ಡಬ್ಬಿಂಗ್ ಗೆ ಹೊರಟ 'ಸೂರಿ ಪಾಪ್‌ಕಾರ್ನ್ ಮಂಕಿ ಟೈಗರ್'

ನಿರ್ದೇಶಕ ಸೂರಿ ಈಗೆಲ್ಲಿದ್ದಾರೆ? ಏನು ಮಾಡ್ತಿದ್ದಾರೆ ಎನ್ನುವ ಪ್ರಶ್ನೆಗಳಿದ್ದವರಿಗೆಲ್ಲಾ ಅವರ ಮುಂದಿನ ಚಿತ್ರದ ಕುರಿತ ಈ ಸುದ್ದಿಯಲ್ಲಿ ಉತ್ತರವಿದೆ.
ಧನಂಜಯ್
ಧನಂಜಯ್

ನಿರ್ದೇಶಕ ಸೂರಿ ಈಗೆಲ್ಲಿದ್ದಾರೆ? ಏನು ಮಾಡ್ತಿದ್ದಾರೆ ಎನ್ನುವ ಪ್ರಶ್ನೆಗಳಿದ್ದವರಿಗೆಲ್ಲಾ ಅವರ ಮುಂದಿನ ಚಿತ್ರದ ಕುರಿತ ಈ ಸುದ್ದಿಯಲ್ಲಿ ಉತ್ತರವಿದೆ.

"ಸೂರಿ ಪಾಪ್‌ಕಾರ್ನ್ ಮಂಕಿ ಟೈಗರ್" ಎಂಬ ವಿಶಿಷ್ಟ ಶೀರ್ಷಿಕೆಯೊಂದಿಗೆ ಬರುವ ಈ ಚಿತ್ರದ ಶೂಟಿಂಗ್ ಶೀಘ್ರವೇ ಪೂರ್ಣವಾಗಲಿದೆ.ಇದೀಗ ಚಿತ್ರ ಡಬ್ಬಿಂಗ್ ಸ್ಟುಡಿಯೋ ತಲುಪಿದೆ.

ಧನಂಜಯ್ ನಾಯಕನಾಗಿ, ನಿವೇದಿತಾ ಮತ್ತು ಹೊಸ ನಟ ನಟಿಯರೊಡನೆ ಅಭಿನಯಿಸಿರುವ ಈ ಚಿತ್ರ  ಮಾಫಿಯಾ ಆಧಾರಿತ ವಿಷಯವೊಂದನ್ನು ಭೂಗತ ಲೋಕದ ಸಂಬಂಧದೊಡನೆ ಜೋಡಿಸಿದೆ.

ಚಿತ್ರದ ಇತ್ತೀಚಿನ ಸ್ಟಿಲ್ ಗಳು ಪತ್ರಿಕೆಗೆ ಲಭ್ಯವಾಗಿದ್ದು  ಮೂಲಗಳ ಪ್ರಕಾರ, ನಿರ್ದೇಶಕರೇ ಚಿತ್ರದ ಎಡಿಟಿಂಗ್ ಸಹ ಮಾಡಲಿದ್ದಾರೆ.ಚಿತ್ರವನ್ನು ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡುವ ಯೋಜನೆ ಹೊಂದಿರುವ ಸೂರಿ  ದುನಿಯಾ, ಜಾಕಿ, ಅಣ್ಣಾ ಬಾಂಡ್,  ಕಡ್ಡಿಪುಡಿ, ಕೆಂಡಾಸಂಪಿಜ್, ಮತ್ತು ಟಗರುವಿನಂತೆ ಯಶಸ್ವಿ ಚಿತ್ರವಾಗಿಸಲು ಪ್ಲಾನ್ ಮಾಡಿದ್ದಾರೆ.

ನಿರ್ದೇಶಕರು ತಮ್ಮ ಮಗನಿಂದ ಶೀರ್ಷಿಕೆ ಪಡೆದಿದ್ದಾರೆ ಎನ್ನಲಾಗಿದೆ. ಸುಧೀರ್ ನಿರ್ಮಿಸಿದ ಈ ಚಿತ್ರವು ಸಪ್ತಮಿ, ಅಮೃತ, ಗೌತಮ್ ಮತ್ತು ಮೋನಿಷಾ ನದ್ಗೀರ್ ಅವರ ಪಾಲಿಗೆ ಚೊಚ್ಚಲ ಚಿತ್ರವಾಗಿರಲಿದೆ.ಶರಣ್ ರಾಜ್ ಸಂಗೀತ ಶೇಖರ್ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com