ಡಿ.20ಕ್ಕೆ ಒಡೆಯ ವರ್ಸಸ್ ದಬಾಂಗ್ 3? 

ಡಿಸೆಂಬರ್ ನಲ್ಲಿ ಸ್ಟಾರ್ ಗಳ ಸಿನಿಮಾ ಪ್ರೇಮಿಗಳಿಗೆ ಹಬ್ಬವೆನ್ನಬಹುದು. ದರ್ಶನ್ ಅಭಿನಯದ ಒಡೆಯ ಚಿತ್ರ ಡಿಸೆಂಬರ್ 20ಕ್ಕೆ ಬಿಡುಗಡೆಯಾಗುವ ನಿರೀಕ್ಷೆಯಿದೆ.

Published: 14th October 2019 12:18 PM  |   Last Updated: 14th October 2019 12:18 PM   |  A+A-


Darshan

ದರ್ಶನ್

Posted By : Sumana Upadhyaya
Source : The New Indian Express

ಡಿಸೆಂಬರ್ ನಲ್ಲಿ ಸ್ಟಾರ್ ಗಳ ಸಿನಿಮಾ ಪ್ರೇಮಿಗಳಿಗೆ ಹಬ್ಬವೆನ್ನಬಹುದು. ದರ್ಶನ್ ಅಭಿನಯದ ಒಡೆಯ ಚಿತ್ರ ಡಿಸೆಂಬರ್ 20ಕ್ಕೆ ಬಿಡುಗಡೆಯಾಗುವ ನಿರೀಕ್ಷೆಯಿದೆ.


ಇದು ಬಾಲಿವುಡ್ ನ ಸಲ್ಮಾನ್ ಖಾನ್ ಅಭಿನಯದ ದಬಾಂಗ್ 3 ಚಿತ್ರದ ಜೊತೆ ಪೈಪೋಟಿ ನಡೆಸುವ ಸಾಧ್ಯತೆಯಿದೆ. ಪ್ರಭುದೇವ ನಿರ್ದೇಶನದ ದಬಾಂಗ್ 3ಯಲ್ಲಿ ಕಿಚ್ಚ ಸುದೀಪ್ ಅಭಿನಯಿಸಿದ್ದಾರೆ. ಈ ಚಿತ್ರ ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಒಟ್ಟಿಗೆ ಬಿಡುಗಡೆಯಾಗುತ್ತಿದೆ.


ಒಡೆಯ ಚಿತ್ರತಂಡದಿಂದ ಚಿತ್ರ ಬಿಡುಗಡೆ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಸೆನ್ಸಾರ್ ಮಂಡಳಿಗೆ ಚಿತ್ರ ಹೋದ ನಂತರ ಬಿಡುಗಡೆ ದಿನಾಂಕ ನಿರ್ಧಾರವಾಗಲಿದೆ ಎಂದು ನಿರ್ಮಾಪಕ ಸಂದೇಶ್ ನಾಗರಾಜ್ ಹೇಳುತ್ತಾರೆ.


ಈ ಮಧ್ಯೆ ಚಿತ್ರ ನಿರ್ದೇಶಕ ಶ್ರೀಧರ್ ಮತ್ತು ಅವರ ತಂಡ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇದೇ 15ಕ್ಕೆ ಸ್ವಿಡ್ಜರ್ಲ್ಯಾಂಡ್ ಗೆ ತೆರಳಲಿದೆ. ಇನ್ನೊಂದೆಡೆ ದರ್ಶನ್ ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಚಿತ್ರದ ಶೂಟಿಂಗ್ ನಲ್ಲಿ ಮೈಸೂರಿನಲ್ಲಿ ನಿರತರಾಗಿದ್ದಾರೆ. ನಂತರ ಒಡೆಯ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. 


ಒಡೆಯ ಚಿತ್ರದ ನಾಯಕಿ ರಾಘವಿ ತಿಮ್ಮಯ್ಯ, ಯಶಸ್, ಪಂಕಜ್, ನಿರಂಜನ್, ಸಮರ್ಥ್, ರವಿಶಂಕರ್, ದೇವರಾಜ್, ಸಾಧು ಕೋಕಿಲಾ, ಚಿಕ್ಕಣ್ಣ ಮತ್ತು ಅವಿನಾಶ್ ಚಿತ್ರದಲ್ಲಿದ್ದಾರೆ. 


ಒಡೆಯ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ಹಿನ್ನಲೆ ಸಂಗೀತ ವಿ ಹರಿಕೃಷ್ಣ ಅವರದ್ದಿದೆ. ಕೃಷ್ಣ ಕುಮಾರ್ ಕ್ಯಾಮರಾ ಕೈಚಳಕವಿದೆ.

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp