ಕನ್ನಡದ ಪ್ರಯೋಗಕ್ಕೆ ನೆರೆ ರಾಜ್ಯಗಳು ನಡುಗಿಹೋಗಿವೆ: ಮಾಲ್ಗುಡಿ ಡೇಸ್ ಬಗ್ಗೆ ಜಗ್ಗೇಶ್ ಮೆಚ್ಚುಗೆ

ಕನ್ನಡ ಚಿತ್ರರಂಗ ಎಂದಿಗೂ ಮರೆಯದ ನಟ ಆಟೋರಾಜ ಶಂಕರ್ ನಾಗ್ ನಿರ್ಮಿಸಿ ಪ್ರಖ್ಯಾತವಾಗಿರುವ ಧಾರಾವಾಹಿ ’ಮಾಲ್ಗುಡಿ ಡೇಸ್’ ಇದೀಗ ಅದೇ ಶೀರ್ಷಿಕೆಯ ಚಿತ್ರ ವಿಜಯ್ ರಾಘವೇಂದ್ರ ಅವರ ಅಭಿನಯದಲ್ಲಿ ನಿರ್ಮಾಣವಾಗುತ್ತಿದ್ದು, ಪೋಸ್ಟರ್ ಬಿಡುಗಡೆಯಾಗಿದೆ

Published: 22nd October 2019 01:48 PM  |   Last Updated: 22nd October 2019 02:05 PM   |  A+A-


Jaggesh

ಜಗ್ಗೇಶ್

Posted By : Shilpa D
Source : UNI

ಬೆಂಗಳೂರು: ಕನ್ನಡ ಚಿತ್ರರಂಗ ಎಂದಿಗೂ ಮರೆಯದ ನಟ ಆಟೋರಾಜ ಶಂಕರ್ ನಾಗ್ ನಿರ್ಮಿಸಿ ಪ್ರಖ್ಯಾತವಾಗಿರುವ ಧಾರಾವಾಹಿ ’ಮಾಲ್ಗುಡಿ ಡೇಸ್’ ಇದೀಗ ಅದೇ ಶೀರ್ಷಿಕೆಯ ಚಿತ್ರ ವಿಜಯ್ ರಾಘವೇಂದ್ರ ಅವರ ಅಭಿನಯದಲ್ಲಿ ನಿರ್ಮಾಣವಾಗುತ್ತಿದ್ದು, ಪೋಸ್ಟರ್ ಬಿಡುಗಡೆಯಾಗಿದೆ

ಕಿಶೋರ್ ಮೂಡಬಿದ್ರಿ ಕಥೆ, ಚಿತ್ರಕಥೆ, ಸಂಭಾಷಣೆಯೊಂದಿಗೆ ನಿರ್ದೇಶನದ ಹೊಣೆ ಹೊತ್ತಿದ್ದಾರೆ ನವರಸನಾಯಕ ಜಗ್ಗೇಶ್ ಪೋಸ್ಟರ್ ಬಿಡುಗಡೆಗೊಳಿಸಿದ್ದು, ವಯೋವೃದ್ಧನ ಶೇಡ್ ನಲ್ಲಿರುವ ವಿಜಯ್ ರಾಘವೇಂದ್ರ ನೆನಪಿನ ಬುತ್ತಿಯನ್ನು ಅವಲೋಕಿಸುವಂತಿರುವ ಈ ಮೊದಲ ಪೋಸ್ಟರ್ ತೀವ್ರ ಕುತೂಹಲ ಮೂಡಿಸಿದೆ.

ಪೋಸ್ಟರ್ ಮೆಚ್ಚಿಕೊಂಡಿರುವ ಜಗ್ಗೇಶ್, ಪ್ರತಿ ವರ್ಷ ಕನ್ನಡ ಚಿತ್ರರಂಗದಲ್ಲಿ ನೂತನ ಪ್ರಯೋಗಗಳು ನಡೆಯುತ್ತಿದ್ದು, ಈ ಪ್ರಯತ್ನ ಕಂಡ ನೆರೆ ರಾಜ್ಯಗಳು ನಡುಗಿಹೋಗಿವೆ ರಾಷ್ಟ್ರಮಟ್ಟದಲ್ಲಿ ಕನ್ನಡ ಚಿತ್ರಗಳು ಹೆಸರು ಮಾಡುತ್ತಿವೆ ’ಮಾಲ್ಗುಡಿ ಡೇಸ್’ ಕೂಡ ಯಶಸ್ವಿಯಾಗಲಿ ಪ್ರಶಸ್ತಿಗಳನ್ನು ಬಾಚಿಕೊಳ್ಳಲಿ ಎಂದರು. 

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp