಲವು ಚಿತ್ರಗಳಿಗೆ ನಾನು ಡೈಲಾಗ್ ಬರೆದಿದ್ದೇನೆ ಮತ್ತು ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಆ ಅನುಭವವೇ ಇಂದು ನಾನು ಒಬ್ಬ ಸ್ವತಂತ್ರ ನಿರ್ದೇಶಕನಾಗಲು ಕಾರಣವಾಯಿತು ಎಂದಿದ್ದಾರೆ.
ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರಿನಡಿಯಲ್ಲಿ ಟಿ ಜಿ ವಿಶ್ವಪ್ರಸಾದ್ ನಿರ್ಮಾಣ ಮಾಡಿರುವ ಅಧ್ಯಕ್ಷ ಇನ್ ಅಮೆರಿಕ ಚಿತ್ರವನ್ನು ನಿರ್ದೇಶನ ಮಾಡೋ ಭಾಗ್ಯ ಯೋಗಾನಂದ್ ಅವರಿಗೆ ಸಿಕ್ಕಿದೆ.