ಗಣೇಶ್-ರಶ್ಮಿಕಾ ಮಂದಣ್ಣ
ಗಣೇಶ್-ರಶ್ಮಿಕಾ ಮಂದಣ್ಣ

ಮತ್ತೆ 'ಚಮಕ್' ಕೊಡಲು ಬರ್ತಿದ್ದಾರೆ ಗಣೇಶ್ ಮತ್ತು ಸುನಿ ಜೋಡಿ!

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಿರ್ದೇಶಕ ಸಿಂಪಲ್ ಸುನಿ ಚಮಕ್ ಚಿತ್ರದ ಮೂಲಕ ಚಿತ್ರರಸಿಕರನ್ನು ರಂಜಿಸಿದ್ದರು. ಇದೀಗ ಈ ಜೋಡಿ ಮತ್ತೆ ಒಂದಾಗುತ್ತಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಿರ್ದೇಶಕ ಸಿಂಪಲ್ ಸುನಿ ಚಮಕ್ ಚಿತ್ರದ ಮೂಲಕ ಚಿತ್ರರಸಿಕರನ್ನು ರಂಜಿಸಿದ್ದರು. ಇದೀಗ ಈ ಜೋಡಿ ಮತ್ತೆ ಒಂದಾಗುತ್ತಿದ್ದಾರೆ. 

ಚಮಕ್ ಚಿತ್ರದಲ್ಲಿ ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯಿಸಿದ್ದು ವಿಭಿನ್ನ ಚಿತ್ರಕಥೆ ಮತ್ತು ಪ್ರೀತಿಯನ್ನು ಹೊಸದಾಗಿ ತೋರಿಸಿದ್ದರು. ಮದುವೆ ನಂತರ ಗಂಡ-ಹೆಂಡತಿಯ ಸಂಬಂಧದ ಅನ್ವೇಷಣೆ. ಪ್ರಣಯವನ್ನು ವಿಭಿನ್ನವಾಗಿ ವ್ಯಾಖ್ಯಾನಿಸಲಾಗಿತ್ತು. ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಗಳಿಕೆ ಮಾಡಿತ್ತು. 

ಇದೀಗ ಗಣೇಶ್ ಅವರಿಗೆ ಒನ್ ಲೈನ್ ಸ್ಟೋರಿಯನ್ನು ಹೇಳಿದ್ದಾರೆ. ಜೊತೆಗೆ ಚಿತ್ರದ ಬಗ್ಗೆ ಹಲವು ಸುತ್ತಿನ ಚರ್ಚೆಗಳು ನಡೆದಿದ್ದು ಮಾತುಕತೆ ಅಂತಿಮ ಹಂತದಲ್ಲಿದೆಯಂತೆ. ಒಂದೇ ವೇಳೆ ಯೋಜನೆಗೆ ಗ್ರೀನ್ ಸಿಗ್ನಲ್ ಸಿಕ್ಕರೆ ಮುಂದಿನ ದಿನಗಳಲ್ಲಿ ಚಿತ್ರದ ಕುರಿತು ಅಧಿಕೃತ ಪ್ರಕರಣ ನೀಡಲಾಗುತ್ತದೆ.

Related Stories

No stories found.

Advertisement

X
Kannada Prabha
www.kannadaprabha.com