50ನೇ ಐಎಫ್ ಎಫ್ ಐನಲ್ಲಿ ಅಮಿತಾಬ್ ಆಯ್ದ ಚಲನಚಿತ್ರಗಳು ಸೇರಿದಂತೆ 241 ಚಲನಚಿತ್ರಗಳ ಪ್ರದರ್ಶನ

ಭಾರತದ 50ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 76 ದೇಶಗಳ 200 ಅತ್ಯುತ್ತು ಚಲನಚಿತ್ರಗಳು, 26 ವಿಶಿಷ್ಠ ಚಲನಚಿತ್ರಗಳು ಮತ್ತು ಭಾರತೀಯ ಪನೋರಮಾ ವಿಭಾಗದಲ್ಲಿ 15 ವೈಶಿಷ್ಟ್ಯ ರಹಿತ ಚಲನಚಿತ್ರಗಳನ್ನೊಳಗೊಂಡಂತೆ  241 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.

Published: 06th October 2019 06:02 PM  |   Last Updated: 06th October 2019 06:02 PM   |  A+A-


IFFI

50ನೇ ಐಎಫ್ ಎಫ್ ಐ

Posted By : Nagaraja AB
Source : UNI

ನವದೆಹಲಿ: ಭಾರತದ 50ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 76 ದೇಶಗಳ 200 ಅತ್ಯುತ್ತು ಚಲನಚಿತ್ರಗಳು, 26 ವಿಶಿಷ್ಠ ಚಲನಚಿತ್ರಗಳು ಮತ್ತು ಭಾರತೀಯ ಪನೋರಮಾ ವಿಭಾಗದಲ್ಲಿ 15 ವೈಶಿಷ್ಟ್ಯ ರಹಿತ ಚಲನಚಿತ್ರಗಳನ್ನೊಳಗೊಂಡಂತೆ  241 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಸುವರ್ಣ ಮಹೋತ್ಸವ ಆವೃತ್ತಿಯಲ್ಲಿ ಸುಮಾರು 10 ಸಾವಿರ ಚಿತ್ರ ಪ್ರೇಮಿಗಳು ಭಾಗವಹಿಸುವ ನಿರೀಕ್ಷೆಯಿದೆ. ನವೆಂಬರ್ 20 ರಿಂದ 28ರವರೆಗೆ ಗೋವಾದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಈ ವರ್ಷ ಐಎಫ್ ಎಫ್ ಐ ತನ್ನ ಸುವರ್ಣ ಮಹೋತ್ಸವ ಆವೃತ್ತಿಯನ್ನು ಆಚರಿಸುತ್ತಿದೆ.

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಅಮಿತಾಬ್ ಬಚ್ಚನ್  ಅವರು ಸಿನಿಮಾಕ್ಕೆ ನೀಡಿರುವ ಅತ್ಯುತ್ತಮ ಕೊಡುಗೆಯನ್ನು 50ನೇ ಆವೃತ್ತಿಯಲ್ಲಿ ಅವರ ಪರಿಣಾಮಕಾರಿ ಮತ್ತು ಮನರಂಜನೆಯ ಚಿತ್ರಗಳ ಪ್ಯಾಕೇಜ್ ಮೂಲಕ ಗೌರವಿಸಲಾಗುತ್ತದೆ ಮತ್ತು ಆಚರಿಸಲಾಗುವುದು ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಈ ಸಂದರ್ಭದಲ್ಲಿ 2019ರಲ್ಲಿ 50 ವರ್ಷಗಳನ್ನು ಪೂರೈಸಿದ ವಿವಿಧ ಭಾಷೆಗಳ 12 ಪ್ರಮುಖ ಚಲನಚಿತ್ರಗಳನ್ನು ಸಹ ಪ್ರದರ್ಶಿಸಲಾಗುವುದು, ಇಂಡಿಯನ್ ಪನೋರಮಾ ಐಎಫ್ ಐಎಫ್ ಐನ ಪ್ರಮುಖ ವಿಭಾಗವಾಗಿದೆ. ಇದು ವರ್ಷದ ಸಮಕಾಲೀನ ಭಾರತೀಯ ವೈಶಿಷ್ಟ್ಯ ಮತ್ತು ವೈಶಿಷ್ಟೇತರ ಚಲನಚಿತ್ರಗಳನ್ನು ಪ್ರದರ್ಶಿಸುತ್ತದೆ ಎಂದು ಅವರು ತಿಳಿಸಿದರು.

ಅಭಿಷೇಕ್ ಷಾ ನಿರ್ದೇಶನದ ಹೆಲ್ಲಾರೊ ( ಗುಜರಾತಿ ) ಚಿತ್ರವನ್ನು 2019 ಭಾರತೀಯ ಪನೋರಮಾದ ಆರಂಭಿಕ ಚಲಚಿತ್ರವಾಗಿ ಆಯ್ಕೆ ಮಾಡಲಾಗಿದೆ. ನಾನ್ ಫೀಚರ್ ವಿಭಾಗದ ತೀರ್ಪುಗಾರರ ಮಂಡಳಿಗೆ ಪ್ರಸಿದ್ಧ ಸಾಕ್ಷ್ಯಚಿತ್ರ ನಿರ್ಮಾಪಕ ರಾಜೇಂದ್ರ ಜಂಗ್ಲೆ ನೇತೃತ್ವ ವಹಿಸಿದ್ದಾರೆ. ಈ ವಿಭಾಗದಲ್ಲಿ ಭಾರತೀಯ ಪನೋರಮಾ 2019ರ ಆರಂಭಿಕ ಚಿತ್ರ ಅಶಿಶ್ ಪಾಂಡೆ ನಿರ್ದೇಶನದ ಕಾಶ್ಮೀರಿ ಚಿತ್ರ 'ನೂರ್ಹ್ ' ಈ ವರ್ಷದ ಚಲನಚಿತ್ರೋತ್ಸವದಲ್ಲಿ ರಷ್ಯಾ ಪಾಲುದಾರ ರಾಷ್ಟ್ರವಾಗಲಿದೆ ಎಂದು ಜಾವೇಡಕರ್ ಪ್ರಕಟಿಸಿದ್ದಾರೆ. 

ಮೊದಲ ಸಲ ದೃಷ್ಟಿ ಹೀನರಿಗೆ ಆಡಿಯೋ ವಿವರಣೆಯನ್ನು ಹೊಂದಿರುವ ಚಲನಚಿತ್ರಗಳನ್ನು ಸಹ ಪ್ರದರ್ಶಿಸಲಾಗುತ್ತದೆ ಎಂದು ಸಚಿವರು ಹೇಳಿದರು.

Stay up to date on all the latest ಸಿನಿಮಾ ಸುದ್ದಿ news
Poll
Rohit Sharma

ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯು ಟೀಮ್ ಇಂಡಿಯಾದ ಸಾಧನೆಯ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp