ಒಂದೇ ಇಂಡಸ್ಟ್ರಿಯಲ್ಲಿ ಇಬ್ಬರು ಆಂಗ್ರಿ ಮ್ಯಾನ್ ಇರಲು ಹೇಗೆ ಸಾಧ್ಯ ಎಂದಿದ್ದೇಕೆ ಕಿಚ್ಚ ಸುದೀಪ್?

ನನಗೆ ಒಂದು ವಿಷಯ ಅರ್ಥವಾಗ್ತಿಲ್ಲ ಒಂದೇ ಇಂಡಸ್ಟ್ರಿಯಲ್ಲಿ ಇಬ್ಬರು ಆಂಗ್ರಿ ಯಂಗ್ ಮ್ಯಾನ್ ಇರಲು ಹೇಗೆ ಸಾಧ್ಯ? ಎಂದರು ಸುದೀಪ್ ಅಭಿನಯದ ’ಮದಕರಿ’ ಚಿತ್ರದ ಡೈಲಾಗ್ ಹೇಳಿ ವಸಿಷ್ಠ ಸಿಂಹ ಅಭಿಮಾನಿಗಳನ್ನು ರಂಜಿಸಿದರೆ...
ಕಿಚ್ಚ ಸುದೀಪ್
ಕಿಚ್ಚ ಸುದೀಪ್

ಬೆಂಗಳೂರು: ನನಗೆ ಒಂದು ವಿಷಯ ಅರ್ಥವಾಗ್ತಿಲ್ಲ ಒಂದೇ ಇಂಡಸ್ಟ್ರಿಯಲ್ಲಿ ಇಬ್ಬರು ಆಂಗ್ರಿ ಯಂಗ್ ಮ್ಯಾನ್ ಇರಲು ಹೇಗೆ ಸಾಧ್ಯ? ಎಂದರು ಸುದೀಪ್ ಅಭಿನಯದ ’ಮದಕರಿ’ ಚಿತ್ರದ ಡೈಲಾಗ್ ಹೇಳಿ ವಸಿಷ್ಠ ಸಿಂಹ ಅಭಿಮಾನಿಗಳನ್ನು ರಂಜಿಸಿದ್ದಾರೆ.

ಕಂಚಿನ ಕಂಠ ಹಾಗೂ ಅಭಿನಯದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡಿರುವ ವಸಿಷ್ಠ ಸಿಂಹ ಅಭಿನಯದ ’ಕಾಲಚಕ್ರ’ ಚಿತ್ರದ ಹಾಡೊಂದರ ಟೀಸರ್ ಲಾಂಚ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮಾತನ್ನು ಹೇಳಿದ್ದಾರೆ.

ಒಂದೇ ಚಿತ್ರೋದ್ಯಮದಲ್ಲಿ ಇಬ್ಬರು ಆಂಗ್ರಿಮ್ಯಾನ್ ಗಳು ಇರಲು ಹೇಗೆ ಸಾಧ್ಯ ಈಗ ಶೀರ್ಷಿಕೆಯ ಪೈರಸಿಯೂ ನಡೆಯುವಂತಿದೆ ಸಿಕ್ಕಿರುವ ಅಲ್ಪಸ್ವಲ್ಪ ಬಿರುದುಗಳನ್ನೂ ಕಿತ್ತುಕೊಂಡರೆ ಮಾಡೋದೇನು ಎನ್ನುವ ಮೂಲಕ ವಸಿಷ್ಠ ಸಿಂಹ ಅವರ ಧ್ವನಿ, ಅಭಿನಯವನ್ನು ಮೆಚ್ಚಿಕೊಂಡರು ಧ್ವನಿ ಮುಖ್ಯವಲ್ಲ ವಸಿಷ್ಠ ಸಿಂಹ ಉತ್ತಮ ಕಲಾವಿದ ಅದು ಎಂದಿಗೂ ಮುರುಟದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.  

ನಟ ವಸಿಷ್ಠ ಎನ್ ಸಿಂಹ. ಚಿತ್ರರಂಗಕ್ಕೆ ಬಂದು ಸುಮಾರು ಆರು ವರ್ಷಗಳು ಕಳೆದಿದೆ ೧೨ಕ್ಕೂ ಹೆಚ್ಚು ಚಿತ್ರದಲ್ಲಿ ಅಭಿನಯಿಸಿರುವ ವಸಿಷ್ಠ ಪ್ರತಿ ಸಿನಿಮಾದಲ್ಲಿಯೂ ವಿಭಿನ್ನವಾಗಿರುವ ಪಾತ್ರವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ’ಕಾಲಚಕ್ರ’ದಲ್ಲಿ ೪ ವಿಭಿನ್ನ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ ಇದು ಅತ್ಯಂತ ಕ್ಲಿಷ್ಟಕರವಾದ ಸ್ಕ್ರೀನ್ ಪ್ಲೇ ತೃಪ್ತಿಕೊಟ್ಟ ಪಾತ್ರ.  

ಬದುಕಿನ ಹಲವು ಘಟನೆಗಳನ್ನು ಎದುರಿಸುವಾಗ ಶಾಂತ, ರಾಕ್ಷಸ, ನೀಚ ಸ್ವಭಾವಗಳು ಕಾಣಿಸಿಕೊಳ್ಳುತ್ತವೆ ಇದನ್ನೇ ಕಾಲಚಕ್ರದಲ್ಲಿ ಬಿಂಬಿಸಲಾಗಿದೆ ಎಂದು ವಸಿಷ್ಠ ಸಿಂಹ ತಿಳಿಸಿದರು. ಗುರುಪ್ರಸಾದ್ ಸಂಗೀತವಿದ್ದು, ಸಂತೋಷ್ ನಾಯಕ್ ಸಾಹಿತ್ಯ ಒದಗಿಸಿದ್ದಾರೆ.  ವಸಿಷ್ಠ ಸಿಂಹ, ರಕ್ಷಾ, ಬೇಬಿ ಅವಿಕ ಮೊದಲಾದವರು ತಾರಾಗಣದಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com