ತಡವಾಗಿ ಬಂದ 'ಗರುಡ': ಸಿದ್ಧಾರ್ಥ್ ಮಹೇಶ್ ಕೊಟ್ಟ ಕಾರಣವೇನು ಗೊತ್ತಾ?

'ಸಿಪಾಯಿ' ಬಳಿಕ ಸಿದ್ಧಾರ್ಥ್ ಮಹೇಶ್ 'ಗರುಡ' ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಎದುರು ಬರುತ್ತಿದ್ದು, ಇತ್ತೀಗಷ್ಟೇ ಬಿಡುಗಡೆಗೊಂಡ ಗರುಡ ಚಿತ್ರದ ಟ್ರೈಲರ್ ಸ್ಯಾಂಡಲ್ವುಡ್'ನಲ್ಲಿ ಸದ್ದು ಮಾಡಲು ಆರಂಭಿಸಿದೆ. 
ಗರುಡ ಚಿತ್ರ
ಗರುಡ ಚಿತ್ರ

'ಸಿಪಾಯಿ' ಬಳಿಕ ಸಿದ್ಧಾರ್ಥ್ ಮಹೇಶ್ 'ಗರುಡ' ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಎದುರು ಬರುತ್ತಿದ್ದು, ಇತ್ತೀಗಷ್ಟೇ ಬಿಡುಗಡೆಗೊಂಡ ಗರುಡ ಚಿತ್ರದ ಟ್ರೈಲರ್ ಸ್ಯಾಂಡಲ್ವುಡ್'ನಲ್ಲಿ ಸದ್ದು ಮಾಡಲು ಆರಂಭಿಸಿದೆ. 

ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿ ತೆರೆಗೆ ಬರಲು ಸಿದ್ಧಗೊಂಡಿರುವ ಚಿತ್ರದ ಮೊದಲ ಟ್ರೇಲರ್'ನ್ನು ಇತ್ತೀಚೆಗಷ್ಟೇ ನಟ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಬಿಡುಗಡೆ ಮಾಡಿದ್ದಾರೆ. 

ಚಿತ್ರ ಸೆಟ್ಟೇರಿ 2 ವರ್ಷಗಳಾದ ಬಳಿಕ ಇದೀಗ ತೆರೆಗೆ ಅಪ್ಪಳಿಸಲು ಇದೀಗ ಸಿದ್ಧಗೊಂಡಿದ್ದು, ತಡವಾಗಿದ್ದಕ್ಕೆ ಸಿದ್ಧಾರ್ಥ್ ಅವರು ಕಾರಣವೊಂದನ್ನು ನೀಡಿದ್ದಾರೆ. 

ಚಿತ್ರದಲ್ಲಿ ಗರುಡ ಪ್ರಮುಖ ಪಾತ್ರ ನಿಭಾಯಿಸಲಿದ್ದು, ಅದನ್ನು ಸೃಷ್ಟಿಸಲು ಸಾಕಷ್ಟು ಸಮಯ ಬೇಕಾಯಿತು. ಇಲದಲ್ಲೆ, ಫೈಟರ್ ಜೆಟ್ ಗಳು ಹಾಗೂ ಯುದ್ಧ ವಿಮಾನಗಳ ವಿಷಲ್ ಎಫೆಕ್ಸ್'ಗೆ ಸಾಕಷ್ಟು ಸಮಯ ಬೇಕಾಯಿತು ಎಂದು ಹೇಳಿದ್ದಾರೆ. 

ಉರಿ ಸರ್ಜಿಕಲ್ ಸ್ಟ್ರೈಕ್ ನಲ್ಲಿ ಬಳಸಲಾಗಿದ್ದ ಗರುಡನಿಗೂ ಕನ್ನಡದಲ್ಲಿ ಬರುತ್ತಿರುವ ಗರುಡ ಚಿತ್ರಕ್ಕೂ ಚಿಕ್ಕ ಲಿಂಕ್ ಇದ್ದು, ಅದೇನು ಎಂಬುದನ್ನು ಚಿತ್ರದಲ್ಲೇ ನೋಡಬೇಕೆಂದು ಚಿತ್ರ ತಂಡ ತಿಳಿಸಿದೆ. 

ಗರುಡ ಚಿತ್ರಕ್ಕೆ ಸ್ವತಃ ನಾಯಕ ಸಿದ್ಧಾರ್ಥ್ ಅವರೇ ಕಥೆ ಬರೆದಿದ್ದು, ಚಿತ್ರದಲ್ಲಿ ಸಿದ್ಧಾರ್ಥ್ ಮಹೇಶ್ ವಾಯುಪಡೆ ಮುಖ್ಯಸ್ಥರಾಗಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಆಶಿಕಾ ರಂಗನಾಥ್ ಮತ್ತು ಐಂದ್ರಿತಾ ರೈ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಇದಲ್ಲದೆ, ಖಳನಾಯಕ ಪಾತ್ರದಲ್ಲಿ ನಟ ಆದಿ ಲೋಕೇಶ್ ಕಾಳಿಸಿಕೊಂಡಿದ್ದು, ಹೆಣ್ಣುಮಕ್ಕಳು ಶಾಪ ಹಾಕುವಂತಹ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರಗಡ್ ಪೊಲೀಸ್ ಅಧಿಕಾರಿಯಾಗಿ ಶ್ರೀನಗರ ಕಿಟ್ಟಿ, ತನಿಖಾ ಸಂಸ್ಥೆಯ ಅಧಿಕಾರಿಯಾಗಿ ರಘು ದೀಕ್ಷಿತ್ ಕಾಣಿಸಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com