ದಬಾಂಗ್ 3 ಇನ್ ಕನ್ನಡ: ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಲಿರೋ ಸಲ್ಮಾನ್ ಖಾನ್!

ಸಲ್ಮಾನ್ ಖಾನ್ ಬಹುನಿರೀಕ್ಷಿತ ಚಿತ್ರ "ದಬಾಂಗ್-3" ವಿಚಾರವಾಗಿ ಕನ್ನಡಿಗರಿಗೆ ಸಿಹಿ ಸುದ್ದಿಯೊಂದಿದೆ. ಇದಾಗಲೇ ಸಲ್ಮಾನ್ ಚಿತ್ರದಲ್ಲಿ ಕನ್ನಡ ನಟ ಕಿಚ್ಚ ಸುದೀಪ್ ಖಳನಟನ ಪಾತ್ರದಲ್ಲಿ ಅಭಿನಯಿಸುತ್ತಿರುವುದು ಗೊತ್ತಿದೆಯಷ್ಟೇ ಇದೀಗ ಸಿಕ್ಕಿರುವ ಮಾಹಿತಿಯಂತೆ....
ಸಲ್ಮಾನ್ ಖಾನ್
ಸಲ್ಮಾನ್ ಖಾನ್

ಸಲ್ಮಾನ್ ಖಾನ್ ಬಹುನಿರೀಕ್ಷಿತ ಚಿತ್ರ "ದಬಾಂಗ್-3" ವಿಚಾರವಾಗಿ ಕನ್ನಡಿಗರಿಗೆ ಸಿಹಿ ಸುದ್ದಿಯೊಂದಿದೆ. ಇದಾಗಲೇ ಸಲ್ಮಾನ್ ಚಿತ್ರದಲ್ಲಿ ಕನ್ನಡ ನಟ ಕಿಚ್ಚ ಸುದೀಪ್ ಖಳನಟನ ಪಾತ್ರದಲ್ಲಿ ಅಭಿನಯಿಸುತ್ತಿರುವುದು ಗೊತ್ತಿದೆಯಷ್ಟೇ ಇದೀಗ ಸಿಕ್ಕಿರುವ ಮಾಹಿತಿಯಂತೆ ಚಿತ್ರದ ಕನ್ನಡ ಅವತರಣಿಕೆಯಲ್ಲಿ ತಮ್ಮ ಭಾಗದ ಸಂಭಾಷಣೆಯನ್ನು ಸ್ವತಃ ಸಲ್ಮಾನ್ ಖಾನ್ ಅವರೇ ಡಬ್ ಮಾಡುತ್ತಿದ್ದಾರೆ. 

ಪ್ರಭುದೇವ ನಿರ್ದೇಶನದ ಚಿತ್ರದಲ್ಲಿ ಸಲ್ಮಾನ್ ಚುಲ್ಬುಲ್ ಪಾಂಡೆ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಮೂಲವೊಂದರ ಪ್ರಕಾರ, ಸಲ್ಮಾನ್ ಈಗಾಗಲೇ ಕನ್ನಡ ಕಲಿಯಲು ಪ್ರಾರಂಭಿಸಿದ್ದಾರೆ, ಮತ್ತು ಟೀಸರ್ ಮತ್ತು ಎರಡೂವರೆ ನಿಮಿಷಗಳ ಟ್ರೈಲರ್ಗಾಗಿ ಡಬ್ ಮಾಡಿದ್ದಾರೆ, ಇನ್ನು ಈ ಟ್ರೇಲರ್ ಸಧ್ಯದಲ್ಲೇ ಬಿಡುಗಡೆಗೊಳ್ಳಲಿದೆ. ಪೋಲೀಸ್ ಪಾತ್ರಧಾರಿಯಾಗಿ ಬಾಲಿವುಡ್ ಖಾನ್ ಅಭಿನಯಿಸಿರುವ ಈ ಚಿತ್ರ ಡಿಸೆಂಬರ್ 20 ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ.

ಇತ್ತೀಚೆಗೆ ಪರಭಾಷಾ ಚಿತ್ರಗಳು ಕನ್ನಡ ಡಬಿಂಗ್ ಗೊಳ್ಳುತ್ತಿರುವುದು ಹೆಚ್ಚಿದ್ದು ಇತ್ತೀಚೆಗೆ ತೆಲುಗಿನ ಚಿರಂಜೀವಿ ಅಭಿನಯದ ಸೈರಾ ನರಸಿಂಹ ರೆಡ್ಡಿ  ಚಿತ್ರದ ಕನ್ನಡ ಆವೃತ್ತಿ  ಕರ್ನಾಟಕದಾದ್ಯಂತ ಸುಮಾರು 80 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ನವೆಂಬರ್ ಒಂದಕ್ಕೆ ಹಾಲಿವುಡ್ ನ ಟರ್ಮಿನೇಟರ್ ಚಿತ್ರ ಸಹ ಕನ್ನಡದಲ್ಲಿ ತೆರೆ ಕಾಣಲಿದೆ.ಏತನ್ಮಧ್ಯೆ, ದಬಾಂಗ್ 3 ರ ಕನ್ನಡ ಆವೃತ್ತಿಯು ಬರುತ್ತಿರುವುದು  ಮತ್ತಷ್ಟು ನಿರೀಕ್ಷೆಗಳನ್ನು ಹೆಚ್ಚಿಸಿದೆ. ಸಲ್ಮಾನ್ ಖಾನ್ ಫಿಲ್ಮ್ಸ್ ಮತ್ತು ಅರ್ಬಾಜ್ ಖಾನ್ ಪ್ರೊಡಕ್ಷನ್ಸ್‌ನ ಬ್ಯಾನರ್‌ಗಳ ಅಡಿಯಲ್ಲಿ ತಯಾರಾದ ದಬಾಂಗ್ 3 ನಲ್ಲಿ ಸೋನಾಕ್ಷಿ ಸಿನ್ಹಾ ನಾಯಕಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com