ತಮಿಳಿನ 'ವಿಕ್ರಮ್ 58'ಗೆ ಶ್ರೀನಿಧಿ ಶೆಟ್ಟಿ ನಾಯಕಿ? 

ಸ್ಯಾಂಡಲ್ ವುಡ್ ನ ಭರ್ಜರಿ ಹಿಟ್ ಚಿತ್ರ ಕೆಜಿಎಫ್ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಶ್ರೀನಿಧಿ ಶೆಟ್ಟಿ ಇದೀಗ ತಮಿಳಿನಲ್ಲಿ ವಿಕ್ರಮ್ 58 ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಲು ಮಾತುಕತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಶ್ರೀನಿಧಿ ಶೆಟ್ಟಿ
ಶ್ರೀನಿಧಿ ಶೆಟ್ಟಿ

ಸ್ಯಾಂಡಲ್ ವುಡ್ ನ ಭರ್ಜರಿ ಹಿಟ್ ಚಿತ್ರ ಕೆಜಿಎಫ್ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಶ್ರೀನಿಧಿ ಶೆಟ್ಟಿ ಇದೀಗ ತಮಿಳಿನಲ್ಲಿ ವಿಕ್ರಮ್ 58 ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಲು ಮಾತುಕತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.


ಶ್ರೀನಿಧಿ ಶೆಟ್ಟಿ ಇನ್ನೂ ಚಿತ್ರಕ್ಕೆ ಸಹಿ ಹಾಕದಿದ್ದರೂ ಕೂಡ ಎಲ್ಲವೂ ಅಂದುಕೊಂಡಂತೆ ನಡೆದರೆ ಕೆಜಿಎಫ್ 2 ಮತ್ತು ವಿಕ್ರಮ್ 58 ನಲ್ಲಿ  ಏಕಕಾಲದಲ್ಲಿ ಅಭಿನಯಿಸಲಿದ್ದಾರೆ. ಈ ಹಿಂದೆ ಚಿತ್ರದ ನಾಯಕಿ ಪಾತ್ರವನ್ನು ಪ್ರಿಯಾ ಭವನಾ ಶಂಕರ್ ಮಾಡಲಿದ್ದಾರೆ ಎಂಬ ವದಂತಿ ಕೇಳಿಬರುತ್ತಿತ್ತು.


ಅಜಯ್ ಜ್ಞಾನಮುತ್ತು ನಿರ್ದೇಶನದ ವಿಕ್ರಮ್ 58ನಲ್ಲಿ ಕ್ರಿಕೆಟರ್ ಇರ್ಫಾನ್ ಖಾನ್ ಕೂಡ ಅಭಿನಯಿಸಲಿದ್ದಾರೆ. ಚಿತ್ರಕ್ಕೆ ಎ ಆರ್ ರೆಹಮಾನ್ ಸಂಗೀತ, ಶಿವಕುಮಾರ್ ವಿಜಯನ್ ಕ್ಯಾಮರಾವಿದ್ದು ಈ ತಿಂಗಳ ಆರಂಭದಲ್ಲಿ ಶೂಟಿಂಗ್ ಆರಂಭವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com