ಮೆಟ್ರೋದಲ್ಲಿ ಪ್ರಯಾಣ ಮಾಡುವ ಆಸೆ ಈಡೇರಿಸಿಕೊಳ್ಳಲು  ನಟಿ ರಚಿತಾ ರಾಮ್ ಮಾಡಿದ್ದೇನು ಗೊತ್ತೆ?

ಡಿಂಪಲ್  ಕ್ವೀನ್ ರಚಿತಾ ರಾಮ್ ಅವರು ತಮ್ಮ ಬಹುದಿನದ ಆಸೆಯನ್ನು ಈಡೇರಿಸಿಕೊಂಡಿದ್ದಾರೆ. ಅಲ್ಲದೆ ಈ ಬಗ್ಗೆ ಅವರು ಟ್ವೀಟ್ ಕೂಡ ಮಾಡಿಕೊಂಡಿದ್ದಾರೆ.
ರಚಿತಾ ರಾಮ್
ರಚಿತಾ ರಾಮ್

ಬೆಂಗಳೂರು: ಡಿಂಪಲ್  ಕ್ವೀನ್ ರಚಿತಾ ರಾಮ್ ಅವರು ತಮ್ಮ ಬಹುದಿನದ ಆಸೆಯನ್ನು ಈಡೇರಿಸಿಕೊಂಡಿದ್ದಾರೆ. ಅಲ್ಲದೆ ಈ ಬಗ್ಗೆ ಅವರು ಟ್ವೀಟ್ ಕೂಡ ಮಾಡಿಕೊಂಡಿದ್ದಾರೆ.

ರಚಿತಾ ರಾಮ್ ತಮ್ಮ ಟ್ವಿಟ್ಟರಿನಲ್ಲಿ ಮೆಟ್ರೋ ನಿಲ್ದಾಣದಲ್ಲಿ ನಿಂತು ಮುಖಕ್ಕೆ ಕಟ್ಟಿದ್ದ ಸ್ಕಾರ್ಫ್ ತೆಗೆದು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ, “ನಮ್ಮ ಬೆಂಗಳೂರು, ನಮ್ಮ ಮೆಟ್ರೋ, ನನ್ನ ಕನಸಿನ ಸವಾರಿ ಮಾಡಿಸಲು ಕರೆದುಕೊಂಡು ಹೋಗಿದ್ದ ತೇಜು ಕಾರಂತಿಗೆ ಧನ್ಯವಾದ” ಎಂದು ಬರೆದುಕೊಂಡಿದ್ದಾರೆ.

ಮೆಟ್ರೋದಲ್ಲಿ ಓಡಾಡಬೇಕು ಎಂಬುದು ರಚಿತಾ ಅವರ ಕನಸಾಗಿತ್ತು. ಹೀಗಾಗಿ ಅವರು ಸೋಮವಾರ ಹಬ್ಬದ ದಿನ ಹೋಗಿ ಮೆಟ್ರೋ ಪ್ರಯಾಣ ಮಾಡಿದ್ದಾರೆ. ರಚಿತಾ ರಾಮ್ ಮೊದಲ ಬಾರಿಗೆ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com