ಕಮರ್ಷಿಯಲ್ ಡೈರಕ್ಟರ್ ಗಳಿಗೆ ಚಿತ್ರೋದ್ಯಮದಲ್ಲಿ ಸ್ಥಾನವಿದ್ದೇ ಇರಲಿದೆ: 'ಭರಾಟೆ' ನಿರ್ದೇಶಕ ಚೇತನ್ ಕುಮಾರ್

"ಭರಾಟೆ" ಚಿತ್ರದ ನಿರ್ದೇಶಕ ಚೇತನ್ ಕುಮಾರ್ ಮಾಸ್ ಚಿತ್ರದ ನಿರ್ದೇಶಕರಾಗಿ ಹೆಸರಾದವರು. ಅವರು ಕಮರ್ಷಿಯಲ್ ಚಿತ್ರಗಳನ್ನು ನಿರ್ದೇಶಿಸುವುದನ್ನು ಇಷ್ಟಪಡುತ್ತಾರೆ  
ಭರಾಟೆ ಚಿತ್ರದ ದೃಶ್ಯ
ಭರಾಟೆ ಚಿತ್ರದ ದೃಶ್ಯ

"ಭರಾಟೆ" ಚಿತ್ರದ ನಿರ್ದೇಶಕ ಚೇತನ್ ಕುಮಾರ್ ಮಾಸ್ ಚಿತ್ರದ ನಿರ್ದೇಶಕರಾಗಿ ಹೆಸರಾದವರು. ಅವರು ಕಮರ್ಷಿಯಲ್ ಚಿತ್ರಗಳನ್ನು ನಿರ್ದೇಶಿಸುವುದನ್ನು ಇಷ್ಟಪಡುತ್ತಾರೆ 

"ಜನರಿಗಾಗಿ ಸಿನಿಮಾ ಮಾಡಬೇಕು. ಹಾಗಾಗಿ ನಿರ್ದೇಶಕ  ಗರಿಷ್ಠ ವೀಕ್ಷಕರನ್ನು ಚಿತ್ರಮಂದಿರಗಳಿಗೆ ಕರೆತರಬೇಕು. ಇದಕ್ಕಾಗಿ ನಾನು ಕಮರ್ಷಿಯ;ಲ್ ಹಾಗೂ ಮಾಸ್ ಪ್ರೇಕ್ಷಕರನ್ನು ನೆಚ್ಚಿಕೊಂಡಿದ್ದೇನೆ. ಅವರು ಒಪ್ಪಿಕೊಂಡರೆ ಎರಡನೇ ವಾರ ಕುಟುಂಬ ಸದಸ್ಯರು ವೀಕ್ಷಿಸಬಹುದು, ಬಳಿಕ ಬೌದ್ದಿಕ ಪ್ರೇಕ್ಷಕರು ಸಹ ಚಿತ್ರವನ್ನು ಮೆಚ್ಚಿಕೊಳ್ಲಬಹುದಾಗಿದೆ.

"ನನ್ನ ಅಭಿಪ್ರಾಯದಲ್ಲಿ ಇದೊಂದು  ರೀತಿಯ ಪ್ರೇಕ್ಷಕರನ್ನು ಆಕರ್ಷಿಸುವ  ಕಮರ್ಷಿಯಲ್ ಎಂಟರ್ಟೈನ್ಮೆಂಟ್ ಆಗಿದೆ." ಭರಾಟೆ ಕುರಿತಂತೆ ಚೇತನ್ ಕುಮಾರ್ ಹೇಳಿದ್ದಾರೆ.ಅಕ್ಟೋಬರ್ 18 ರಂದು ಬಿಡುಗಡೆಯಾಗಲಿರುವ ಈ ಚಿತ್ರವು ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಗೂ ಶ್ರೀಲೀಲಾ ಅವರ ಕಾಂಬಿನೇಷನ್ ಒಳಗೊಂಡಿದೆ.ಆಕ್ಷನ್-ಪ್ಯಾಕ್ಡ್ ಫ್ಯಾಮಿಲಿ ಎಂಟರ್‌ಟೈನರ್ ಚಿತ್ರವಾದ ಭರಾಟೆ ಸುಪ್ರೀತ್‌ ಅವರ ಚೊಚ್ಚಲ ನಿರ್ಮಾಣದ ಚಿತ್ರ.ಇದು 44 ಪ್ರಸಿದ್ಧ ಕಲಾವಿದರನ್ನು ಹೊಂದಿರುವ ಬೃಹತ್  ತಾರಾಬಳಗವನ್ನು ಸಹ ಹೊಂದಿದೆ,

ಬಹದ್ದೂರ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ಚೇತನ್, ಭರ್ಜರಿ ಬಳಿಕ ಇದೀಗ ಭರಾಟೆ ಮೂಲಕ ಮತ್ತೊಂದು ಮಾಸ್ ಹಿಟ್ ನೀಡುವ ನಿರೀಕ್ಷೆಯಲ್ಲಿದ್ದಾರೆ.ನಿರ್ದೇಶಕರ ಉದ್ದೇಶವು ವೀಕ್ಷಕರನ್ನು ರಂಜಿಸುವುದು, ಆದರೆ ಅವರು ಹೊಸ ಪ್ರೇಕ್ಷಕರನ್ನು ಸೆಳೆಯುವುದು ಖಚಿತವೆಂದು ಭಾವಿಸುತ್ತಾರೆ. "ಶ್ರೀಮುರಳಿ ಅವರ ಸಾಮಾನ್ಯ ಅಭಿಮಾನಿಗಳನ್ನು ಜತೆಗೆ ಕುಟುಂಬ ಸಮೇತವಾಗಿ ಆಗಮಿಸುವ ಪ್ರೇಕ್ಷಕರೂ ನನ್ನ ಗಮನದಲ್ಲಿದ್ದಾರೆ.ಭಾರಿ ಹೂಡಿಕೆ ಮಾಡುತ್ತಿರುವ ನಿರ್ಮಾಪಕಪಕರು ತಮ್ಮ ಹಣವನ್ನು ಮರಳಿ ಪಡೆಯುತ್ತಾರೆ ಎನ್ನುವುದನ್ನು ನಾನು ಖಚಿತಪಡಿಸುತ್ತೇನೆ" ಚೇತನ್ ಹೇಳಿದ್ದಾರೆ.

ಇನ್ನು ಬಿಡುಗಡೆಗೆ ಮುನ್ನವೇ ಭರಾಟೆ ತನ್ನ ಪಾಲಿನ ಆದಾಯವನ್ನು ಪಡೆದುಕೊಂಡಿದೆ. ಗಾಂಧಿನಗರದ ವರದಿಗಳ ಪ್ರಕಾರ, ಚಿತ್ರದ  ಆಡಿಯೋ, ಡಬ್ಬಿಂಗ್, ಡಿಜಿಟಲ್, ಸ್ಯಾಟಲೈಟ್ ಮತ್ತು ಪ್ರದೇಶವಾರು ವಿತರಣೆ ಸೇರಿ ಪ್ರಿ ರಿಲೀಸ್ ವ್ಯವಹಾರಗಳನ್ನು ಮುಗಿಸಿದೆ.

ವಾಣಿಜ್ಯ ನಿರ್ದೇಶಕರಿಗೆ ಯಾವಾಗಲೂ ಚಿತ್ರೋದ್ಯಮದಲ್ಲಿ ಸ್ಥಾನವಿದೆ ಎಂದು ನಾನು ನಂಬುತ್ತೇನೆ ಎನ್ನುವ ಚೇತನ್ ಕುಮಾರ್ ಪ್ರತಿಯೊಬ್ಬ ನಿರ್ದೇಶಕರು ಒಂದು ಕಥೆಯನ್ನು ಹೇಳಲು ನೋಡುತ್ತಿದ್ದಾರೆ. ಆದರೆ ನಿರ್ದೇಶಕರಾಗಿ ನಾನು ಗರಿಷ್ಠ ಪ್ರೇಕ್ಷಕರನ್ನು ತಲುಪುವತ್ತ ನೋಡುತ್ತೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com