ಯಶಸ್ವಿ ಉದ್ಯಮಿ ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ ಬಯೋಪಿಕ್‌ಗೆ 'ಮೂರ್ತಿ' ಶೀರ್ಷಿಕೆ!

ಇನ್ಫೋಸಿಸ್ ಸ್ಥಾಪಕ ಎನ್ಆರ್ ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ ದಂಪತಿಯ ಅವರ ಜೀವನಾಧಾರಿತ ಚಿತ್ರ ಬಾಲಿವುಡ್ ನಲ್ಲಿ ನಿರ್ಮಾಣವಾಗುತ್ತಿದ್ದು ನಿರ್ದೇಶಕಿ ಅಶ್ವಿನಿ ಅಯ್ಯರ್ ತಿವಾರಿ ಚಿತ್ರಕ್ಕೆ ಮೂರ್ತಿ ಎಂಬ ಶೀರ್ಷಿಕೆ ಇಟ್ಟಿದ್ದಾರೆ. 
ನಾರಾಯಣ ಮೂರ್ತಿ-ಸುಧಾಮೂರ್ತಿ
ನಾರಾಯಣ ಮೂರ್ತಿ-ಸುಧಾಮೂರ್ತಿ

ಮುಂಬೈ: ಇನ್ಫೋಸಿಸ್ ಸ್ಥಾಪಕ ಎನ್ಆರ್ ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ ದಂಪತಿಯ ಅವರ ಜೀವನಾಧಾರಿತ ಚಿತ್ರ ಬಾಲಿವುಡ್ ನಲ್ಲಿ ನಿರ್ಮಾಣವಾಗುತ್ತಿದ್ದು ನಿರ್ದೇಶಕಿ ಅಶ್ವಿನಿ ಅಯ್ಯರ್ ತಿವಾರಿ ಚಿತ್ರಕ್ಕೆ ಮೂರ್ತಿ ಎಂಬ ಶೀರ್ಷಿಕೆ ಇಟ್ಟಿದ್ದಾರೆ. 

2016ರಲ್ಲಿ ನಿಲ್ ಬ್ಯಾಟರಿ ಸನ್ನಾಟಾ ಚಿತ್ರವನ್ನು ನಿರ್ದೇಶಿಸಿದ್ದ ಅಶ್ವಿನಿ 'ಮೂರ್ತಿ' ಚಿತ್ರವನ್ನು ನಿರ್ದೇಶಿಸಿದ್ದು ಚಿತ್ರಕ್ಕೆ ನಿತೇಶ್ ತಿವಾರಿ ಮತ್ತು ಮಹವೀರ್ ಜೈನ್ ಬಂಡವಾಳ ಹೂಡುತ್ತಿದ್ದಾರೆ. 

1978ರಲ್ಲಿ ಬೆಂಗಳೂರಿನಲ್ಲಿ ಸುಧಾಮೂರ್ತಿ ಮತ್ತು ನಾರಾಯಣ ಮೂರ್ತಿ ಅವರು ವಿವಾಹವಾಗಿದ್ದರು. ನಂತರ 1981ರ ಜುಲೈ 7ರಂದು ಇನ್ ಫೋಸಿಸ್ ಅನ್ನು ಸ್ಥಾಪಿಸಿದ್ದರು. 

ಇನ್ನು ಸುಧಾಮೂರ್ತಿ ಪಾತ್ರದಲ್ಲಿ ನಟಿ ಆಲಿಯಾ ಭಟ್ ಅಭಿನಯಿಸುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com